ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ದಕ್ಷಿಣಕನ್ನಡದಲ್ಲಿ ಹೆಚ್ಚಳವಾಗುತ್ತಿರುವ ಚಿಕನ್‌ ಪಾಕ್ಸ್..ಭಯಭೀತರಾದ ಜನ

ದಕ್ಷಿಣ ಕನ್ನಡ: Tulu Times | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕನ್ ಪಾಕ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಜನರು ಭಯಭೀತರಾಗಿದ್ದಾರೆ. ಸುತ್ತಮುತ್ತ ಹರಡದಂತೆ  ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಚಿಕನ್‌ ಪಾಕ್ಸ್‌ ಬಗ್ಗೆ ಭಯಪಡಬೇಡಿ!

ಶಾಲೆಗೆ ತೆರಳುವ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಚಿಕನ್‌ ಪಾಕ್ಸ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣಕ್ಕೆ ಚಿಕಿತ್ಸೆಯನ್ನು ಪಡೆಯುವುದರೊಂದಿಗೆ ಸೋಂಕು ಹರಡದಂತೆ ಕ್ರಮವಹಿಸಬೇಕು ಎಂದು ಇಲಾಖೆ ತಿಳಿಸಿದೆ. ಚಿಕನ್ ಪಾ‌ಕ್ಸ್‌ ನಿಂದ ಒಮ್ಮೆ ಬಳಲಿದ ವ್ಯಕ್ತಿ ಜೀವಿತಾವಧಿಯವರೆಗೂ ಅದರ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೊಂದುತ್ತಾನೆ.  ಇನ್ನು ಚಿಕನ್ ಪಾಕ್ಸ್ ಮಕ್ಕಳಲ್ಲಿ, ಯಾವುದೇ ತೊಂದರೆ ಇಲ್ಲದೆ ಸಂಪೂರ್ಣವಾಗಿ ಗುಣವಾಗುತ್ತದೆ.

ಇದನ್ನೂ ಓದಿ: ಕಂಬಳೋತ್ಸವಗಳಿಗೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆಯಾ?

ಚಿಕನ್‌ ಪಾಕ್ಸ್ ಹರಡದಂತೆ ಏನು ಮಾಡಬೇಕು..?

ಪೌಷ್ಠಿಕ ಆಹಾರ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಸದೃಢಗೊಳಿಸಿಕೊಳ್ಳುವುದೂ ರೋಗ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮನೆ, ಶಾಲೆ ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆ  ಕಾಪಾಡಿ. ಸೋಂಕಿತ ಮಕ್ಕಳ ಜೊತೆಗೆ ಹತ್ತಿರದ ಸಂಪರ್ಕ ಇರಬೇಡಿ. ಸೋಂಕಿತ ಜಾಗವನ್ನು ಅಥವಾ ಮಕ್ಕಳ ಆಟಿಕೆಗಳನ್ನು ಸೋಪು ಮತ್ತು ನೀರಿನಿಂದ ಸ್ವಚ್ಛ ಮಾಡಿ. ಇನ್ನು ಸೋಂಕಿತ ರೋಗಿಯ ಬೊಕ್ಕೆಗಳನ್ನು ಮುಟ್ಟಿದಾಗ ಕೈಗಳನ್ನು ಸೋಪು ನೀರಿನಿಂದ ಸ್ವಚ್ಛ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಬೊಕ್ಕೆಯಿಂದ ಬರುವ ನೀರಿನಿಂದ ಇನ್ನೊಬ್ಬರಿಗೆ ಚಿಕನ್‌ ಪಾಕ್ಸ್‌ ಹರಡುವ ಸಾಧ್ಯತೆ ಇದೆ. ಇನ್ನು ನಿಮಗೆ ಚಿಕನ್‌ ಪಾಕ್ಸ್  ಕಾಣಿಸಿಕೊಂಡರೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಿ.  ವೈದ್ಯರನ್ನು ಸಂಪರ್ಕಿಸದೇ ಔಷಧವನ್ನು ತೆಗೆದುಕೊಳ್ಳಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕನ್‌ ಪಾಕ್ಸ್ ಲಕ್ಷಣಗಳೇನು ಗೊತ್ತಾ..?

ಚಿಕನ್ ಪಾಕ್ಸ್  ಎಂಬುದು ವರಿಸೆಲ್ಲಾ-ಜೋಸ್ಟರ್ ವೈರಸ್‌ನಿಂದ ಉಂಟಾಗುವ ಅತ್ಯಂತ ಸಾಂಕ್ರಾಮಿಕ ವೈರಲ್ ಸೋಂಕು. ಇದು ದೇಹದಾದ್ಯಂತ ತುರಿಕೆ ಕೆಂಪು ದದ್ದುಗಳು ಮತ್ತು ದ್ರವ ತುಂಬಿದ ಗುಳ್ಳೆಗಳನ್ನು ಉಂಟುಮಾಡುತ್ತದೆ. ಜ್ವರ ಮತ್ತು ಆಯಾಸದಂತಹ ಲಕ್ಷಣಗಳೊಂದಿಗೆ. ಇದು ಕೆಮ್ಮು, ಸೀನು, ಮತ್ತು ಗುಳ್ಳೆಗಳ ಸ್ಪರ್ಶದ ಮೂಲಕ ಹರಡುತ್ತದೆ.  ಲಸಿಕೆಯಿಂದ ತಡೆಯಬಹುದು, ಆದರೆ ಲಸಿಕೆ ಹಾಕಿದವರಲ್ಲಿ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಇರುವವರಲ್ಲಿ ಇದು ಗಂಭೀರ ತೊಡಕುಗಳನ್ನು ಉಂಟುಮಾಡಬಹುದು.

Chicken pox on the rise in Dakshina Kannada… people are scared- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 169

You cannot copy content of this page