ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಂಗೆ ಬಾಡಿಶೇಮಿಂಗ್‌ ಆಗಿದೆ.. ನಟಿ ಗೀತಾ ಭಾರತಿ ಭಟ್ ಗಂಭೀರ ಆರೋಪ!

ಸಿನಿಮಾ: Tulu Times | ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಹೂವಿನ ರೀತಿ ಇದ್ದರು, ಹೂಕೋಸಿನ ರೀತಿ ಆಗಿದ್ದಾಳೆ’ ಎಂದು ಹೇಳಿರುವ ಡೈಲಾಗ್ ನಿಂದ ನನಗೆ ಅವಮಾನವಾಗಿದೆ ಎಂದು ಗೀತಾಭಟ್‌ ಬೇಸರ ವ್ಯಕ್ತಪಡಿಸಿದ್ದಾರೆ.

2020ರಲ್ಲಿ ಲವ್ ಮಾಕ್ಟೇಲ್’ ಸಿನಿಮಾ ರಿಲೀಸ್‌ ಆಯ್ತು.  ಈ ಸಿನಿಮಾ ಕಂಪ್ಲೀಟ್ ಸೋಲುವ ಹಂತದಲ್ಲಿ ಇತ್ತು. ಸುದೀಪ್ ಮಾಡಿದ ಒಂದು ಟ್ವೀಟ್​ನಿಂದ ಚಿತ್ರಕ್ಕೆ ಬಲ ಸಿಕ್ಕಿತು. ಈ ಸಿನಿಮಾದಲ್ಲಿ ಗೀತಾ ಭಾರತಿ ಭಟ್ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ‘ಹೂವಿನ ರೀತಿ ಇದ್ದರು, ಹೂಕೋಸಿನ ರೀತಿ ಆಗಿದ್ದಾಳೆ’ ಎಂದು ಗೀತಾಗೆ ಹೇಳಲಾಗುತ್ತದೆ. ಈ ಡೈಲಾಗ್ ಅವರಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಗೀತಾ ಭಟ್‌ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ. ಲವ್ ಮಾಕ್ಟೇಲ್ ಸಿನಿಮಾದಲ್ಲಿ ಈ ಡೈಲಾಗ್ ಇದೆ. ದೊಡ್ಡ ಸ್ಕ್ರೀನ್​ನಲ್ಲಿ ನೋಡಿದಾಗ ನನಗೆ ತುಂಬಾ ಬೇಸರವಾಯಿತು. ಸಿನಿಮಾ ಒಳ್ಳೆಯ ಸಕ್ಸಸ್ ಕಾಣಿಸಿತು. ಬಾಡಿ ಶೇಮಿಂಗ್ ಮಾಡಲು ನಾನೇ ಅನುಮತಿ ಕೊಟ್ಟೆ ಎಂದನಿಸುತ್ತದೆ’ ಎಂದಿದ್ದಾರೆ.

ಇ‌ದನ್ನೂ ಓದಿ: ಡಿಕೆಶಿ ಸಿಎಂ ಆಗಲೆಂದು ಕಾವೇರಿ ಮಾತೆಗೆ ವಿಶೇಷ ಪೂಜೆ ..!

ಲವ್‌ ಮೊಕ್ಟೈಲ್‌  ಒಂದು ಕನ್ನಡದ ರೊಮ್ಯಾಂಟಿಕ್ ಚಲನಚಿತ್ರವಾಗಿದ್ದು, ಇದು 2020 ರಲ್ಲಿ ಬಿಡುಗಡೆಯಾಯಿತು. ಇದನ್ನು ಕೃಷ್ಣ ನಿರ್ದೇಶಿಸಿದ್ದು, ಕೃಷ್ಣ ಮತ್ತು ಮಿಲನ ನಾಗರಾಜ್ ನಿರ್ಮಿಸಿದ್ದಾರೆ ಹಾಗೂ ನಟಿಸಿದ್ದಾರೆ. ಇದು ಆದಿ ಎಂಬ ಪಾತ್ರದ ಪ್ರೀತಿಯ ಪ್ರಯಾಣದ ಕಥೆಯಾಗಿದೆ.  ಬ್ರಹ್ಮಗಂಟು ಸೀರಿಯಲ್ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಗೀತಾ ಭಾರತಿ ಭಟ್  ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮೊಕ್ಟೈಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರ ಕೆಲ ಕ್ಷಣಗಳಷ್ಟೇ ಸ್ಟ್ರೀನ್ ಮೇಲೆ ಕಾಣಿಸಿಕೊಂಡಿರೂ ಪ್ರೇಕ್ಷಕರ ಗಮನ ಸೆಳೆದಿತ್ತು. ಗೀತಾ ಭಾರತಿ ಭಟ್ ನಟಿಸಿದ್ದ ರೋಜ್ ಪಾತ್ರದ ಬಗ್ಗೆ ಚಿತ್ರದ ನಾಯಕ ಹೇಳುವ ಡೈಲಾಗ್ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.

I have been body-shamed.. Geeta Bharati Bhat makes a serious accusation!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page