ಬ್ರೇಕಿಂಗ್ ನ್ಯೂಸ್
ದೇಶ

Election : ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿಂದ ಒಂದು ಲಕ್ಷಕ್ಕೂ ಅಧಿಕ ಜಾಮೂನ್ ತಯಾರಿ

Election : ನಾಳೆ‌ ಬಿಹಾರದಲ್ಲಿ ಚುನಾವಣಾ ಫಲಿತಾಂಶ. ಅನಂತ್‌ಸಿಂಗ್ ಮನೆಯಲ್ಲಿ ಕಾರ್ಯಕರ್ತರಿಗಾಗಿ ಭರ್ಜರಿ‌ ಊಟದ ತಯಾರಿಯನ್ನು ಈಗಲೇ ಆರಂಭಿಸಿರುತ್ತಾರೆ. ಸಿಹಿ ಸಂಭ್ರಮಿಸಲು ಒಂದು ಲಕ್ಷ‌ ಜಾಮೂನು ತಯಾರಾಗುತ್ತಿದೆ. ಹಾಗೆಯೇ,‌ ಅನಂತ್‌ಸಿಂಗ್ ವಿರುದ್ಧ 20 ಕ್ಕೂ ಕ್ರಿಮಿನಲ್ ಕೇಸ್ ಗಳು ಇದ್ರೂ, ಬೆಂಬಲಿಗರು ಮಾತ್ರ ಅನಂತ್ ಸಿಂಗ್ ಗೆದ್ದೇ‌ ಗೆಲ್ಲುತ್ತಾರೆ ಎಂಬ ದೃಢ ವಿಶ್ವಾಸದಲ್ಲಿ ಸಂಭ್ರಮಾಚರಣೆಗೆ ತಯಾರಿ ಆರಂಭಿಸಿರುತ್ತಾರೆ.

ಅನಂತ್ ಸಿಂಗ್ ಅವರು 2025ರ ಬಿಹಾರ ವಿಧಾನಸಭಾ ಚುನಾವಣೆಗೆ JDU (ಜನತಾ ದಳ ಯುನೈಟೆಡ್) ಪಕ್ಷದ ಅಭ್ಯರ್ಥಿಯಾಗಿ ಮೋಕಾಮಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಮೋಕಾಮಾ ಕ್ಷೇತ್ರವು ರಾಜಕೀಯವಾಗಿ ಅತ್ಯಂತ ಸ್ಪರ್ಧಾತ್ಮಕ ಮತ್ತು ಪ್ರಭಾವಶಾಲಿ ಪ್ರದೇಶವಾಗಿದೆ. ಇವರನ್ನು ಚೋಟಾ ಸರ್ಕಾರ ಎಂದೇ ಕರೆಸಿಕೊಳ್ಳುವ ಅನಂತ್ ಸಿಂಗ್, ಕಾರ್ಯಕರ್ತರಿಗಾಗಿ ಬೃಹತ್ ಪೆಂಡಾಲ್ ಕೂಡಾ ನಿರ್ಮಾಣ‌ ಮಾಡಲಾಗಿದ್ದು, ಎಲ್ಲರಿಗೂ ಸಿಹಿ ಸುದ್ದಿಯನ್ನು ನೀಡುವ ಸಲುವಾಗಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ವರದಿಯಾಗಿವೆ.

ಇತ್ತೀಚಿನ ಘಟನೆಗೆ ಆಧಾರಿತ 2025ರ ನವೆಂಬರ್ 2ರಂದು, ಅನಂತ್ ಸಿಂಗ್ ಅವರನ್ನು ಮೋಕಾಮಾ ಪ್ರದೇಶದ ಜನ ಸುರಾಜ್ ಪಕ್ಷದ ಬೆಂಬಲಿಗನ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಯಿತು. ಈ ಪ್ರಕರಣದಿಂದಾಗಿ ಚುನಾವಣೆಗೆ ಕೆಲವೇ ದಿನಗಳ ಮುನ್ನ ಅವರ ಪ್ರಚಾರದ ಮೇಲೆ ಪರಿಣಾಮ ಬೀರಿದೆ. ಅವರ ವಿರುದ್ಧ ಶಸ್ತ್ರಾಸ್ತ್ರ ಮತ್ತು ಕೊಲೆ ಪ್ರಕರಣಗಳು ಸೇರಿದಂತೆ ಹಲವಾರು ಆರೋಪಗಳಿವೆ. ಅದಾಗ್ಯೂ ಬೆಂಬಲಿಗರ ಪ್ರೋತ್ಸಾಹದೊಂದಿಗೆ ಅನಂತ್ ಸಿಂಗ್ ಗೆದ್ದೇ ಗೆಲ್ಲುತ್ತಾರೆ ಎನ್ನುವ ದೃಢ ನಂಬಿಕೆಯಲ್ಲಿ ನಾಳೆಯ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದೆ.

ಇದನ್ನೂ ಓದಿ :BBK12: ಗಿಲ್ಲಿಗೆ ಕಾಮಿಡಿಯೇ ಬಂಡವಾಳನಾ..!? ತಮಾಷೆಯಿಂದಲೇ ಬಿಗ್‌ ಬಾಸ್‌ ಗೆಲ್ತಾರಾ!?

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/qKJ1lviMpOM?si=IFze6HwN6tuGC2to

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page