ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಹೆಚ್ಚು ಕುಂಬಳಕಾಯಿ ಬೀಜ ಸೇವನೆ ಆರೋಗ್ಯಕ್ಕೆ ಹಾನಿಕಾರಕ: ತಜ್ಞರ ಎಚ್ಚರಿಕೆ

ಆರೋಗ್ಯ : Tulu Times | ಕುಂಬಳಕಾಯಿ ಬೀಜಗಳು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ “ಸೂಪರ್ ಸ್ನ್ಯಾಕ್” ಆಗಿದ್ದರೂ, ಅವನ್ನು ಅತಿಯಾಗಿ ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಪ್ರೋಟೀನ್, ಮ್ಯಾಗ್ನೀಶಿಯಂ, ಜಿಂಕ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಈ ಬೀಜಗಳು ಸಾಮಾನ್ಯವಾಗಿ ಆರೋಗ್ಯಕರ ಆಹಾರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆದರೆ, ಮಿತಿಮೀರಿದ ಸೇವನೆಯು ಲಾಭಕ್ಕಿಂತ ಹಾನಿಯೇ ಹೆಚ್ಚು ಮಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಜೀರ್ಣಕ್ರಿಯೆ ಮೇಲೆ ದುಷ್ಪರಿಣಾಮ
ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತದೆ. ಅಮೆರಿಕದ ಕ್ಲೀವ್‌ಲ್ಯಾಂಡ್ ಕ್ಲಿನಿಕ್ ವರದಿ ಪ್ರಕಾರ, ಅತಿಯಾದ ಫೈಬರ್ ಸೇವನೆಯಿಂದ ಹೊಟ್ಟೆ ಊದುವುದು, ಗ್ಯಾಸ್ಟಿಕ್, ಹೊಟ್ಟೆನೋವು ಹಾಗೂ ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ತೂಕ ಹೆಚ್ಚುವ ಭೀತಿ
ಪೋಷಕಾಂಶಗಳ ಜೊತೆಗೆ ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚಿನ ಕ್ಯಾಲೊರಿಗಳೂ ಇರುತ್ತವೆ. ಸುಮಾರು 100 ಗ್ರಾಂ ಬೀಜಗಳಲ್ಲಿ 560 ಕ್ಯಾಲೊರಿಗಳು ಇರುವುದರಿಂದ, ನಿಯಮಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗಿ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ದಿನಕ್ಕೆ 1–2 ಟೇಬಲ್ ಸ್ಪೂನ್ ಪ್ರಮಾಣವೇ ಸಾಕು ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ.

ಉಪ್ಪು ಹಾಕಿದ ಬೀಜಗಳಿಂದ ರಕ್ತದೊತ್ತಡದ ಅಪಾಯ
ಬಜಾರಿನಲ್ಲಿ ಲಭ್ಯವಿರುವ ರೋಸ್ಟ್ ಮಾಡಿದ ಹಾಗೂ ಉಪ್ಪು ಹಾಕಿದ ಕುಂಬಳಕಾಯಿ ಬೀಜಗಳಲ್ಲಿ ಸೋಡಿಯಂ ಪ್ರಮಾಣ ಅಧಿಕವಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ದಿನಕ್ಕೆ 2,000 ಮಿ.ಗ್ರಾಂ ಸೋಡಿಯಂ ಮೀರಬಾರದೆಂದು ಸೂಚಿಸಿದೆ. ಈ ಮಿತಿಯನ್ನು ಮೀರಿದರೆ ರಕ್ತದೊತ್ತಡ ಹಾಗೂ ದೇಹದಲ್ಲಿ ನೀರು ಜಮೆಯಾಗುವ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

ಖನಿಜಗಳ ಅಸಮತೋಲನ ಸಾಧ್ಯತೆ
ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಮತ್ತು ಮ್ಯಾಗ್ನೀಶಿಯಂ ಅಧಿಕವಾಗಿರುವುದರಿಂದ, ದೀರ್ಘಾವಧಿಯಲ್ಲಿ ಅವನ್ನು ಅತಿಯಾಗಿ ಸೇವಿಸಿದರೆ ದೇಹದಲ್ಲಿ ಖನಿಜಗಳ ಸಮತೋಲನ ಕೆಡಬಹುದು. ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ಸ್ ಆಫ್ ಹೆಲ್ತ್ ಪ್ರಕಾರ, ಹೆಚ್ಚು ಜಿಂಕ್ ಸೇವನೆಯಿಂದ ತಾಮ್ರ ಶೋಷಣೆ ಕಡಿಮೆಯಾಗಿ ಅದರ ಕೊರತೆ ಉಂಟಾಗುವ ಸಾಧ್ಯತೆ ಇದೆ. ಇನ್ನು ಗಟ್ಟಿಯಾದ ಬೀಜಗಳನ್ನು ನಿರಂತರವಾಗಿ ಚಪ್ಪರಿಸುವುದರಿಂದ ದವಡೆ ನೋವು, ದಣಿವು ಹಾಗೂ ಹಲ್ಲಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ದಂತ ತಜ್ಞರು ತಿಳಿಸಿದ್ದಾರೆ.

Eating too many pumpkin seeds is harmful to health: Experts warn – ತುಳುಟೈಮ್ಸ್

ಇದನ್ನೂ ಓದಿ : ಮಂಗಳೂರು : ಕರಾವಳಿ ಪ್ರದೇಶದಲ್ಲಿ ವೈರಲ್ ಜ್ವರ, ತಲೆನೋವು ಪ್ರಕರಣಗಳು ಹೆಚ್ಚಳ

https://youtu.be/SDL5CAMpIQ0?si=4Rdz5Jp-4wyvBd7y

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page