ಬ್ರೇಕಿಂಗ್ ನ್ಯೂಸ್
ಕರ್ನಾಟಕ

ದಿ ಡೆವಿಲ್ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ! ಫ್ಯಾನ್ಸ್‌ ವೈಟಿಂಗ್‌ !

ಸಿನಿಮಾ: Tulu Times | ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ  ಡಿಸೆಂಬರ್ 11 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಇದೀಗ ಈ ಸಿನಿಮಾದ ಟ್ರೈಲರ್  ರಿಲೀಸ್‌ಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 5ರಂದು ಬೆಳಗ್ಗೆ 10:05ಕ್ಕೆ ಡೆವಿಲ್ ಟ್ರೈಲರ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ:‌ ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಜಾನ್ವಿ..! ಹೊರಬರಲು ಅಸಲಿ ಕಾರಣ ಏನು..?

ಡಿಬಾಸ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌!

ಈಗಾಗಲೇ ಡೆವಿಲ್ ಸಿನಿಮಾದ ಎರಡು ಹಾಡುಗಳು ರಿಲೀಸ್ ಆಗಿದ್ದು, ಚಾಲೆಂಜಿಂಗ್ ಸ್ಟಾರ್  ದರ್ಶನ್ ಅವರ ಧ್ವನಿಯಲ್ಲಿ ʼನಾನ್‌ ಬರ್ತಿದ್ದೀನಿ ಚಿನ್ನʼ ಅಂತ ಟ್ರೈಲರ್ ರಿಲೀಸ್ ದಿನಾಂಕ ಅನೌನ್ಸ್ ಮಾಡಿರೋದು ದರ್ಶನ್ ಫ್ಯಾನ್ಸ್‌ಗೆ ಖುಷಿಕೊಟ್ಟಿದೆ.  ಟ್ರೈಲರ್‌ಗಾಗಿ ದರ್ಶನ್ ಫ್ಯಾನ್ಸ್ ಕಾತುರತೆಯಿಂದ ಕಾಯುತ್ತಿದ್ದಾರೆ. ಡೆವಿಲ್ ಚಿತ್ರದ ಟ್ರೈಲರ್ ಟೀಸರ್ ಈ ರೀತಿ ಇದೆ. ಇನ್ನು ಇಡೀ ಟ್ರೈಲರ್ ಹೇಗೆ ಇರುತ್ತದೆ ಅನ್ನುವ ಕುತೂಹಲವೂ ಇದೆ.

ಇದನ್ನೂ ಓದಿ: ಅಬ್ಬಬ್ಬಾ ಗಗನಕ್ಕೇರಿದ ನುಗ್ಗೇಕಾಯಿ ಬೆಲೆ..ಕೆ.ಜಿ. 500 ರಿಂದ 600 ರೂಪಾಯಿಗೆ ಏರಿಕೆ !

ದರ್ಶನ್ ಅಭಿನಯದ ಹೈ ವೋಲ್ಟೇಜ್ ಸಿನಿಮಾ ದಿ ಡೆವಿಲ್ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಹೀಗಿರುವಾಗ ದರ್ಶನ್ ಅವರ ಸೋಷಿಯಲ್ ಮೀಡಿಯಾದಿಂದ ಕುತೂಹಲ ಕೆರಳಿಸುವ ಪೋಸ್ಟ್‌ ಒಂದು ವೈರಲ್ ಆಗಿದೆ. ಪ್ರಸ್ತುತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಅವರ ಎಕ್ಸ್ ಖಾತೆಯಿಂದ ಕಾಯುವಿಕೆ ಬಹುತೇಕ ಅಂತ್ಯವಾಗಿದೆ. ನಾಳೆ ಬೆಳಗ್ಗೆ 10:05ಕ್ಕೆ ಟ್ರೈಲರ್ ಅನೌನ್ಸ್‌ಮೆಂಟ್ ಎಂಬ ಪೋಸ್ಟ್ ವೈರಲ್ ಆಗಿದೆ. ಒಂದು ಗಂಟೆ ಹಿಂದಷ್ಟೇ ಮಾಡಿದ ಈ ಪೋಸ್ಟ್‌ನ್ನು ಈಗಾಗಲೇ 78 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ. ಸೂಪರ್​ ಹಿಟ್ ಸಿನಿಮಾ ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಡೆವಿಲ್  ಟೀಸರ್ ಹಾಗೂ ಹಾಡುಗಳಿಂದಲೇ ಡೆವಿಲ್ ಸಿನಿಮಾ ಸದ್ದು ಮಾಡಿದೆ.

ಇದನ್ನೂ ಓದಿ: ಮೈ ನಡುಗುವ ಚಳಿಯನ್ನು ಎಂಜಾಯ್‌ ಮಾಡುತ್ತಿರುವ ಕರುನಾಡ ಜನ..!

The Devil trailer release date fixed! Fans are waiting! – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page