ಬ್ರೇಕಿಂಗ್ ನ್ಯೂಸ್
ಪುತ್ತೂರು

Puttur : ಪರ್ಪುಂಜದಲ್ಲಿ ನಡೆದ ಕಾರು, ರಿಕ್ಷಾ ಅಪಘಾತ : ಇಬ್ಬರು ಮೃತ್ಯು

Puttur : ಪುತ್ತೂರಿನಿಂದ ತಿಂಗಳಾಡಿಗೆ ಕಡೆ ಬರುತ್ತಿದ್ದ ರಿಕ್ಷಾ ಸುಳ್ಯ ದಿಕ್ಕಿನಿಂದ ಪುತ್ತೂರಿನತ್ತ ಬರುತ್ತಿದ್ದ ಕಾರು ವಿರುದ್ದ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿರುತ್ತದೆ. ಕುಂಬ್ರ ಸಮೀಪ ಪರ್ಪುಂಜ ಕೊಯಿಲತ್ತಡ್ಕ ಅಬೋಡ್ ಹಾಲ್ ಬಳಿ ನಿನ್ನೆ ಸಂಜೆ (ನವೆಂಬರ್ 01) ನಡೆದ ಘಟನೆಯಲ್ಲಿ ಬೊಳ್ವಾರ್ ಕಾಪಿಕಾಡ್ ನಿವಾಸಿ ಝಲೈಕಾ ಹಾಗೂ ಅವರ ಮೊಮ್ಮಗಳು ಶಾಝಾ ಫಾತಿಮಾ ಮೃತಪಟ್ಟಿರುತ್ತಾರೆ.

ಕಾರು ಚಾಲಕ ಕುಂಬ್ರದ ಬರೋಡ ಬ್ಯಾಂಕ್ ಉದ್ಯೋಗಿ, ಬಸ್ ನ್ನು ಓವರ್‌ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಎದುರಿನಿಂದ ಬಂದ ರಿಕ್ಷಾಗೆ ಡಿಕ್ಕಿ ಹೊಡೆದಿರುತ್ತಾರೆ. ಈ ಘಟನೆಯಲ್ಲಿ ರಿಕ್ಷಾ ಚಾಲಕ ಹನೀಫ್ ರವರ ಮಗಳು ಶಾಝಾ ಫಾತಿಮಾ (6 ವರ್ಷ) ಸ್ಥಳದಲ್ಲೇ ಮೃತಪಟ್ಟಿದ್ದು, ಬೊಳ್ವಾ‌ರ್ ಕಾಪಿಕಾಡ್ ನಿವಾಸಿ, ಭಾರತ್ ಬೀಡಿ ಕಂಪನಿಯ ಉದ್ಯೋಗಿ ಅಬ್ದುಲ್ಲಾ ಕುಂಞ ರವರ ಪತ್ನಿ ಝುಲೈಕಾ (ಪುತ್ತೂರು RTO ಕಛೇರಿಯ ಉದ್ಯೋಗಿ ಜಬ್ಬಾರ್, ಗಲ್ಫ್ ಉದ್ಯೋಗಿ ರಿಯಾಝ್ ಹಾಗೂ ಇಟ್ಬಾಲ್ ರವರ ತಾಯಿ) ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿರುತ್ತಾರೆ.

ಗಾಯಗೊಂಡಿರುವವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Somwarpet: ಇಂದು ಅರಣ್ಯಾಧಿಕಾರಿಗಳು- ರೈತ ಮುಖಂಡರ ಧಿಡೀರ್‌ ಸಭೆ..!

……………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MrzC6aEF_X4?si=_S_krioNBhMVuCQt

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 11

You cannot copy content of this page