ಬೆಂಗಳೂರು: Tulu Times l ಆನ್‌ಲೈನ್ ಮ್ಯಾಟ್ರಿಮೋನಿಯಲ್ ಆ್ಯಪ್‌ಗಳ ಮೂಲಕ ನಡೆಯುತ್ತಿರುವ ಮೋಸ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಶಾದಿ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನು ತನ್ನನ್ನು ಆರ್ಮಿ ಮ್ಯಾನ್ ಎಂದು ಹೇಳಿಕೊಂಡು ಮಹಿಳೆಯೊಬ್ಬಳಿಂದ ₹1.75 ಲಕ್ಷ ಹಣ ವಂಚಿಸಿರುವ ಘಟನೆ ನಡೆದಿದೆ.
ಮಹಿಳೆಗೆ ಪರಿಚಯವಾದ ಶಿವರಾಜ್ ಎಂಬ ವ್ಯಕ್ತಿ ತನ್ನನ್ನು ಸೇನೆಯಲ್ಲಿ ಕೆಲಸ ಮಾಡುವವನಾಗಿ ಪರಿಚಯಿಸಿಕೊಂಡಿದ್ದಾನೆ. ವಿಶ್ವಾಸ ಗಳಿಸಿದ ನಂತರ ವಿವಿಧ ನೆಪಗಳನ್ನು ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಆತನ ಸಂಪರ್ಕ ಕಡಿತವಾಗುತ್ತಿದ್ದಂತೆ ಮಹಿಳೆಗೆ ಮೋಸವಾಗಿರುವುದು ಗೊತ್ತಾಗಿದೆ. ಮೋಸ ಅರಿತ ತಕ್ಷಣ ಮಹಿಳೆ 1930 ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳನ್ನು ಹೋಲ್ಡ್ ಮಾಡಿರುವುದು ವರದಿಯಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೊಮ್ಮನಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ವೇಳೆ ಶಿವರಾಜ್ ಎಂಬ ವ್ಯಕ್ತಿ ಇಂತಹ ಮೋಸಗಳಲ್ಲಿ ತೊಡಗಿರುವ ದೊಡ್ಡ ಗ್ಯಾಂಗ್‌ನ ಭಾಗವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಈಗ ಆರೋಪಿ ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೇ ರೀತಿಯಲ್ಲಿ ಇನ್ನೂ ಹಲವಾರು ಮಹಿಳೆಯರನ್ನು ಟಾರ್ಗೆಟ್ ಮಾಡಿರುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ.
Shaadi app fraud: Rs 1.75 lakhs in the name of ‘Army man’ – ತುಳುಟೈಮ್ಸ್
ಇದನ್ನೂ ಓದಿ :‘ಟೆರರಿಸ್ಟ್’ ಹೇಳಿಕೆ ವಿವಾದ: ಪ್ರೊಫೆಸರ್ ಅಮಾನತು, ವ್ಯಾಪಕ ಆಕ್ರೋಶ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/XqT2zKOY-4o?si=cWc2Kkp0C_E8ZDLE











