ಬ್ರೇಕಿಂಗ್ ನ್ಯೂಸ್
ಸುಳ್ಯ

ಸಂಪಾಜೆ ಚೆಂಬು ಗ್ರಾಮದಲ್ಲಿ 9 ಕಾಡಾನೆಗಳ ದಾಳಿ: ಕೃಷಿ ಬೆಳೆ ನಾಶ

ಸಂಪಾಜೆ : Tulu Times l ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿಯ ಚೆಂಬು ಗ್ರಾಮದ ಊರುಬೈಲು ಪ್ರದೇಶದಲ್ಲಿ ಸೋಮವಾರ ಮುಂಜಾನೆ ಸುಮಾರು ಒಂಬತ್ತು ಕಾಡಾನೆಗಳ ಹಿಂಡು ನುಗ್ಗಿ ಕೃಷಿ ಬೆಳೆಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ. ಸುಮಾರು ಹದಿನೈದು ದಿನಗಳಿಂದಲೇ ಈ ಕಾಡಾನೆಗಳ ಕಾಟದಿಂದ ಬೇಸತ್ತಿದ್ದ ಕೃಷಿಕರು, ಜು.13 ರಂದು ಅರಣ್ಯಾಧಿಕಾರಿಗಳ ತಂಡದಿಂದ ಈ‌ ಕಾಡಾನೆಗಳನ್ನು ಕಾಡಿಗೆ ಓಡಿಸುವ ಸಂದರ್ಭದಲ್ಲಿ ಒಟ್ಟು 9 ಆನೆಗಳಿರುವುದು ಕಂಡುಬಂದಿದೆ.

ಕಾಡಿನಿಂದ ಆಹಾರ ಅರಸಿ ಬಂದ ಆನೆಗಳ ಹಿಂಡು ಅಡಿಕೆ, ಬಾಳೆ, ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಉಂಟುಮಾಡಿದೆ. ಹಲವೆಡೆ ಕೃಷಿ ಜಮೀನುಗಳಿಗೆ ನುಗ್ಗಿದ ಆನೆಗಳು ಬೆಳೆಗಳನ್ನು ತುಳಿದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ರಾತ್ರಿ ವೇಳೆ ಆನೆಗಳು ಗ್ರಾಮಕ್ಕೆ ನುಗ್ಗುತ್ತಿರುವುದರಿಂದ ರೈತರು ತಮ್ಮ ತೋಟಗಳನ್ನು ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಹಾನಿಯ ಪ್ರಮಾಣವನ್ನು ಅಂದಾಜಿಸಿ ಸರ್ಕಾರದ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಆನೆಗಳನ್ನು ಮರಳಿ ಕಾಡಿಗೆ ಓಡಿಸಬೇಕು ಹಾಗೂ ಬೆಳೆ ನಷ್ಟಕ್ಕೆ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಗ್ರಾಮಸ್ಥರು ಮತ್ತು ರೈತರು ಆಗ್ರಹಿಸಿದ್ದಾರೆ.

Attack by 9 wild elephants in Sampaje-Chembu village: Agricultural crops destroyed – ತುಳುಟೈಮ್ಸ್

ಇದನ್ನೂ ಓದಿ :ದೇವಸ್ಥಾನ ಹುಂಡಿಗಳಿಗೆ ಬಿಗಿ ಭದ್ರತೆ: ಸಿಸಿಟಿವಿ, ಕ್ಯೂಆರ್ ಕೋಡ್ ಕಡ್ಡಾಯ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=zIGkniAtjHhk8IFL

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 8

You cannot copy content of this page