ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಎಲ್‌ಪಿಜಿ ಗ್ರಾಹಕರಿಗೆ ಇ-ಕೆವೈಸಿ: ಬಯೋಮೆಟ್ರಿಕ್ ದೃಢೀಕರಣ ಕುರಿತು ಕೇಂದ್ರದ ಸ್ಪಷ್ಟನೆ

ರಾಜ್ಯ : Tulu Times l ದೇಶದ ಎಲ್‌ಪಿಜಿ ಗ್ರಾಹಕರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಕಡ್ಡಾಯ ಎಂಬ ಸುದ್ದಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದೆ. ಸಚಿವಾಲಯದ ಪ್ರಕಾರ, ಎಲ್‌ಪಿಜಿ ಬಳಕೆದಾರರಿಗೆ ಇ-ಕೆವೈಸಿ ಹೊಸ ನಿಯಮವಲ್ಲ. ಈಗಾಗಲೇ ತಮ್ಮ ಗುರುತು ಪರಿಶೀಲನೆ ಪೂರ್ಣಗೊಳಿಸಿದ ಗ್ರಾಹಕರು ಮತ್ತೆ ಈ ಪ್ರಕ್ರಿಯೆ ಮಾಡುವ ಅಗತ್ಯವಿಲ್ಲ. ಆದರೆ, ಇನ್ನೂ ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರಿಗೆ ಮಾತ್ರ ಇದು ಅನಿವಾರ್ಯವಾಗಿದೆ.

ಏಕೆ ಇ-ಕೆವೈಸಿ? ಈ ಕ್ರಮದ ಮುಖ್ಯ ಉದ್ದೇಶ:

ಸಬ್ಸಿಡಿ ಸರಿಯಾದ ವ್ಯಕ್ತಿಗಳಿಗೆ ತಲುಪಿಸುವುದು, ದುರುಪಯೋಗ ತಡೆಯುವುದು,‌ ಪಶ್ಚಿಮ ಏಷ್ಯಾ ಪ್ರದೇಶದ ಅಂತರಾಷ್ಟ್ರೀಯ ಪರಿಸ್ಥಿತಿಗಳ ನಡುವೆ ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸುವುದಾಗಿದೆ.

ಮನೆಯಲ್ಲೇ ಇ-ಕೆವೈಸಿ ಮಾಡಲು ಅವಕಾಶ

ಗ್ರಾಹಕರು ಈಗ ತಮ್ಮ ಮೊಬೈಲ್‌ ಮೂಲಕ ಮನೆಯಲ್ಲೇ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಇದಕ್ಕಾಗಿ: ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂ ಈ ಕಂಪನಿಗಳ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಜೊತೆಗೆ Aadhaar FaceRD app ಮೂಲಕ ಮುಖ ಗುರುತು (Face Authentication) ಪ್ರಕ್ರಿಯೆ ನಡೆಸಬೇಕು.

ಇ-ಕೆವೈಸಿ ಮಾಡುವ ವಿಧಾನ

ಎಲ್‌ಪಿಜಿ ಕಂಪನಿಯ ಅಧಿಕೃತ ಆಪ್ ಡೌನ್‌ಲೋಡ್ ಮಾಡಿ

Aadhaar FaceRD ಆಪ್ ಇನ್‌ಸ್ಟಾಲ್ ಮಾಡಿ

ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಎಲ್ ಪಿಜಿ ಐಡಿ ಮೂಲಕ ಲಾಗಿನ್ ಆಗಿ,‌ e-KYC / Aadhaar Authentication ಆಯ್ಕೆ ಮಾಡಿ, ಆಧಾರ್ ವಿವರಗಳನ್ನು ನಮೂದಿಸಿ, FaceRD ಆಪ್ ಮೂಲಕ ಮುಖ ಗುರುತು ಪರಿಶೀಲನೆ ಮಾಡಿ,‌ ಪ್ರಕ್ರಿಯೆ ಪೂರ್ಣಗೊಳಿಸಿ ಸಲ್ಲಿಸಿ.

ಮಾಡದಿದ್ದರೆ ಏನು?

ಅಧಿಕಾರಿಗಳ ಪ್ರಕಾರ, ಇ-ಕೆವೈಸಿ ಪೂರ್ಣಗೊಳಿಸದಿದ್ದರೆ: LPG ಸಿಲಿಂಡರ್ ರಿಫಿಲ್ ಸೇವೆಯಲ್ಲಿ ವ್ಯತ್ಯಯ, ಸಬ್ಸಿಡಿ ತಾತ್ಕಾಲಿಕ ಸ್ಥಗಿತ. ಆದ ಕಾರಣ, ಅರ್ಹ ಗ್ರಾಹಕರು ಶೀಘ್ರದಲ್ಲೇ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಸಾಮಾನ್ಯವಾಗಿ ಇ-ಕೆವೈಸಿ ಒಂದು ಆರ್ಥಿಕ ವರ್ಷದವರೆಗೆ ಮಾನ್ಯವಾಗಿದ್ದು, ನಂತರ ಕೆಲವು ಸಂದರ್ಭಗಳಲ್ಲಿ ಮರುನವೀಕರಣ ಅಗತ್ಯವಾಗಬಹುದು. ಈ ಕ್ರಮದಿಂದ ಸರಕಾರಿ ಸಬ್ಸಿಡಿ ವ್ಯವಸ್ಥೆ ಇನ್ನಷ್ಟು ಪಾರದರ್ಶಕವಾಗಲು ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

E-KYC for LPG customers: Centre clarifies on biometric authentication – ತುಳುಟೈಮ್ಸ್

ಇದನ್ನೂ ಓದಿ : ಮಾರ್ಚ್ 17, 2026ರ ದಿನಭವಿಷ್ಯ: ಇಂದಿನ ರಾಶಿಫಲ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/B1QF8L9fyqM?si=Jx8keYUfwSMAHJWE

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page