BBK12: ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಹಾಗೂ ಮಾಡೆಲ್ ಸೂರಜ್ ಇಬ್ಬರು ಈಗ ದೂರ ದೂರ ಆಗಿರುವುದು ಕಂಡು ಬರುತ್ತಿದೆ. ಮೊದಲು ಇಬ್ಬರು ಬಹಳ ಆತ್ಮೀಯತೆಯಿಂದ ಇದ್ದರೂ ಈಗ ಪರಸ್ಪರ ದೂರವಿದ್ದಾರೆ. ಕಿಚ್ಚನ ಮಾತಿನಿಂದ ಇಬ್ಬರೂ ಸೀರಿಯಸ್ ಆಗಿದ್ದಾರೆ.
ಇದನ್ನೂ ಓದಿ: ಭೀಕರ ಮಳೆಗೆ ರೈತರು ಕಂಗಾಲಾದ್ರೂ ಅಧಿಕಾರಿಗಳು ತಲೆ ಕೆಡಿಸ್ಕೊಂಡಿಲ್ಲ: ಬಿ.ವೈ.ವಿಜಯೇಂದ್ರ ಆಕ್ಷೇಪ!
ರಾಶಿಕಾ ಸೂರಜ್ ದೂರ ದೂರ..!
ರಾಶಿಕಾ ಶೆಟ್ಟಿ, ಸೂರಜ್ ಜೊತೆ ಸುದೀಪ್ ಅವರ ಬುದ್ಧಿವಾದ ನಂತರ ತಮ್ಮ ಆಟದ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿದ್ದಾರೆ. ನಮ್ಮ ಮಧ್ಯೆ ಏನೋ ಇದೆ ಅಂತ ಎಲ್ಲರೂ ಅಂದುಕೊಂಡದ್ದಾರೆ, ಇದರಿಂದ ನಮಗೆ ಆಟ ಆಡಲು ಕಷ್ಟವಾಗುತ್ತದೆ ಎಂದು ಇಬ್ಬರೂ ಕುಳಿತು ಮಾತನಾಡಿದ್ದಾರೆ. ಈಗ ಸುದೀಪ್ ಹೇಳಿದ ಬಳಿಕ ಇಬ್ಬರೂ ಕೂಡ ಬದಲಾಗಿದ್ದಾರೆ. ರಾಶಿಕ ಅವರು ದೊಡ್ಮನೆಯಲ್ಲಿ ತನ್ನ ಆಟವನ್ನು ಆಡೋಕೆ ಫುಲ್ ರೆಡಿಯಾಗಿದ್ದಾರೆ. ಹಾಗಾಗಿ, ಸೂರಜ್ ಜೊತೆಗೆ ಅಂತರವನ್ನು ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೇಲಿ ಮನೆಯವ್ರ ಪತ್ರ ಓದುವ ಟೈಮ್..!
ನಮ್ಮಿಬ್ಬರ ಮಧ್ಯೆ ಬೇರೆ ಸ್ಟೋರಿ ಇದೆ ಅಂದ್ರೆ ನಾ ಒಪ್ಪಲ್ಲ..ರಾಶಿಕಾ!
ನಾವು ಜಸ್ಟ್ ಫ್ರೆಂಡ್ಸ್ ಇದಕ್ಕಿಂತ ಮೇಲೆ ಏನೂ ಇಲ್ಲ ಎಂದು ರಾಶಿಕಾ ಸೂರಜ್ ಬಳಿ ಸ್ಪಷ್ಟನೆ ನೀಡಿದ್ದಾರೆ ಇದಕ್ಕೆ ಸೂರಜ್ ಓಕೆ ಅಂತ ಹೇಳಿದ್ದಾರೆ ನಮ್ಮಿಬ್ಬರ ಮಧ್ಯೆ ಬೇರೆ ಸ್ಟೋರಿ ಇದೆ ಅಂದ್ರೆ ನಾನು ಒಪ್ಪಿಕೊಳ್ಳಲ್ಲ. ಫ್ರೆಂಡ್ಶಿಪ್ ನಲ್ಲೂ ಹುಡುಗ ಹುಡುಗಿ ಕ್ಲೋಸ್ ಆಗಿರುತ್ತಾರೆ ಅದು ತಪ್ಪಲ್ಲ ಎಂದು ರಾಶಿಕಾ ಮಾತನಾಡಿದ್ದಾರೆ. ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನು ಇರ್ತೀನಿ ಎಂದು ರಾಶಿಕಾ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಸೂರಜ್ ಮೊದಲ ದಿನವೇ ರಾಶಿಕಾಗೆ ರೋಸ್ ಕೊಟ್ಟಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಗೆಳೆತನ ಬೆಳೆದಿತ್ತು. ಇಬ್ಬರೂ ಕೂಡ ಕೈ ಕೈ ಹಿಡಿದುಕೊಂಡು ಮನೆಯಲ್ಲಿ ಓಡಾಡುತ್ತಿದ್ದರು. ಒಟ್ಟಿಗೆ ಓಡಾಡುತ್ತಿದ್ದರು. ಇನ್ನು ಸುದೀಪ್ ಅವರು ಕಾಲೇಜು ಹೋಗೋರ ಲವ್ ಸ್ಟೋರಿ ರೀತಿ ಇದೆ ಎಂದು ಅನೇಕರು ಹೇಳುತ್ತಾರೆ ಎಂದು ವೇದಿಕೆಯ ಮೇಲೆ ಸೂಕ್ಷ್ಮವಾಗಿ ತಿಳಿಸಿದ್ದರು. ವೀಕೆಂಡ್ ಎಪಿಸೋಡ್ ನಲ್ಲಿ ಸೂರಜ್ ಹಾಗೂ ರಾಶಿಕಾಗೆ ಕಿಚ್ಚ ಟಾಂಗ್ ಕೊಟ್ಟು ಮಾತನಾಡಿದ್ದರು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











