ಬ್ರೇಕಿಂಗ್ ನ್ಯೂಸ್
ಕರ್ನಾಟಕ

ದೇವಿ ಮಹಾತ್ಮೆ ಸಿನಿಮಾಗೆ ಮುಹೂರ್ತದ‌‌ ಸಂಭ್ರಮ..ಎಲ್ಲಿ ಸೆಟ್ಟೇರಿತು ನಾಗರಾಜ್ ಸೋಮಯಾಜಿ ಚಿತ್ರ?

ಸಿನಿಮಾ: Tulu Times | ಮರ್ಯಾದೆ ಪ್ರಶ್ನೆ ಸಿನಿಮಾ ಸಾರಥಿ ನಾಗರಾಜ್ ಸೋಮಯಾಜಿ ಹೊಸ ಪ್ರಯತ್ನ‌ ದೇವಿ‌ ಮಹಾತ್ಮೆ.‌ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರ ಇಂದು‌ ಸೆಟ್ಟೇರಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿನ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.‌

ಈ ಸಂದರ್ಭದಲ್ಲಿ ದೇವಿ ಮಹಾತ್ಮೆ ಚಿತ್ರದ‌ ನಿರ್ಮಾಪಕ ಗಾಂಧಿರಾಜನ್, ಅನುವಂಶಿಕ ಧರ್ಮದರ್ಶಿಗಳಾದ ಶ್ರೀಯುತ ಸಚ್ಚಿದಾನಂದ ಚಾತ್ರರು, ನಿರ್ದೇಶಕ‌ ನಾಗರಾಜ್ ಸೋಮಯಾಜಿ, ಚಿತ್ರದ ‌ಛಾಯಾಗ್ರಾಹಕರಾದ ಎಸ್ ಕೆ ರಾವ್ ಭಾಗಿಯಾಗಿದ್ದರು. ದೇವಿ ಮಹಾತ್ಮೆ ಚಿತ್ರಕ್ಕೆ‌ ಒಂದೊಳ್ಳೆ ತಂಡ ರೆಡಿಯಾಗಿದೆ. ನಾಗರಾಜ ಸೋಮಯಾಜಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ‌ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಸಾಥ್ ಕೊಟ್ಟಿದ್ದಾರೆ.

ಚಿತ್ರಕ್ಕೆ ಎಸ್.‌ಕೆ ರಾವ್ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಕಾಮಿಡಿ ಥ್ರಿಲ್ಲರ್ ಕಂಟೆಂಟ್ ಹೊಂದಿರುವ ದೇವಿ ಮಹಾತ್ಮೆ ಸಿನಿಮಾ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಕುಂದಾಪುರದ ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದ್ದು, ಅತಿ ಹೆಚ್ಚು ತಾರಾಬಳಗ ಚಿತ್ರದಲ್ಲಿ ಕೆಲಸ‌ ಮಾಡಲಿದೆ.

Devi Mahatme movie Muhurta celebrations .. where is Nagaraj Somayaji film set?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 209

You cannot copy content of this page