ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಟ್ರೆಂಡಿಂಗ್ 19 ನಿಮಿಷಗಳ ವೈರಲ್ ವೀಡಿಯೋ.. ತಪ್ಪು ಮಾಹಿತಿ ಲಿಂಕ್ ಮಾಡಲಾಯ್ತಾ..?

ಕರ್ನಾಟಕ: Tulu Times | ಇದು ಎಐ ಯುಗ. ಒಂದಲ್ಲಾ ಒಂದು ವೀಡಿಯೋ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಅದ್ರಲ್ಲಿ ಕೆಲವೊಂದು ಫೇಕ್‌ ಇನ್ನೂ ಕೆಲವೊಂದು ಸತ್ಯ ಘಟನೆಗಳು ಇರುತ್ತವೆ. ಇದೀಗ ಇನ್‌ಸ್ಟಾಗ್ರಾಮ್ ನಲ್ಲಿ ಯುವಕ ಯುವತಿಯ 19 ನಿಮಿಷಗಳ ವೀಡಿಯೊ ಹರಿದಾಡುತ್ತಿರೋದು ಹಾಗೂ ವೈರಲ್‌ ಆಗುತ್ತಿರೋ ಹುಡುಗ ಹುಡುಗಿ ಬೇರೆಯೇ ಎಂದು ಗೊತ್ತಾಗಿದೆ.

19 ನಿಮಿಷಗಳ ವೀಡಿಯೊ’ ಎಂಬ ಹೆಸರಿನಲ್ಲಿ  ಇನ್‌ಸ್ಟಾಗ್ರಾಮ್ ನಲ್ಲಿ ವೀಡಿಯೋ ಹರದಾಡಿತ್ತು. ಯುವಕ-ಯುವತಿಯ ಜೋಡಿ ಇರುವ ಫೋಟೋಗೆ ಲಿಂಕ್ ಮಾಡಿ ವೈರಲ್ ಮಾಡಲಾಗಿತ್ತು.  ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಇನ್‌ಸ್ಟಾಗ್ರಾಮ್ 19 ನಿಮಿಷಗಳ ವೀಡಿಯೊ ಹುಡುಕಾಟ ನಡೆಸಿದ್ದಾರೆ. ಎಂಎಂಎಸ್ ಹಾಗೂ ಅಹಮದಾಬಾದ್‌ನಿಂದ ಸಂಬಂಧವಿಲ್ಲದ ವೀಡಿಯೊವನ್ನು ತಪ್ಪಾಗಿ ಹೋಲಿಕೆ ಮಾಡಿದ್ದರಿಂದ ನೆಟ್ಟಿಗರು, ಎಂಎಂಎಸ್ ಫೋಟೋಗಳು, ವೈರಲ್ ವಿಡಿಯೋ ಒಂದೇ ಎಂದು ಅಂದುಕೊಂಡಿದ್ದಾರೆ. ವೈರಲ್ ಆಗಿದ್ದ ಯುವಕ-ಯುವತಿಯ ಎಂಎಂಎಸ್ ಗೂ ಹಾಗೂ ಪೊಲೀಸರಿಂದ ಏಟು ತಿನ್ನುತ್ತ ಬರುವ ಯುವಕನಿಗೂ ಸಂಬಂಧವೇ ಇಲ್ಲ ಎಂಬುದು ಸಾಬೀತಾಗಿದೆ.

ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಯುವಕ-ಯುವತಿ ಇಬ್ಬರು ಹಾಸಿಗೆ ಮೇಲೆ ಕೂತಿದ್ದ ವಿಡಿಯೋ ವೈರಲ್ ಆಗಿತ್ತು. ಅದರೊಂದಿಗೆ ಈ 19 ನಿಮಿಷಗಳ ವಿಡಿಯೋ ಎಂದು ನೆಟ್ಟಿಗರು ಹುಡುಕಿದ್ದರು. ಆ ಟೈಮ್‌ ನಲ್ಲಿ ಜನರಿಗೆ ಸಿಕಿದ್ದು ಮಾತ್ರ  ಗುಜರಾತ್‌ನ ಅಹಮದಾಬಾದ್‌ ವಿಡಿಯೋ. ಈ ವಿಡಿಯೋದಲ್ಲಿನ ಮಾಹಿತಿ ಸುಳ್ಳಾಗಿದೆ. ಯುವತಿಯೊಂದಿಗೆ ಇದ್ದ ಹುಡುಗ ವಿಡಿಯೋದಲ್ಲಿರುವವನಲ್ಲ. ಹುಡುಗನಿಗೆ 19 ನಿಮಿಷಗಳ ಎಂಎಂಎಸ್‌ಗೆ ವಿಡಿಯೋಗೆ ಸಂಬಂಧವೇ ಇಲ್ಲ ಎಂದು ತಿಳಿದುಬಂದಿದೆ.

ಎಂಟು ತಿಂಗಳ ಹಿಂದಿನ ವಿಡಿಯೋ ಇದಾಗಿದ್ದು,  ಗುಜರಾತ್‌ನ ಅಹಮದಾಬಾದ್‌ನ ವಸ್ತ್ರಲ್ ಪ್ರದೇಶದಲ್ಲಿನ ಯುವಕನ ವಿಡಿಯೋ ಇದಾಗಿದೆ. ಮಾರ್ಚ್ 13 ರಂದು  ನಡೆದ  ಹಿಂಸಾತ್ಮಕ ಘಟನೆಯಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದರು. ಆಗ ಅಪ್ರಾಪ್ತ ವಯಸ್ಕನೊಬ್ಬನನ್ನು ಬಂಧಿಸಿ ಲಾಠಿಯಲ್ಲಿ ಏಟು ನೀಡಿದ್ದರು. ಇದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಆ ವಿಡಿಯೋವನ್ನು  19ನಿಮಿಷಗಳ ವೈರಲ್  ವಿಡಿಯೋದಲ್ಲಿರುವ ಯುವಕನಿಗೆ ಹೋಲಿಸಲಾಗಿದೆ. ಸುಳ್ಳು ಮಾಹಿತಿ ಹಬ್ಬಿಸಲಾಗಿದೆ ಎಂದು ತಿಳಿದುಬಂದಿದೆ.

 19 ನಿಮಿಷಗಳ ವಿಡಿಯೋ ಪ್ರಕರಣ ಏನು..?

22-23 ವರ್ಷ ವಯಸ್ಸಿನ ಈ ಯುವಕ-ಯುವತಿಯ ಜೋಡಿಗೆ ಸಂಬಂಧಿಸಿದ 19 ನಿಮಿಷಗಳ ಎಂಎಂಎಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೇಗ ವೈರಲ್ ಆಗುವ ಉದ್ದೇಶದಿಂದ ಹೀಗೆ ವಿಡಿಯೋ, ಪೋಟೋ ಹರಿಬಿಟ್ಟಿದ್ದಾರೆ ಎಂದು ವರದಿ ಹೇಳುತ್ತವೆ.  ಈ ವೀಡಿಯೋ ವೈರಲ್ ಆಗುತ್ತಿದ್ದಂತೆ   ಇನ್‌ಸ್ಟಾಗ್ರಾಮ್, ಎಕ್ಸ್‌ ಸೇರಿ ಆನ್‌ಲೈನ್‌ನಲ್ಲಿ ಬಳಕೆದಾರರು “19 ನಿಮಿಷದ ವಿಡಿಯೋ” ಕೀ ವರ್ಲ್ಡ್ ಹಾಕಿ ಹುಡುಕಾಡಿದ್ದಾರೆ.

Trending 19-minute viral video.. Linked to misinformation..?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page