ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಪ್ಪಿನಂಗಡಿ: ಅಕ್ರಮವಾಗಿ ಮರಳು ತೆಗೆದು ದಾಸ್ತಾನು..30 ಟನ್ ಮರಳು ವಶ !

ಉಪ್ಪಿನಂಗಡಿ:Tulu Times | ನೇತಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡುತ್ತಿದ್ದ  ಕುರಿತು ಮಾಹಿತಿ ಪಡೆದ ಹಿನ್ನೆಲೆ ಪೊಲೀಸರಿಂದ ದಾಳಿ ಮಾಡಲಾಯಿತು. ಈ ವೇಳೆ 30 ಟನ್ ಮರಳನ್ನು ವಶಕ್ಕೆ ಪಡೆಯಲಾಯಿತು.

ಇದನ್ನೂ ಓದಿ: ‘ಬೆಂಗಳೂರು ಚಲೋ’ ಫೆ.19: ಬೇಡಿಕೆ ಈಡೇರಿಸದಿದ್ದರೆ ಫೆ.20ರಿಂದ ರಾಜ್ಯಾದ್ಯಂತ ಬಸ್ ಸ್ಥಗಿತ ಎಚ್ಚರಿಕೆ

ಪುತ್ತೂರು ತಾಲೂಕು, ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಪೊಲೀಸರು ಮರಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಉಪ ನಿರೀಕ್ಷಕರಾದ ಸುತೇಶ್ ಕೆ ಪಿ ರೌಂಡ್ಸ್ ಕರ್ತವ್ಯದಲ್ಲಿದಾಗ  ಮಧ್ಯಾಹ್ನದ ವೇಳೆ ನೇತ್ರಾವತಿ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡುವುದು ಗಮನಕ್ಕೆ ಬಂದಿದೆ. ಹೀಗಾಗಿ, ಇಬ್ಬರು ಪಂಚರೊಂದಿಗೆ 2. 50ಕ್ಕೆ ಈ ಸಾಕ್ಷ್ಯ ಮೂಲಕ ವಿಡಿಯೋ ಮಾಡಿಕೊಂಡು ಸ್ಥಳಕ್ಕೆ ಹೋದಾಗ ಹಿಂದಿಯಲ್ಲಿ ಜೈನುದ್ದೀನ್ ಧೃವರ ನಿರ್ದೇಶನದಂತೆ ಮರಳು ಸಂಗ್ರಹಿಸುತ್ತಿದ್ದರು. ಸುಮಾರು 30 ಟನ್ ನಷ್ಟು ಮರಳು ಶೇಖರಿಸಿರುವುದು ಗೊತ್ತಾಗಿದೆ.  ದೋಣಿ-1, ಹಾರೆ-4, ಕಬ್ಬಿಣದ ಬಕೇಟ್ ಗಳು-11, ಪ್ಲಾಸ್ಟಿಕ್ ಬಕೆಟ್ ಗಳು-10 ಇನ್ನು ಸರಕಾರದ ಅನುಮತಿ ಇಲ್ಲದೇ ಸರಕಾರಿ ಜಾಗದಿಂದ ನದಿಯಿಂದ ಮರಳು ಕಳ್ಳತನ ಮಾಡಿ ಅಕ್ರಮ ದಾಸ್ತಾನು ಮಾಡಿರುವುದು ದೃಢಪಟ್ಟಿದೆ.

Uppinangady: Illegal sand extraction and storage… 30 tons of sand seized!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page