ಕರ್ನಾಟಕ: Tulu Times | ನಾವು ತಿನ್ನೋ ಚಿಪ್ಸ್ ಸಿಗರೇಟ್‌ಗಿಂತಲೂ ಡೇಂಜರ್ ಅಂತ ಸಂಶೋಧನೆಯಲ್ಲಿ ಶಾಕಿಂಗ್ ಸತ್ಯವೊಂದು ಬಯಲಾಗಿದೆ. ನಿಜಕ್ಕೂ ಇದನ್ನು ಕೇಳಿದ ಚಿಪ್ಸ್ ಪ್ರಿಯರು ಶಾಕ್ ಆಗಿದ್ದಾರೆ.
ಹೌದು, ಪ್ಯಾಕೇಜ್ ಮಾಡಿದ ಆಹಾರಗಳು ಕೇವಲ ಹಸಿವು ನೀಗಿಸುವ ಪದಾರ್ಥಗಳಲ್ಲ, ಬದಲಾಗಿ ಅವು ಸಿಗರೇಟ್‌ಗಳಂತೆ ಹಾನಿಕಾರದ ಅಂತ ಸಂಶೋಧನೆಯೊಂದು ಎಚ್ಚರಿಸಿದೆ. ದಿ ಮಿಲ್ಬ್ಯಾಂಕ್ ಕ್ವಾರ್ಟರ್ಲಿ ಅಧ್ಯಯನದ ಪ್ರಕಾರ, ಸಿಗರೇಟ್‌ಗಳನ್ನು ಮೆದುಳಿಗೆ ನಿಕೋಟಿನ್ ಅನ್ನು ವೇಗವಾಗಿ ತಲುಪಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಮ್ಮನ್ನು ಪದೇ ಪದೇ ಆ ಆಹಾರವನ್ನು ತಿನ್ನುವಂತೆ ಮಾಡುತ್ತದೆ. ಹುಳಿ ಸಿಹಿ ಪದಾರ್ಥಗಳು ಒಂದೊಂದಾಗಿಯೇ ನಮ್ಮ ದೇಹಕ್ಕೆ ಸೇರಿ ದೇಹದ ಕೊಬ್ಬನ್ನೂ ಕೂಡ ಹೆಚ್ಚಿಸುತ್ತದೆ.
ಯುಪಿಎಫ್‌ಗಳನ್ನು ‘ಹೆಡೋನಿಕ್ ಎಂಜಿನಿಯರಿಂಗ್’ ಮೂಲಕ ತಯಾರಿಸಲಾಗುತ್ತದೆ. ಅಂದರೆ, ಇವುಗಳ ಕುರುಕಲುತನ (Crunch), ಕ್ರೀಮಿ ವಿನ್ಯಾಸ ಮತ್ತು ರುಚಿ ಮೆದುಳಿನ ಆನಂದ ಕೇಂದ್ರಗಳನ್ನು ಅತಿಯಾಗಿ ಉತ್ತೇಜಿಸುತ್ತವೆ.ಇದರ ಪರಿಣಾಮವಾಗಿ, ಹಸಿವಿಲ್ಲದಿದ್ದರೂ ನಾವು ಅತಿಯಾಗಿ ತಿನ್ನುತ್ತೇವೆ. 2025-26 ರ ಆರ್ಥಿಕ ಸಮೀಕ್ಷೆ ಪ್ರಕಾರ,ದೇಶದಲ್ಲಿ ಅಲ್ಟ್ರಾ-ಸಂಸ್ಕರಿಸಿದ ಆಹಾರಗಳ ಮಾರುಕಟ್ಟೆ 2009 ರಿಂದ 2023 ರ ಅವಧಿಯಲ್ಲಿ ಶೇಕಡಾ 150 ಕ್ಕಿಂತ ಹೆಚ್ಚು ಬೆಳೆದಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ ಬೊಜ್ಜಿನ ಸಮಸ್ಯೆ ಎರಡು ಪಟ್ಟು ಹೆಚ್ಚಾಗುತ್ತಿದೆ.
Chips are more dangerous than cigarettes! How do you know..?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess










