Dakshina Kannada : ಕೆಂಪುಕಲ್ಲನ್ನು ಮನೆ ಅಥವಾ ಕಟ್ಟಡ ನಿರ್ಮಾಣ, ಶಿಲ್ಪಕಲೆ, ಮನೆಗಳಲ್ಲಿ ಅಲಂಕಾರಿಕ ವಿನ್ಯಾಸಗಳ ಕೆಲಸಗಳನ್ನು ಮಾಡಲು ಉಪಯೋಗಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಂಪುಕಲ್ಲಿನ ಬೇಡಿಕೆಯೂ ಹೆಚ್ಚುತ್ತಿದೆ. ಆದರೀಗ ಗಣಿ ಉದ್ಯಮಿಗಳಿಗೂ, ಜನಸಾಮಾನ್ಯರಿಗೂ ಮಧ್ಯದಲ್ಲಿ ಕಲ್ಲಿನ ದರದ ಬಗ್ಗೆ ಚರ್ಚೆಗಳಾಗುತ್ತಿವೆ. ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲಿನ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದ್ದರೂ, ಗಣಿ ಉದ್ಯಮದಾರರು ಕಲ್ಲಿನ ದರವನ್ನು ರೂ. 55 ರವರೆಗೆ ಏರಿಸಿ ಸಾಮಾನ್ಯ ಜನರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಈ ಹಿಂದೆ 10 ಟನ್ ಕಲ್ಲಿಗೆ 2,564 ರೂ. ಇದ್ದು ಇದೀಗ 920 ರೂ. ಗೆ ಇಳಿಸಲಾಗಿದೆ. ಆದರೆ ಈ ಆದೇಶದ ಮೇರೆಗೂ ಗಣಿಗಾರಿಕೆಯಲ್ಲಿ ಯಾವುದೇ ಇಳಿಕೆ ಕಂಡುಬಾರದೇ ಜನರು ಕೇಳುವಾಗ ಹೆಚ್ಚುವರಿ ಧನವನ್ನೇ ಹೇಳಲಾಗುತ್ತಿದೆ. ಈ ಕಾರಣ ಗಣಿ ಮಾಲೀಕರ ವಿರುದ್ಧ ಜಿಲ್ಲಾಡಳಿತ ಪರಿಶೀಲನೆ ಮಾಡುತ್ತಿದೆ.
ಈ ಕೆಂಪು ಕಲ್ಲಿನ ಗಣಿಗಾರಿಕೆಯ ಮೊದಲು ಸೂಕ್ತ ಪ್ರದೇಶದಲ್ಲಿ ಕೆಂಪುಕಲ್ಲು ಇರುವುದನ್ನು ವಿಜ್ಞಾನಿಗಳು ಪರಿಶೀಲಿಸುತ್ತಾರೆ. ತದ ನಂತರ ಸರ್ಕಾರದಿಂದ ಅನುಮತಿ ಪಡೆದು ಗಣಿಗಾರಿಕೆಯನ್ನು ಆರಂಭಿಸಲಾಗುವುದು. ಹಾಗಾಗಿ, ಎಲ್ಲೆಂದರಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ಆರಂಭಿಸಿದ ಕೆಂಪುಕಲ್ಲಿನ ಗಣಿಗಾರಿಕೆಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿರುತ್ತದೆ. ಈ ಹಿಂದೆ ರಾಜ್ಯ ಸರಕಾರ ಗಣಿಗಾರಿಕೆ ಮೇಲೆ ವಿಧಿಸಿದ ಹೊಸ ತೆರಿಗೆಯಿಂದ ಗಣಿ ಉದ್ಯಮ ಕಂಗಾಲಾಗಿದ್ದು, ಮರಳುಗಾರಿಕೆ, ಕೆಂಪುಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ಉದ್ಯಮ ಸ್ತಬ್ದವಾಗಿತ್ತು. ಇದರಿಂದ ಮನೆ ನಿರ್ಮಾಣ, ವಸತಿ ಸಂಕೀರ್ಣ, ಕಟ್ಟಡ ಉದ್ಯಮ ವಲಯ ಸಂಕಷ್ಟಕ್ಕೆ ಸಿಲುಕಿತ್ತು. ಇದರ ವಿರುದ್ಧ ಉದ್ಯಮಿಗಳು, ಜನಪ್ರತಿನಿಧಿಗಳು ಬೀದಿಗಿಳಿದು ರಾಜಧನ ಇಳಿಸುವಂತೆ ಪ್ರತಿಭಟನೆ ನಡೆಸಿದ್ದರು.ರಾಜಧನದ ಈ ಕ್ರಮ ಖಂಡಿಸಿ ಗಣಿ ಉದ್ಯಮಿಗಳು ಗಣಿಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟಿಸಿದ್ದರು. ಅದಕ್ಕೆ ತಕ್ಕಂತೆ ಜಿಲ್ಲಾಡಳಿತವೂ ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆ, ಕೆಂಪುಕಲ್ಲು ಸಾಗಾಟ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತು. ಇದರಿಂದ ಕರಾವಳಿಯಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಂಕಿ-ಸಂಖ್ಯೆ ಪ್ರಕಾರ ಹಿಂದೆ 10 ಟನ್ (ಅಂದಾಜು 400 ಕೆಂಪುಕಲ್ಲು) ಕೆಂಪುಕಲ್ಲಿಗೆ 50 ರೂ. ರಾಯಲ್ಟಿ ಕಟ್ಟಬೇಕಾಗಿತ್ತು. ಆದರೆ ಈಗ, ರಾಜ್ಯ ಸರಕಾರ ಕೆಂಪುಕಲ್ಲು ಗಣಿಗಾರಿಕೆ ಮೇಲೆ ವಿಧಿಸಿದ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದರೂ ಕೆಂಪುಕಲ್ಲು ದರ ಮಾತ್ರ ದುಬಾರಿಯಾಗಿಯೇ ಉಳಿದಿದೆ. ಕೆಂಪುಕಲ್ಲಿನ ಗಣಿಗಾರಿಕೆದಾರರ ಹೆಚ್ಚುವರಿ ವಸೂಲಿಯಿಂದ ಜನಸಾಮಾನ್ಯರ ಸ್ಥಿತಿ ಹೇಳತೀರದು. ಇದೀಗ, ಬಡವರು, ಮಧ್ಯಮ ವರ್ಗ, ಉದ್ಯಮಿಗಳ ಪಾಲಿಗೆ ಬರೆಯಾಗಿದೆ
ಇದನ್ನೂ ಓದಿ :Chikkamagaluru: ಪೊಲೀಸ್ ಠಾಣೆಯಲ್ಲಿ ನಿಂತಿದ್ದ ಕಾರಿನಲ್ಲಿತ್ತು ಕೋಟಿ ಮೌಲ್ಯದ ಸೊತ್ತು!
….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/rHNt-vvvD9o?si=ouBPhn5iTQwNIPSm











