ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರು

ಪುತ್ತೂರು: ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ

ಪುತ್ತೂರು: Tulu Times | ಬೆಳ್ಳಿಪ್ಪಾಡಿ ಗ್ರಾಮದಕೋರಿಯ ಶ್ರೀಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸೇವಾಭಿವೃದ್ಧಿ ಚಾರಿಟೇಬಲ್‌ ಟ್ರಸ್ಟ್ ನೇತೃತ್ವದಲ್ಲಿ ಫೆ.15, 16 ಮತ್ತು 17ರಂದು ಶ್ರೀ ದೈವಗಳ ಪುನ‌ರ್ ಪ್ರತಿಷ್ಠೆ ಕಲಶಾಭಿಷೇಕ ಮತ್ತು ನೇಮೋತ್ಸವ ನಡೆಯಲಿದೆ. ಹೀಗಾಗಿ, ಡಿ.21ರಂದು ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಮುಖಂಡರಾದ ಡಾ.ರಘು ಬಿ. ಬೆಳ್ಳಿಪ್ಪಾಡಿ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಮೋಹನ ಪಕ್ಕಳ ಕುಂಡಾಪು, ಮನೋಹರ ಗೌಡ ಡಿ.ವಿ, ಪದ್ಮನಾಭ ಶೆಟ್ಟಿ ರೆಂಜಾಜೆ, ಶ್ರೀಧರ ಆಳ್ವ ಕಲ್ಲಡ್ಕ, ಸುಂದರ ಸಾಲ್ಯಾನ್ ಬಾರ್ಪಾದೆ, ಸುಂದರ ಕಜೆ, ದಿನೇಶ್ ‘ಮಾಧವ ಕಜೆ, ಅರ್ಚಕ ಸದಾಶಿವ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

puttur: Sri Adi Nagabrahma Mogerkala Temple re-establishment Brahmakalashabhisheka- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 232

You cannot copy content of this page