ಬ್ರೇಕಿಂಗ್ ನ್ಯೂಸ್
ಕರ್ನಾಟಕ

Cloth Washing : ಹೆಚ್ಚು ಕೊಳಕಾದ ಬಟ್ಟೆಗಳಿಗೆ ಈ ನೀರು ಉತ್ತಮ‌ ಸಲಹೆ…!

Cloth Washing : ಬಟ್ಟೆ ಒಗೆಯುವಾಗ ಪ್ರತಿಯೊಬ್ಬರೂ ತಣ್ಣೀರನ್ನೇ ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಮಂದಿ ಹೊಳೆ ಬದಿ ಬಟ್ಟೆ ಒಗೆಯುವುದು ಸಾಮಾನ್ಯವಾಗಿತ್ತು. ಆದರೆ ಈಗ ವಾಷಿಂಗ್ ಮೆಷಿನ್ ಬಂದ ಮೇಲೆ ಮನುಷ್ಯ ಕೈಗಳಿಗೂ ಆರಾಮದಾಯಕವೆನಿಸಿ‌ ಬಿಟ್ಟಿದೆ. ಹಾಗಿದ್ದಾಗ ಇಲ್ಲಿ ಬಿಸಿನೀರಿನ ಉಪಯೋಗ ಮಾಡೋದು ಕಡಿಮೆ ಎಂದೇ ಹೇಳಬಹುದು. ಆದರೆ ಕೆಲವೊಮ್ಮೆ ಚಿಕ್ಕ ಮಕ್ಕಳ ಬಟ್ಟೆಗಳನ್ನು ಬಿಸಿ‌ನೀರಿನಲ್ಲಿ ಒಗೆಯಬೇಕು, ಆಗ ಸೂಕ್ಷ್ಮಾಣು ಜೀವಿಗಳು ಅಷ್ಟಾಗಿ ಸೇರಿಕೊಳ್ಳುವುದಿಲ್ಲ ನಂತರ ಬಿಸಿಲಿನಲ್ಲೇ ಆರಿಸಲು ಹಾಕಬೇಕು ಎನ್ನುತ್ತಾರೆ.

ಮಕ್ಕಳ ಬಟ್ಟೆಗಳ ಮೇಲಿನ‌ ಸೂಕ್ಷ್ಮಜೀವಿಗಳನ್ನು ಹೋಗಲಾಡಿಸಲು ಬಿಸಿನೀರು ಉತ್ತಮ :

ಹೌದು…ಬಿಸಿ ನೀರಿನಿಂದ ಬಟ್ಟೆ ಒಗೆಯುವುದರಿಂದ ಹಲವು ಪ್ರಯೋಜನಗಳಿವೆ. ಬಿಸಿ ನೀರು ಸುಲಭವಾಗಿ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಕೊಲ್ಲುತ್ತದೆ. ವಿಶೇಷವಾಗಿ ಟವೆಲ್‌ಗಳು, ಬೆಡ್‌ಶೀಟ್‌ಗಳು ಮತ್ತು ಮಕ್ಕಳ ಬಟ್ಟೆಗಳ ಮೇಲಿನ ಕೊಳಕನ್ನು ಹೋಗಲಾಡಿಸುತ್ತದೆ. ಅಲ್ಲದೇ, ಎಣ್ಣೆ, ಬೆವರು, ಜಿಡ್ಡಿನಂತಹ ಕಲೆಗಳನ್ನು ಬಿಸಿ ನೀರು ಬೇಗನೆ ತೆಗೆದು ಹಾಕುತ್ತದೆ. ಅಂದರೆ, ಹೆಚ್ಚು ಕೊಳಕಾದ ಬಟ್ಟೆಗಳಿಗೆ ಬಿಸಿ ನೀರು ಉತ್ತಮವಾಗಿದೆ. ಆದರೆ, ಕೆಲವೊಮ್ಮೆ ಬಿಸಿನೀರು ಉಪಯೋಗದಿಂದ ರೇಷ್ಮೆ, ಉಣ್ಣೆ ಮತ್ತು ಪಾಲಿಯೆಸ್ಟರ್‌ನಂತಹ ಸೂಕ್ಷ್ಮ ಬಟ್ಟೆಗಳನ್ನು ತೊಳೆದರೆ ಅವು ಹಾಳಾಗಬಹುದು. ಬಣ್ಣ ಕಳೆದುಕೊಳ್ಳಲೂ ಇದು ಕಾರಣವಾಗಬಹುದು.

ಬಟ್ಟೆಗಳು ಯಾವ ಪ್ರಕಾರದ್ದು ಎಂದು ತಿಳಿದು‌ ನೀರನ್ನು ಬಳಸಿ :

ಇನ್ನು ಕೆಲವೊಂದು ಬೆಲೆಬಾಳುವ ಬಟ್ಟೆಗಳು ಅಥವಾ ರೇಷ್ಮೆ ಬಟ್ಟೆಗಳಂತಹ ಸೂಕ್ಷ್ಮ ಉಡುಪುಗಳನ್ನು ಸುರಕ್ಷಿತವಾಗಿ ತಣ್ಣೀರಿನಲ್ಲೇ ತೊಳೆಯುವುದು ಉತ್ತಮ. ಇದು ಬಟ್ಟೆಯನ್ನು ಮಾಸದಂತೆ ರಕ್ಷಿಸುತ್ತದೆ. ಆದರೆ, ಚಳಿಗಾಲದಲ್ಲಿ ಮುಖ್ಯವಾಗಿ ಬೆಚ್ಚಗಿನ ನೀರನ್ನು ಬಟ್ಟೆ ಒಗೆಯಲು ಬಳಸುವುದು ಉತ್ತಮ ಆಯ್ಕೆ‌ ಎಂದು ಹೇಳಲಾಗಿದೆ. ಚಳಿಗಾಲದಲ್ಲಿ ಸರಿಯಾಗಿ ಬಟ್ಟೆಗಳು ಬಿಸಿಲಿಗೆ ತಾಕದ ಕಾರಣ ಬ್ಯಾಕ್ಟೀರಿಯಾಗಳು ಹಾಗೆಯೇ ಇರುತ್ತವೆ. ಹಾಗಾಗಿ, ಬೆಚ್ಚಗಿನ ನೀರನ್ನು ಚಳಿಗಾಲದಲ್ಲಿ ಬಟ್ಟೆ ಒಗೆಯಲು ಉಪಯೋಗಿಸಬಹುದು. ಆದರೆ, ಬಟ್ಟೆಯು ಯಾವ ಪ್ರಕಾರದಲ್ಲಿ ಎಂದು ತಿಳಿದುಕೊಂಡು ನೀರನ್ನು ಬಳಸುವುದು ಉತ್ತಮ.

ಇದನ್ನೂ ಓದಿ :BBK12: ಗಿಲ್ಲಿ ನಟನ ಕಾಮಿಡಿ ಮೋಡಿಗೆ ಜನ ಗೆಲ್ಲಿಸ್ತಾರಾ…?

……

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/9SPfLPmVEeU?si=0EJTs3JoeI_UmIgW

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page