ಬ್ರೇಕಿಂಗ್ ನ್ಯೂಸ್
ದೇಶ

Numerology : ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ…!

Numerology : ಸಂಖ್ಯಾಶಾಸ್ತ್ರದಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಬಹುದಾಗಿದೆ. ಕೆಲವರು ಜ್ಯೋತಿಷ್ಯರ ಬಳಿ‌ ಕೇಳಿದರೆ ಇನ್ನು ಕೆಲವರು ಮೊಬೈಲ್ ನಲ್ಲಿ ಹುಡುಕಿ ಯಾವುದೋ ಸುಳ್ಳು ಮಾಹಿತಿಯೋ ಅಥವಾ ಹಣ ನೀಡಿ ವಂಚನೆಗೊಳಗಾಗುತ್ತಾರೆ. ಆದರೆ ಇಂತ ಮೋಸ ಮಾಡುವ ವರ್ಗದವರ ಜೊತೆ ನಿಮ್ಮ ಜೀವನದಲ್ಲಿ ಇಂಥದ್ದೇ ಆಗುತ್ತದೆ ಅಂತ ಹೇಳೋದಿಕ್ಕೆ ನಿಖರ ಮಾಹಿತಿಯನ್ನು ಕೊಡುವುದಕ್ಕೆ ಕಾಲಜ್ಞಾನಿಗಳು ನಮ್ಮ ದೇಶದಲ್ಲಿ ಇನ್ನೂ ಇದ್ದಾರೆ.

ಅದರಲ್ಲಿಯೂ ಸಂಖ್ಯಾಶಾಸ್ತ್ರವು ಭಾರತೀಯರು ಅನುಸರಿಸಿಕೊಂಡು ಬಂದಿರುವ ಭವಿಷ್ಯ ಸೂಚಕದ ವಿಜ್ಞಾನವಾಗಿದೆ. ಕೆಲವರು ಇದನ್ನು ಗಣಿತ ವಿಜ್ಞಾನ ಎಂದು ಕರೆದರೆ, ಇನ್ನೂ ಕೆಲವರು ಅಂಕಿ ಅಂಶದ ಸಂಗ್ರಹಣೆ, ವ್ಯಾಖ್ಯಾನ ಎಂದು ಪರಿಗಣಿಸಿದ್ದಾರೆ. ಹಾಗೂ ಗಣಿತಶಾಸ್ತ್ರದ ಭಾಗವೆಂದೂ ಈ ಸಂಖ್ಯಾಶಾಸ್ತ್ರವನ್ನು ಹೇಳುತ್ತಾರೆ. ಈ ಶಾಸ್ತ್ರದ ಪ್ರಕಾರ, ಪ್ರತಿ ಸಂಖ್ಯೆಯು ವಿಭಿನ್ನ ಶಕ್ತಿಯನ್ನು ಹೊಂದಿರುತ್ತದೆ ಅದು ವ್ಯಕ್ತಿಯ ವ್ಯಕ್ತಿತ್ವದ ಲಕ್ಷಣಗಳು ಮತ್ತು ಅದು ಒಬ್ಬ ವ್ಯಕ್ತಿಯ ಜೀವನದ ಘಟನೆಗಳ ಮೇಲೆ ಪ್ರಭಾವ ಬೀರಬಹುದು. ನಮ್ಮ ಜೀವನ ಕೂಡಾ ಯಾವುದೋ ಅಂಕಿ ಅಂಶದ ಲೆಕ್ಕಾಚಾರದಲ್ಲೇ ನಡೆಯುತ್ತದೆ.

ಹುಟ್ಟಿದ ದಿನಾಂಕದ ಪ್ರಕಾರ ಸಂಖ್ಯಾಶಾಸ್ತ್ರವು ನಮ್ಮನ್ನು ಒಂಬತ್ತು ವಿಭಿನ್ನ ಪ್ರಕಾರಗಳಾಗಿ ವಿಂಗಡಿಸುತ್ತದೆ. 1 ರಿಂದ 9ರ ಅಂಕೆಯೇ ಇದರ ಮೂಲಾಧಾರವಾಗಿ ಪರಿಗಣಿಸಲಾಗುತ್ತದೆ. ಹಾಗೂ ನಿಮ್ಮ ಜನನ ಸಂಖ್ಯೆಯ ಜೊತೆ ಇದನ್ನು ಹೋಲಿಕೆ‌ ಮಾಡಿಯೂ ನೋಡಬಹುದಾಗಿದೆ. ಒಬ್ಬೊಬ್ಬರ ವ್ಯಕ್ತಿತ್ವ ಒಂದೊಂದು ರೀತಿ ಇರುವ ಕಾರಣ, ಹೀಗೇ ಅಂತ ಊಹೆ ಮಾಡೋದು ಕಷ್ಟ.

ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೊಬೈಲ್ ಸಂಖ್ಯೆಯ ಭವಿಷ್ಯ ಈ ರೀತಿ ಸೂಚಿಸಲಾಗಿದೆ. ಎರಡು ಅಥವಾ ಮೂರು ನಂಬರ್ ಗಳನ್ನು ಇಟ್ಟುಕೊಂಡಿರುವ ಅದೆಷ್ಟೋ ಜನರ ಮಧ್ಯೆ ಇದೇ ಎಂದು ಹೇಗೆ ಹೇಳುತ್ತೀರಿ ಅಂತ ಕೇಳಿದ್ರೆ ಇದು ನಿಮ್ಮ ಮೊದಲು ಖರೀದಿಸಿದ ನಿಮ್ಮದೇ ಮೊಬೈಲ್ ಸಂಖ್ಯೆಯಾಗಿರಬೇಕು.‌ ಇದರ ಕೊನೆಯ ಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗುವುದು. ಉದಾಹರಣೆಗೆ ಮಾಹಿತಿಯ ಪ್ರಕಾರ ;
ಕೊನೆಯ ಸಂಖ್ಯೆ 0: ಬುದ್ಧಿವಂತರು, ಕೊನೆಯ ಸಂಖ್ಯೆ 1: ಸ್ಟೈಲಿಶ್​, ಕೊನೆಯ ಸಂಖ್ಯೆ 2: ಸುಂದರರು, ಕೊನೆಯ ಸಂಖ್ಯೆ 3: ಪ್ರಾಮಾಣಿಕರು, ಕೊನೆಯ ಸಂಖ್ಯೆ 4: ಪ್ರೇಮಿಗಳು, ಕೊನೆಯ ಸಂಖ್ಯೆ 5: ಮೊಂಡುತನ ಹೆಚ್ಚು, ಕೊನೆಯ ಸಂಖ್ಯೆ 6: ಮೋಸ ಮಾಡುವವರು, ಕೊನೆಯ ಸಂಖ್ಯೆ 7: ರೊಮ್ಯಾಂಟಿಕ್​, ಕೊನೆಯ ಸಂಖ್ಯೆ 8: ಮಾಟಗಾರರು, ಕೊನೆಯ ಸಂಖ್ಯೆ 9: ಮಾನಸಿಕ ಸಮಸ್ಯೆ ಇರುವವರು.

ಇದನ್ನೂ ಓದಿ : BBK12: ಓ ಮೈ ಗಾಡ್.. ಗಿಲ್ಲಿಗೆ ಹೊಡೆದ್ರಾ ರಿಷಾ ಗೌಡ..?

……………..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/9SPfLPmVEeU?si=JAvYiJ-vPOI1z3qn

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 20

You cannot copy content of this page