ಸಿನೆಮಾ : Tulu Times | ಬಾಲಿವುಡ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ತನ್ನದೇ ಆದ ಸ್ಥಾನ ಪಡೆದಿರುವ ನಟ ರಣವೀರ್ ಸಿಂಗ್ ಇದೀಗ ಬಹು ನಿರೀಕ್ಷಿತ ಸಿನಿಮಾ ‘ಧುರಂಧರ್’ ಮೂಲಕ ಮತ್ತೊಮ್ಮೆ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರವು ಅವರ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.
ಡಿಸೆಂಬರ್ 5ರಂದು ಬಿಡುಗಡೆಯಾದ ರಣವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರವು ನಾಲ್ಕನೇ ವಾರದಲ್ಲೂ ಶತಕ ಬಾರಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ವಿಶೇಷವೆಂದರೆ, 28ನೇ ದಿನದ ಆದಾಯವು 27ನೇ ದಿನಕ್ಕಿಂತ ಹೆಚ್ಚು ಗಳಿಕೆಯಾಗಿದೆ. ನಾಲ್ಕು ವಾರಗಳ ಅಂತ್ಯದ ವೇಳೆಗೆ ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು ರೂ. 784.50 ಕೋಟಿ ಸಂಗ್ರಹಿಸಿದೆ.
ಚಿತ್ರದಲ್ಲಿ ರಣವೀರ್ ಕಪೂರ್ ಸಂಪೂರ್ಣ ವಿಭಿನ್ನ ಲುಕ್ ಹಾಗೂ ಗಂಭೀರ ಅಭಿನಯದೊಂದಿಗೆ ಕಾಣಿಸಿಕೊಂಡಿದ್ದು, ಅವರ ಪಾತ್ರದಲ್ಲಿ ಆಂತರಿಕ ಸಂಘರ್ಷ, ಬುದ್ಧಿಚಾತುರ್ಯ ಮತ್ತು ಭಾವನಾತ್ಮಕ ಆಳತೆಯ ಜೊತೆ, ಇದಕ್ಕಾಗಿ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಭಾರೀ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಧುರಂಧರ್ ಚಿತ್ರದ ಟ್ರೇಲರ್ ನವೆಂಬರ್ 18ರಂದು ಬಿಡುಗಡೆಯಾಗಿತ್ತು. ನಿಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಉಗ್ರರನ್ನು ಎದುರಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಗಳ ಗುರುತು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದರೂ, ನಿರ್ಮಾಪಕರು ಅಧಿಕೃತ ದೃಢೀಕರಣ ನೀಡಿಲ್ಲ. ರಣವೀರ್ ಸಿಂಗ್ ಅವರ ಪಾತ್ರವು ಮೇಜರ್ ಮೋಹಿತ್ ಶರ್ಮಾ ಅವರಿಂದ ಪ್ರೇರಿತ ಎನ್ನಲಾದರೂ, ಇದು ಸಂಪೂರ್ಣ ಕಲ್ಪಿತ ಪಾತ್ರವಾಗಿದ್ದು, ಸೆನ್ಸಾರ್ ಮಂಡಳಿ ಇದನ್ನು ದೃಢಪಡಿಸಿದೆ.
ಒಟ್ಟಿನಲ್ಲಿ, ‘ಧುರಂಧರ್’ ಸಿನಿಮಾ ರಣವೀರ್ ಅಭಿನಯ ಸಾಮರ್ಥ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದ್ದು, ಕಥೆ, ಪಾತ್ರ ಮತ್ತು ನಿರೂಪಣೆಯ ದೃಷ್ಟಿಯಿಂದ ಈ ಚಿತ್ರ ಬಾಲಿವುಡ್‌ನಲ್ಲಿ ವಿಶೇಷ ಸ್ಥಾನ ಪಡೆದಿದೆ ಹಾಗೂ ಬಿಡುಗಡೆಯೊಂದಿಗೆ ಈ ಸಿನಿಮಾ ಸಿನಿರಂಗದಲ್ಲಿ ದೊಡ್ಡ ಸದ್ದು ಮಾಡಿರುವುದಂತೂ ಖಚಿತ. Ranveer’s ‘Dhurandhar’ sets box office records -ತುಳು ಟೈಮ್ಸ್
ಇದನ್ನೂ ಓದಿ :ಬುದ್ಧನ ಉಪದೇಶಗಳನ್ನು ಪ್ರೀತಿಸುವ ಎಲ್ಲರಿಗೂ ಅತ್ಯಂತ ವಿಶೇಷ ದಿನ : ಪ್ರಧಾನಿ ನರೆಂದ್ರ ಮೋದಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=odtczmtszn91Oug8











