Govt. Job : ಸರಕಾರಿ ಉದ್ಯೋಗವನ್ನು ಅರಸುತ್ತಿರುವವರಿಗೆ ಸಿಹಿ ಸುದ್ದಿಯು ಇದಾಗಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ , ರಬ್ಬರ್ ಬೋರ್ಡ್ ಮತ್ತು ಆರ್.ಎಸ್.ಎಸ್.ಬಿ ಗಳಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಲಾಗಿದೆ. ಬ್ಯಾಂಕ್ ಅಧಿಕಾರಿ, ಶಿಕ್ಷಕರು, ವಿಜ್ಞಾನಿಗಳು ಸೇರಿದಂತೆ ವಿವಿಧ ಹುದ್ದೆಗಳು ಇದರಲ್ಲಿ ಒಳಗೊಂಡಿದ್ದು, ಒಟ್ಟು ಏಳು ಸಾವಿರಕ್ಕೂ ಅಧಿಕ ಅವಕಾಶಗಳಿವೆ ಎಂದು ವರದಿಯಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಎಸ್.ಎಸ್.ಬಿ ಹಾಗೂ ಪಿ.ಎನ್.ಬಿ ಅರ್ಜಿ ಸಲ್ಲಿಕೆಗೆ ನವೆಂಬರ್ 23ರಿಂದ ಡಿಸೆಂಬರ್ 1 ಮತ್ತು 6 ಕೊನೆಯ ದಿನಾಂಕವೆಂದು ವರದಿಯಾಗಿರುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಯುವ ಜನರಿಗೊಂದು ಉದ್ಯೋಗಾವಕಾಶವನ್ನು ನೀಡುವ ನಿಟ್ಟಿನಲ್ಲಿ ಈ ವರದಿಯನ್ನು ಹೊರಡಿಸಲಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಅನುಭವ ಹೊಂದಿದವರಿಗೆ ಇಲ್ಲಿ ಪ್ರತ್ಯೇಕ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಒಟ್ಟು 750 ಹುದ್ದೆಗಳಿದ್ದು, ಬ್ಯಾಂಕ್ ಅರ್ಜಿಗಳನ್ನು ಕೂಡ ಇಲ್ಲಿ ಆಹ್ವಾನಿಸಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ನವೆಂಬರ್ 23ರಂದು ಕೊನೆ ದಿನಾಂಕವೆಂದು ತಿಳಿಸಲಾಗಿದೆ. ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಹೊಂದಿದ್ದು ಆನ್ಲೈನ್ ಪರೀಕ್ಷೆ, ಭಾಷಾ ಪರೀಕ್ಷೆ ಮತ್ತು ಸಂದರ್ಶವನ್ನು ಒಳಗೊಂಡಂತೆ ಅರ್ಜಿ ಶುಲ್ಕ ಸಾವಿರದ 1180 ರೂ. ಮತ್ತು ಮೀಸಲು ವರ್ಗಕ್ಕೆ 59 ರೂ. ಎಂದು ನಿಗದಿಪಡಿಸಲಾಗಿದೆ. pnb.bank.in ಅಧಿಕೃತ ವೆಬ್ ಸೈಟ್ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ರಬ್ಬರ್ ಬೋರ್ಡ್ ನೇಮಕಾತಿಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಒಟ್ಟು 51 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಇದು ಡಿಸೆಂಬರ್ 1 ರ ಒಳಗಾಗಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕವೆಂದು ವರದಿಯಾಗಿರುತ್ತದೆ. ವಿಶೇಷವಾಗಿ ಎಸ್‌ಸಿ, ಎಸ್ ಟಿ ಮಹಿಳೆಯರು ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದು ತಿಳಿಸಿರುತ್ತಾರೆ.
ಇದನ್ನೂ ಓದಿ :Mahanati : ‘ಮಹಾನಟಿ ಸೀಸನ್ – 2’ ಚಿನ್ನದ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ವಂಶಿ ರತ್ನಕುಮಾರ್
…………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zBY4CXdK86U?si=njDy5b6YvC72mp8Y











