ಬ್ರೇಕಿಂಗ್ ನ್ಯೂಸ್
ಕ್ರೀಡೆ

ಸ್ನೇಹಿತರ ಎಣ್ಣೆ ಪಾರ್ಟಿ ವೇಳೆ ಗಲಾಟೆ – ಕೊಲೆಯಲ್ಲಿ ಅಂತ್ಯ

ಬ್ರಹ್ಮಾವರ – ತುಳು ಟೈಮ್ಸ್:‌ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ರಾತ್ರಿ ವೇಳೆ ಎಣ್ಣೆ ಪಾರ್ಟಿ ಮಾಡ್ತಿದ್ದಾಗ ಈ ಕೊಲೆ ನಡೆದಿದೆ. ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯ ಐದು ಸೆಂಟ್ಸ್ ಬಳಿ ಡಿ. 14ರ ಭಾನುವಾರ ತಡರಾತ್ರಿ ನಡೆದಿದೆ. ಪಡುಕರೆ ಸಂತೋಷ್ ಮೊಗವೀರ (30) ಕೊಲೆಯಾದ ಯುವಕ.

ಶಬರಿಮಲೆ ಯಾತ್ರೆ ಮುಗಿಸಿ ಬಂದಿದ್ದ ಯುವಕರು ಭಾನುವಾರ ರಾತ್ರಿ ಎಣ್ಣೆ ಪಾರ್ಟಿ ಮಾಡ್ತಿದ್ರ. ಈ ವೇಳೆ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸಂತೋಷ ಮೊಗವೀರನಿಗೆ ನಾಲ್ವರು ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಂತೋಷ್‌ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಅಸ್ವಸ್ಥಗೊಂಡ ಸಂತೋಷ್‌ನನ್ನು ಸ್ಥಳೀಯರ ಸಹಕಾರದಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೆ ಸಂತೋಷ್ ಮೊಗವೀರ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ವಿಟ್ಲ: ಬಸ್-ಕಾರು ಮುಖಾಮುಖಿ ಢಿಕ್ಕಿ: ಓರ್ವ ಮೃತ್ಯು

ಕೊಲೆಯಾದ ಸ್ಥಳಕ್ಕೆ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಟಿ ಹಾಗೂ ಠಾಣಾ ಎಸ್‌ಐ ಮಾಂತೇಶ್ ಜಾಭಗೌಡ ಮತ್ತು ಹೆಡ್ ಕಾನ್ಸ್ಟೇಬಲ್ ಪ್ರದೀಪ್, ಮತ್ತು ಅಶೋಕ್ ರವರು ಪರಿಶೀಲಿಸಿ ನಾಲ್ವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Brahmavar: Man killed by his own friend for silly reason. Tulu Times


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ  : https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 5

You cannot copy content of this page