ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕತುಳು ಟಾಕೀಸ್

ಮಂಗಳೂರಿನ ಹುಡುಗಿಯಾಗಿ ಮಿಂಚಲಿರುವ ಸುಷ್ಮಿತಾ ಭಟ್ ..ಕರಾವಳಿ ಸಿನಿಮಾದಲ್ಲಿ ಮೋಡಿ!

ಮಂಗಳೂರು: Tulu Times | ಸೋಷಿಯಲ್ ಮಿಡಿಯಾದಲ್ಲಿ ಫೋಟೋ ಶೂಟ್ ಗಳ ಮೂಲಕವೇ ಸದ್ದು ಮಾಡ್ತಿದ್ದ ಸುಷ್ಮಿತಾ ಭಟ್ ಈಗ ಕರಾವಳಿ ಸಿನಿಮಾ ತಂಡವನ್ನುಸೇರಿಕೊಂಡು ಸಿನಿರಸಿಕರನ್ನು ರಂಜಿಸಲಿದ್ದಾರೆ.

ಕರಾವಳಿ ಟೀಮ್ ಸೇರಿಕೊಂಡ ನಟಿ ಸುಷ್ಮಿತಾ ಭಟ್!

ಕರಾವಳಿ ಸಿನಿಮಾ ತಂಡಕ್ಕೆ  ಹೊಸ ಕಲಾವಿದೆಯ ಸೇರ್ಪಡೆ ಆಗಿದೆ. ಇತ್ತೀಚೆಗಷ್ಟೇ ಕರಾವಳಿ ಸಿನಿಮಾತಂಡಕ್ಕೆ  ರಾಜ್ ಬಿ ಶೆಟ್ಟಿ ಸೇರಿಕೊಂಡಿದ್ರು ಈಗ ರಾಜ್ ಬಿ ಜೊತೆಯಾಗಿ ಕನ್ನಡದ  ನಟಿ ಸುಷ್ಮಿತಾ ಭಟ್  ಅಭಿನಯ ಮಾಡುತ್ತಿದ್ದಾರೆ. ಸುಷ್ಮಿತಾ ಭಟ್ ಈಗಾಗಲೇ ಎರಡು ಸಿನಿಮಾದಲ್ಲಿ ನಟಿಸಿದ್ದು ಕರಾವಳಿ ಅವರ ಮೂರನೇ ಸಿನಿಮಾ.

ಮಂಗಳೂರಿನ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಸುಷ್ಮಿತಾ ಕರಾವಳಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದು,  ಕರಾವಳಿ ತಂಡ ಸುಷ್ಮಿತಾ ಪಾತ್ರದ ಪೊಸ್ಟರ್ ರಿಲೀಸ್ ಮಾಡಿದೆ. ಇನ್ನು ಕರಾವಳಿ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಸಂಪದಾ ಹಾಗೂ ರಾಜ್ ಬಿ ಶೆಟ್ಟಿ ಸೇರಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಕಾಣಿಸಿಕೊಂಡಿದ್ದಾರೆ.

ಕರಾವಳಿ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್ನಲ್ಲಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ ಇದಾಗಿದ್ದು,  ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಕುರಿತು ಖುಷಿ ಹಂಚಿಕೊಂಡ ಸುಷ್ಮಿತಾ ಭಟ್‌,  ರಾಜ್ ಬಿ ಅವರಿಂದ ತುಂಬಾ ಕಲಿಯಬಹುದು ಅನ್ನೋ ಉದ್ದೇಶದಿಂದಲೇ ಈ ಸಿನಿಮಾ ಒಪ್ಪಿಕೊಂಡೆ ಚಿತ್ರೀಕರಣ ಮಾಡಿದ್ದು ಕಡಿಮೆ ದಿನಗಳು ಆದರೂ ಕೂಡ ಸಾಕಷ್ಟು ಕಲಿತಿದ್ದೇನೆ. ರಾಜ್ ಬಿ ಶೆಟ್ಟಿ ಪವರ್ ಹೌಸ್ ಇದ್ದಂಗೆ ಅವರಿಗೆ ಸಖತ್ ಎನರ್ಜಿ ಇದೆ. ಸೆಟ್ ನಲ್ಲಿ ಯಾವಾಗಲೂ ಆಕ್ಟಿವ್ ಆಗಿರ್ತಾರೆ. ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಕರಾವಳಿ ಚಿತ್ರತಂಡ ಸುಷ್ಮಿತಾ ಅವ್ರರನ್ನ ಪಾತ್ರಕ್ಕಾಗಿ ಅಪ್ರೋಚ್ ಮಾಡಿದಾಗ ಸುಷ್ಮಿತಾ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಕರಾವಳಿ ಪಾತ್ರ ಒಪ್ಪಿಕೊಳ್ಳಲು ಮೊದಲ ಕಾರಣ ರಾಜ್ ಬಿ ಶೆಟ್ಟಿ ಅಂತ ಹೇಳಿದ್ದಾರೆ.

Sushmita Bhatt will shine as a girl from Mangalore…charm in the movie Karavali!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 169

You cannot copy content of this page