ನವದೆಹಲಿ: Tulu Times l ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ (ಫೆಬ್ರವರಿ 16, 2026) ರಾಷ್ಟ್ರ ರಾಜಧಾನಿಯ ‘ಭಾರತ ಮಂಡಪಂ’ನಲ್ಲಿ ನಡೆದ ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ 2026 ಅನ್ನು ಉದ್ಘಾಟಿಸಿದರು. ಈ ಸಮಿಟ್ ಮೂಲಕ ಜವಾಬ್ದಾರಿಯುತ ಮತ್ತು ಸಮಾವೇಶಾತ್ಮಕ ಕೃತಕ ಬುದ್ಧಿಮತ್ತೆ (AI) ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಅವರು ಹೈಲೈಟ್ ಮಾಡಿದರು.
ಜಾಗತಿಕ ನಾಯಕರ ಸಮಾಗಮ ;
ಈ ಮಹತ್ವದ ಸಮಾರಂಭಕ್ಕೆ ವಿಶ್ವದ ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಗೂಗಲ್ ಸಿಇಒ ಸುಂದರ್ ಪಿಚೈ, ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಸೇರಿದಂತೆ ಬ್ರೆಜಿಲ್, ಫ್ರಾನ್ಸ್ ಸೇರಿದಂತೆ ಸುಮಾರು 20 ದೇಶಗಳ ನಾಯಕರು ಹಾಗೂ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ಫೆಬ್ರವರಿ 16ರಿಂದ 20ರವರೆಗೆ ಸಮಿಟ್ ;
ಫೆಬ್ರವರಿ 16ರಿಂದ 20ರವರೆಗೆ ನಡೆಯುವ ಈ ಸಮಿಟ್‌ನಲ್ಲಿ3 ,250ಕ್ಕೂ ಹೆಚ್ಚು ವಕ್ತಾರರು, 500ಕ್ಕೂ ಹೆಚ್ಚು ಚರ್ಚಾ ಅಧಿವೇಶನಗಳು ನಡೆಯಲಿವೆ. ಯುಕೆ, ದಕ್ಷಿಣ ಕೊರಿಯಾ ಮತ್ತು ಫ್ರಾನ್ಸ್‌ನಲ್ಲಿ ನಡೆದ ನಂತರ ಇದು ನಾಲ್ಕನೇ AI ಸಮಿಟ್ ಆಗಿದ್ದು, ಗ್ಲೋಬಲ್ ಸೌತ್ ದೇಶದಲ್ಲಿ ನಡೆಯುತ್ತಿರುವ ಮೊದಲ ಸಮಿಟ್ ಎಂಬ ವಿಶೇಷತೆ ಹೊಂದಿದೆ.
ಪ್ರಧಾನಿ ಮೋದಿ ಅವರು ಭಾರತವು AI ಪರಿವರ್ತನೆಯ ಮುಂಚೂಣಿಯಲ್ಲಿ ನಿಂತಿದೆ ಎಂದು ಹೇಳಿ, ದೇಶದ ಅಭಿವೃದ್ಧಿಯ ಜೊತೆಗೆ ಜವಾಬ್ದಾರಿಯುತ ಬಳಕೆಯನ್ನೂ ಒತ್ತಿ ಹೇಳಿದರು. ವಿಶ್ವದ ನಾಯಕರನ್ನು, ಉದ್ಯಮ ಕ್ಷೇತ್ರದ ಮುಖಂಡರನ್ನು, ಸಂಶೋಧಕರನ್ನು ಮತ್ತು ತಂತ್ರಜ್ಞಾನ ಪ್ರಿಯರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮಹತ್ವದ ಕಾರ್ಯಕ್ರಮ ಇದು, ಎಂದು ಅವರು ತಿಳಿಸಿದ್ದಾರೆ.
India AI Impact Summit 2026 inaugurated: Another step towards the vision of a developed India – ತುಳುಟೈಮ್ಸ್
ಇದನ್ನೂ ಓದಿ : ಪುತ್ತೂರು ಕಾಲೇಜು ವಿದ್ಯಾರ್ಥಿನಿಯರಿಂದ ಪ್ರತಿಭಟನೆ : ಎಂಎಲ್‌ಎ ಎಲ್ಲಿ ?
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/wrBMy_DIHWs?si=lg42gc2lCGzrTLkn











