ಬ್ರೇಕಿಂಗ್ ನ್ಯೂಸ್
ಕರ್ನಾಟಕ

ದೋಸೆಯ ರಾಜಧಾನಿ ಯಾವುದು? ಇಲ್ಲಿದೆ ವೆರೈಟಿ ದೋಸೆಗಳು

ಆಹಾರ : Tulu Times l ಭಾರತದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾದ ‘ದೋಸೆ’ ತನ್ನ ರುಚಿ ಮತ್ತು ವಿಶಿಷ್ಟ ಫರ್ಮೆಂಟೆಡ್ ಸುವಾಸನೆಯಿಂದ ಎಲ್ಲರ ಮನ ಗೆದ್ದಿದೆ. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಾಗುವ ಈ ತಿಂಡಿ ದೇಶದಾದ್ಯಂತ ಮಾತ್ರವಲ್ಲ, ಜಗತ್ತಿನಾದ್ಯಂತ ಪ್ರಸಿದ್ಧಿಯನ್ನೂ ಗಳಿಸಿದೆ. ಆದರೆ ಈ ದೋಸೆಯ ಸಂಸ್ಕೃತಿಗೆ ಒಂದು ನಗರ ವಿಶೇಷವಾಗಿ ಹೆಸರಾಗಿದೆ.

ಕರ್ನಾಟಕದ ರಾಜಧಾನಿಯಾದ ಬೆಂಗಳೂರನ್ನು ದೋಸೆಯ ಕ್ಯಾಪಿಟಲ್ ಆಫ್ ದ ವರ್ಲ್ಡ್ ಎಂದು ಕರೆಯಲಾಗುತ್ತದೆ. ಈ ನಗರದಲ್ಲಿ ಸಾಂಪ್ರದಾಯಿಕದಿಂದ ಹಿಡಿದು ಫ್ಯೂಷನ್ ದೋಸೆಯವರೆಗಿನ ಅನೇಕ ವಿಧಗಳ ದೋಸೆಗಳು ಲಭ್ಯವಿವೆ.

ಬಸವನಗುಡಿ ಮತ್ತು ಜಯನಗರ ಪ್ರದೇಶಗಳು ಪ್ರಸಿದ್ಧ ದೋಸೆಯ ಹೋಟೆಲ್‌ಗಳಿಗೆ ಹೆಸರುವಾಸಿಯಾಗಿದ್ದು, ಪ್ರತಿದಿನ ಸಾವಿರಾರು ಜನರನ್ನು ಆಕರ್ಷಿಸುತ್ತವೆ. ಬೆಂಗಳೂರಿನ ಆಹಾರ ಸಂಸ್ಕೃತಿ ದೋಸೆ ಕೇವಲ ತಿಂಡಿಯಲ್ಲ, ಒಂದು ಗುರುತಾಗಿ ರೂಪಿಸಿದೆ.

ಭಾರತದಲ್ಲಿನ ದೋಸೆಯ ವಿಧಗಳು ; ಭಾರತದಲ್ಲಿ ಡೋಸಾ ಹಲವು ರೂಪಗಳಲ್ಲಿ ತಯಾರಿಸಲಾಗುತ್ತದೆ: ಮಸಾಲಾ ದೋಸೆ, ಪ್ಲೇನ್ ದೋಸೆ, ರವಾ ದೋಸೆ, ಸೆಟ್ ದೋಸೆ, ಪೇಪರ್ ದೋಸೆ, ಈರುಳ್ಳಿ ದೋಸೆ, ಪ್ರತಿ ದೋಸೆ ತನ್ನದೇ ಆದ ರುಚಿ, ಗಾತ್ರ ಮತ್ತು ತಯಾರಿಕಾ ವಿಧಾನವನ್ನು ಹೊಂದಿದೆ.

ದೋಸೆ ತಯಾರಿಸಲು ಬಳಸುವ ಪ್ರಮುಖ ಪದಾರ್ಥಗಳು:

ಅಕ್ಕಿ,‌ ಉದ್ದಿನ ಬೇಳೆ, ಎಣ್ಣೆ ಅಥವಾ ತುಪ್ಪ.‌ ಈ ಮಿಶ್ರಣವನ್ನು ನೆನೆಸಿ, ಅರೆದು, ಫರ್ಮೆಂಟೇಶನ್ ಮಾಡಿದ ನಂತರ ತವಾದಲ್ಲಿ ಬೇಯಿಸಲಾಗುತ್ತದೆ. ಎಲ್ಲರೂ ಹೆಚ್ಚಾಗಿ ಕರ್ನಾಟಕದಲ್ಲಿ ಮುಖ್ಯವಾಗಿ ಇಷ್ಟ ಪಡುವ ಮಸಾಲಾ ದೋಸೆಯಲ್ಲಿ ಆಲೂಗಡ್ಡೆ ಪಲ್ಯ ತುಂಬಿ, ಚಟ್ನಿ ಮತ್ತು ಸಾಂಬಾರ್ ಜೊತೆಗೆ ನೀಡಲಾಗುತ್ತದೆ.

ಬೆಂಗಳೂರು ಮಾತ್ರವಲ್ಲ, ಚೆನ್ನೈ ಮತ್ತು ಹೈದರಾಬಾದ್ ನಗರಗಳಲ್ಲೂ ದೋಸೆ ಬಹಳ ಜನಪ್ರಿಯ. ಆದರೆ ರುಚಿ, ವೈವಿಧ್ಯ ಮತ್ತು ಸಾಂಪ್ರದಾಯಿಕ ವಿಧಾನಗಳಿಗಾಗಿ ಬೆಂಗಳೂರು ವಿಶೇಷ ಸ್ಥಾನ ಪಡೆದಿದೆ. ದೋಸೆ ಕೇವಲ ಆಹಾರವಲ್ಲ, ಅದು ದಕ್ಷಿಣ ಭಾರತದ ಸಂಸ್ಕೃತಿಯ ಒಂದು ಭಾಗ. ಅದರ ವೈವಿಧ್ಯಮಯ ರೂಪಗಳು ಮತ್ತು ಅನನ್ಯ ರುಚಿಯಿಂದ ಬೆಂಗಳೂರು ದೋಸೆಯ ರಾಜಧಾನಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

What is the capital of dosa? Here are the variety of dosa – ತುಳುಟೈಮ್ಸ್

ಇದನ್ನೂ ಓದಿ :ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ನಿಂದ ಬೆಂಕಿ : ಪ್ರಯಾಣದ ಸಮಯ ಇಲೆಕ್ಟ್ರಾನಿಕ್ಸ್ ವಸ್ತುಗಳು ಅಪಾಯ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=4IrD6AoypgH_fLs-

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 166

You cannot copy content of this page