ಉಡುಪಿ: Tulu Times | ಮೀನಿಗ ಬೆಲೆ ಬಲು ದುಬಾರಿ ಆಗಿದ್ದು, ಬೂತಾಯಿ ಅಗ್ಗ ಆಗಿ, ಉಳಿದೆಲ್ಲವೂದರ ಬೆಲೆ ಗಗನಕ್ಕೆ ಏರಿದೆ ಎಂದು ವರದಿಯಾಗಿದೆ. ಇದರಿಂದ ಮೀನು ಪ್ರೀಯರಿಗೆ ಕೊಂಚ ಬೇಸರ ಆಗಿದೆ. ಅಂಜಲ್, ಮಾಂಜಿ, ಬಂಗುಡೆ ಸಹಿತ ಬಹುತೇಕ ಎಲ್ಲ ಮೀನುಗಳ ದರವೂ ಏರಿಕೆಯಾಗಿದೆ.
ಒಂದೊಂದೆಡೆ ವಿಭಿನ್ನ ಬೆಲೆ..
ಆಳದೋಣಿ ಮೀನುಗಾರಿಕೆಯ ಅಂಜಲ್ ಮೀನಿನ ದರಕ್ಕೂ ಪರ್ಷಿನ್ ಬೋಟ್ ಮೀನುಗಾರಿಕೆ ಅಂಜಲ್ ದರದಲ್ಲೂ ವ್ಯತ್ಯಾಸವಿದೆ. ಬಂದರು ದರ ಹಾಗೂ ಮಾರುಕಟ್ಟೆದಲ್ಲೂ ವ್ಯತ್ಯಾಸ ಕಾಣಸಿಗುತ್ತದೆ. ಆಳದೋಣಿ ಮೀನುಗಾರಿಕೆ ಮತ್ತು ಪರ್ಷಿನ್ ಹಾಗೂ ನಾಡದೋಣಿ ಮೀನುಗಾರಿಕೆಯಲ್ಲಿ ಹಿಡಿದು ತರುವ ಮೀನಿನ ದರಗಳಲ್ಲಿ ವ್ಯತ್ಯಾಸ ಬರುತ್ತದೆ. ಹೀಗಾಗಿ, ಮಂಗಳೂರಿನ ಬಂದರು ಹಾಗೂ ಮಾರುಕಟ್ಟೆಯಲ್ಲಿ ಒಂದು ರೀತಿಯ ದರವಿದ್ದರೆ, ಮಲ್ಪೆ, ಗಂಗೊಳ್ಳಿ ಬಂದರು ಹಾಗೂ ಮಾರುಕಟ್ಟೆಯಲ್ಲಿ ಭಿನ್ನ ದರವಿರುತ್ತದೆ. ದಿನದ ಮೀನಿನ ಲಭ್ಯತೆ ಹಾಗೂ ಬೇಡಿಕೆಗೆ ಅನುಸಾರವಾಗಿ ಮೀನಿನ ದರದಲ್ಲಿ ಏರುಪೇರು ಕಂಡುಬರುತ್ತದೆ. ಒಂದೇ ದಿನದಲ್ಲಿ ದರ ಕುಸಿತವೂ ಕಾಣುತ್ತದೆ ಮತ್ತು ದಿಢೀರ್ ಏರಿಕೆಯೂ ಆಗುತ್ತದೆ. ಅಂಜಲ್, ಮಾಂಜಿ, ಕಪ್ಪು ಮಾಂಜಿ, ಸಿಗಡಿ, ಬಂಗುಡೆ, ಅಡವು, ಕೊಡೈ ಮೊದಲಾದ ಮೀನಿನ ದರದಲ್ಲಿ ಏರಿಕೆ ಕಂಡಿದೆ. ಈಗ ಎಲ್ಲ ಮೀನಿನ ದರದಲ್ಲೂ 100ರಿಂದ 300 ರೂ.ಗಳ ವರೆಗೂ ಏರಿಕೆಯಾಗಿದೆ.
ಏರಿಕೆಗೆ ಕಾರಣ ಏನು ಅನ್ನೋದನ್ನು ನೋಡೋದಾದ್ರೆ, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಆಳದೋಣಿ ಮೀನುಗಾರಿಕೆಯಲ್ಲಿ ಮೀನಿನ ಇಳುವರಿ ಸ್ವಲ್ಪ ಕಡಿಮೆಯೇ ಇರುತ್ತದೆ. ಪರ್ಷಿನ್ ಹಾಗೂ ನಾಡದೋಣಿ ಮೀನುಗಾರಿಕೆ ಇಳುವರಿ ಕಡಿಮೆಯಾದಾಗ ಮೀನಿನ ದರ ಏರಿಕೆಯಾಗುತ್ತದೆ. ಅಲ್ಲದೆ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್, ಹೊಸ ವರ್ಷಾಚರಣೆ ಸಹಿತ ನಾನಾ ಉತ್ಸವ, ಕಾರ್ಯಕ್ರಮಗಳಿಗೆ ಸ್ಥಳೀಯವಾಗಿ ಮೀನಿನ ಖರೀದಿಯೂ ಹೆಚ್ಚಿರುತ್ತದೆ. ಈ ಬಾರಿ ಸಣ್ಣ ಬೂತಾಯಿ ಒಂದು ಬುಟ್ಟಿಗೆ 1300-1500 ರೂ. ದೊಡ್ಡ ಬೂತಾಯಿ 4500-5000ರೂ ಆಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಕರ ವಿ. ಸುವರ್ಣ, ಸಾಮಾನ್ಯವಾಗಿ ಡಿಸೆಂಬರ್- ಜನವರಿಯಲ್ಲಿ ಆಳದೋಣಿ ಮೀನುಗಾರಿಕೆಯಲ್ಲಿ ಮೀನಿನ ಇಳುವರಿ ಸ್ವಲ್ಪ ಕಡಿಮೆಯೇ ಇರುತ್ತದೆ. ಇದೇ ಅವಧಿಯಲ್ಲಿ ಸ್ಥಳೀಯವಾಗಿ ಬೇಡಿಕೆ ಹೆಚ್ಚಿರುತ್ತದೆ. ಹೀಗಾಗಿ ಮೀನಿನ ದರದಲ್ಲೂ ಸ್ವಲ್ಪ ಏರಿಕೆ ಕಂಡು ಬರುತ್ತದೆ ಎಂದರು.ಸದ್ಯ ಮಲ್ಪೆ ಬಂದರಿನಲ್ಲಿ ಮೀನಿನ ದರ ನೋಡೋದಾದ್ರೆ, ಅಂಜಲ್ 850-950 ರೂ., ಸಿಲ್ವರ್ ಫಿಶ್ 200-250 ರೂ., ಕಪ್ಪು ಮಾಂಜಿ 500-550 ರೂ. ಬಿಳಿಮಾಂಜಿ 1200-1300 ರೂ., ಸಿಗಡಿ 600-800 ರೂ., ಬಂಗುಡೆ 200-220 ರೂ., ಅಡವು 230-250 ರೂ., ಕೊಡೈ 300-350 ರೂ.ಇದೆ.
Wow, the price of fish has skyrocketed..how much is it per kg..?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimes











