ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಜೈ” ಚಿತ್ರ ಜೀ5ನಲ್ಲಿ ಬಿಡುಗಡೆ: ಜೀ5ನ ಮೊದಲ‌ ತುಳು ಚಿತ್ರ

ಸಿನಿಮಾ: Tulu Times | ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾದ ಜೀ5 ಇದೀಗ “ಜೈ” ಎಂಬ ಕನ್ನಡ-ತುಳು ಚಿತ್ರವನ್ನು ಫೆಬ್ರವರಿ 6ರಿಂದ ಪ್ರಸಾರ ಮಾಡಲಿದೆ.

ತುಳುನಾಡಿನ ಸಾಮಾಜಿಕ -ಸಾಂಸ್ಕೃತಿಕ ಛಾಯೆಯನ್ನು ಹೊಂದಿರುವ “ಜೈ” ಚಿತ್ರವನ್ನು ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುತ್ತಾರೆ. ಇದೊಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದು ಸತ್ಯ ಎಂಬ ಸಿಂಹಬೆಟ್ಟು ಹಳ್ಳಿಯ ವ್ಯಕ್ತಿಯ ಕಥೆಯಾಗಿರುತ್ತದೆ. ತನ್ನ ಸಮುದಾಯದ ಸಮಸ್ಯೆಗಳನ್ನು ಎತ್ತಿ ಹಿಡಿಯವ ಅವನು,‌ಅವುಗಳನ್ನು ಬಗೆಹರಿಸಲು ಮಾಡುವ‌ ಹೋರಾಟ,‌ ಮುಂತಾದವುಗಳನ್ನು ಚಿತ್ರ ಬಿಚ್ಚಿ ಇಡಲಿದೆ.

ಚಿತ್ರದಲ್ಲಿ ರೂಪೇಶ್ ಶೆಟ್ಟಿಯೊಡನೆ,‌ರಾಜ್ ದೀಪಕ್ ಶೆಟ್ಟಿ, ಅದ್ವಿತಿ ಶೆಟ್ಟಿ, ಅರವಿಂದ್ ಬೋಲಾರ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ್ ವಮಂಜೂರ್ ಮುಂತಾದವರು ನಟಿಸಿರುತ್ತಾರೆ. ಚಿತ್ರದಲ್ಲಿ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಿರುವುದು
ಹೈಲೈಟ್ ಆಗಿದೆ. “ಜೈ” ಚಿತ್ರ ಸುನೀಲ್ ಶೆಟ್ಟಿಯವರ ಮೊದಲ ತುಳು ಚಿತ್ರವಾಗಿದೆ. ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಚಿತ್ರಿಸಿರುವ “ಜೈ” ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನಗಳನ್ನು ಕಂಡು ಎಲ್ಲರ ಮನೆ ಮಾತಾಗಿದೆ. ಭಾಷೆಯ ಗೆರೆಯನ್ನು ದಾಟಿ ಎಲ್ಲರ ಕಣ್ಮನ ಸೆಳೆದಿರುವ ಈ ಚಿತ್ರವು ಇದೀಗ ಜೀ5ನಲ್ಲಿ ಬಿಡುಗಡೆ ಆಗುತ್ತಿದೆ.

ಚಿತ್ರದ ನಿರ್ದೇಶಕ, ನಾಯಕ ನಟ ರೂಪೇಶ್ ಶೆಟ್ಟಿ ಮಾತನಾಡಿ, “ಈ ಚಿತ್ರವು ನಮ್ಮ ಮಣ್ಣಿನ ಕಥೆಯನ್ನು ಹೇಳುತ್ತದೆ. ದಕ್ಷಿಣ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಮುಂತಾದವುಗಳನ್ನು ಚಿತ್ರ ಒಳಗೊಂಡಿದೆ. ಇದು ನನ್ನ ಬದುಕಿಗೆ ಬಹಳ ಹತ್ತಿರವಾದ ಕಥೆ ಆಗಿದ್ದು, ಇದು ಕನ್ನಡ ಹಾಗೂ ತುಳುವಿನಲ್ಲಿ ಜೀ5ನಲ್ಲಿ ಬಿಡುಗಡೆ ಆಗುತ್ತಿರುವುದು ಮತ್ತೊಂದು ಪ್ರಮುಖ ಸಂಗತಿಯಾಗಿದೆ.

ಚಿತ್ರದ ಬಗ್ಗೆ ಮಾತನಾಡಿದ ಬಾಲಿವುಡ್ ನಟ ಸುನೀಲ್ ಶೆಟ್ಟಿ,‌ “ಈ ಚಿತ್ರವನ್ನು ಒಪ್ಪಿಕೊಳ್ಳಲು ನನಗೆ ಪ್ರೇರಣೆಯಾಗಿದ್ದು ಈ ಚಿತ್ರ ತಂಡದ ಪ್ರಾಮಾಣಿಕತೆ ಮತ್ತು ಈ‌ ಕಥೆಗಿರುವ ಶಕ್ತಿ. ತುಳು ಸಿನಿಮಾ, ಸಂಸ್ಕೃತಿಯನ್ನು ಮೆರೆಯುತ್ತದೆ. ಇಂತಹ ಒಂದು ವಿಶೇಷವಾದ ಚಿತ್ರವು ಜೀ5ನಲ್ಲಿ ಬಿಡುಗಡೆ ಆಗುವುದರಿಂದ ಭಾಷೆಯ ಗೆರೆಯನ್ನು ದಾಟಿ ಎಲ್ಲರ ಗಮನ ಸೆಳೆಯಲಿದೆ ಎಂಬುದು ಮತ್ತೊಂದು ಪ್ರಮುಖ ಅಂಶವಾಗಿದೆ” ಎಂದರು.
“ಜೈ” ಚಿತ್ರವು ಜೀ5ನಲ್ಲಿ ಫೆಬ್ರವರಿ 6ರಿಂದ ಪ್ರಸಾರ ಆಗಲಿದೆ.

ಜೀ5 ಕಿರುಪರಿಚಯ!

ಜೀ5 ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿದ್ದು, ಬಹುಭಾಷಾ ಕಥೆಗಳನ್ನು ಇಡೀ ಪ್ರಪಂಚಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಇದು ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) ಅವರ ಡಿಜಿಟಲ್/ ಓ ಟಿ ಟಿ (OTT) ಮಾಧ್ಯಮವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಮರಾಠಿ, ಇಂಗ್ಲಿಷ್ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರಗಳನ್ನು ಪ್ರಸಾರ ಮಾಡುತ್ತದೆ.

“Jai” movie released on Zee5: Zee5’s first Tulu movie: ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page