ಸುಳ್ಯ : Tulu Times l ರಂಗ ಮಯೂರಿ ಕಲಾಶಾಲೆ (ರಿ.) ಸುಳ್ಯ ವತಿಯಿಂದ, ಲಯನ್ಸ್ ಕ್ಲಬ್ ಸುಳ್ಯ, ಸಂದ್ಯಾರಶ್ಮಿ ಸಾಹಿತ್ಯ ಸಂಘ, ಪ್ರೆಸ್ ಕ್ಲಬ್ ಸುಳ್ಯ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಜೇಸಿಐ ಪಯಸ್ವಿನಿ, ಜೇಸಿಐ ಸುಳ್ಯ ಸಿಟಿ, ರೋಟರಿ ಕ್ಲಬ್ ಸುಳ್ಯ ಹಾಗೂ ಕಲಾ ಪ್ರಕಾಶ ಪ್ರತಿಷ್ಠಾನ (ರಿ.), ಮುಂಬೈ ಸಂಸ್ಥೆಗಳ ಸಹಯೋಗದಲ್ಲಿ ‘ಭೃಗು ಶಾಪ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಜುಲೈ 19, 2026 (ಭಾನುವಾರ) ಸಂಜೆ 3.30ಕ್ಕೆ ರಂಗ ಮಯೂರಿ ಕಲಾಶಾಲೆ (ರಿ.), ಸುಳ್ಯದಲ್ಲಿ ನಡೆಯಲಿದೆ.

ಖ್ಯಾತ ಕವಿ ಶ್ರೀಧರ ಡಿ. ಎಸ್. ಅವರ ಕೃತಿಯಾದ ಭೃಗು ಶಾಪ ಪ್ರಸಂಗದ ತಾಳಮದ್ದಳೆಯಲ್ಲಿ ಸುಬ್ರಾಯ ಸಂಪಾಜೆ ಭಾಗವತಿಕೆಯನ್ನು ನಿರ್ವಹಿಸಲಿದ್ದು, ಶ್ರೀಧರ ಪಡ್ರೆ ಮದ್ದಳೆ ಹಾಗೂ ವೇಣು ಮಾಂಬಾಡಿ ಚೆಂಡೆ ವಾದನ ನೀಡಲಿದ್ದಾರೆ.
ಅರ್ಥಧಾರಿಗಳಾಗಿ ಜಬ್ಬಾರ್ ಸಮೊ ಸಂಪಾಜೆ (ದೇವೇಂದ್ರ), ದಿನೇಶ್ ಶೆಟ್ಟಿ, ಕಾವಳಕಟ್ಟೆ (ಖ್ಯಾತಿ), ಪ್ರಸಾದ್ ಭಟ್ಕಳ (ವಿಷ್ಣು), ಜಯಾನಂದ ಸಂಪಾಜೆ (ಭೃಗು) ಹಾಗೂ ಜಯಪ್ರಕಾಶ ಗುಂಡಿ (ತಮಾಸುರ) ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಆಸಕ್ತರು ಹಾಗೂ ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾರ್ಯಕ್ರಮದ ಸಂಘಟಕರು, ಸುಳ್ಯ ರಂಗಮಯೂರಿ ಕಲಾಶಾಲೆಯ ನಿರ್ದೇಶಕರು ಲೋಕೇಶ್ ಊರುಬೈಲ್ ಆಹ್ವಾನಿಸಿದ್ದಾರೆ.

‘Bhrigu Shapa’ Yakshagana Talamaddale in Sullia on July 19 – ತುಳುಟೈಮ್ಸ್

ಇದನ್ನೂ ಓದಿ :ಸುಳ್ಯ: ಗಾಂಧಿನಗರದಲ್ಲಿ ಸಂಚಾರಕ್ಕೆ ತೀವ್ರ ತೊಂದರೆ, ತಕ್ಷಣ ದುರಸ್ತಿಗೆ ಸಾರ್ವಜನಿಕರ ಒತ್ತಾಯ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/epU3Pcjby3U











