ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ತನ್ನ ಮಕ್ಕಳ ವೀಡಿಯೋ ನೋಡೋಕೆ ಆಗಿಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತ ಮಾಳು!!

BBK12: ಬಿಗ್‌ ಬಾಸ್‌ ಕನ್ನಡದಲ್ಲಿ ಕಳೆದ ಸಂಚಿಕೆಯಲ್ಲಿ ಮನೆಯ ಮಕ್ಕಳ ವೀಡಿಯೋ ಮೂಲಕ ಮಾತನಾಡಿದ್ದರು. ಆದರೆ ಮಾಳು ಅವರ ಮಕ್ಕಳು ಮಾತನಾಡುವುದನ್ನು ನೋಡಲು ಮಾಳುಗೆ ಅವಕಾಶವೇ ಸಿಕ್ಕಿಲ್ಲ, ಹೀಗಾಗಿ ಮಕ್ಕಳ ಧ್ವನಿ ಕೇಳಿಸಿಕೊಳ್ಳಲು ಓಡೋಡಿ ಬಂದ ಮಾಳು ಬೇಸರದಿಂದ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಮಕ್ಕಳಿರುವ ಸ್ಪರ್ಧಿಗಳಿಗೆ ಮನೆಯಿಂದ ಮಕ್ಕಳ ವೀಡಿಯೋ ವಿಶ್ ಬಂದಿತ್ತು, ಇದರಿಂದ ಎಲ್ಲರೂ ಖುಷಿಯಿಂದ ಕಣ್ಣೀರು ಹಾಕಿದ್ದರು. ಇನ್ನು ಈ ಹಿಂದೆ, ಜಾಹ್ನವಿ ಅವರು ಮಾಳುಗೆ ದಡ್ಡ ಎಂಬ ಪದ ಬಳಸಿದರು.ರಕ್ಷಿತಾ ಶೆಟ್ಟಿ, ಸ್ಪಂದನಾ, ಧ್ರುವಂತ್, ಜಾಹ್ನವಿ ಮುಂತಾದವರು ಮಾಳು ನಿಪನಾಳಗೆ ಕಳಪೆ ಪಟ್ಟ ನೀಡಿದರು.  ಇದೀಗ ಮಾಳು ನಿಪನಾಳ ಜೈಲು ಸೇರಿದ ನಂತರ,  ಇನ್ನೊಂದು ನೋವಿನ ಸಂಗತಿ ಕೂಡ ಎದುರಾಯಿತು.

ಮಾಳು ಒಬ್ಬ ದಡ್ಡ..ಜಾಹ್ನವಿ ಹೀಯಾಲಿಸಿದ್ದೇಕೆ..?

ಮಾಳು ನಿಪನಾಳ ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಹಾಗಾಗಿ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕ್ಕಿದ್ದವು. ತಮ್ಮ ಅಧಿಕಾರ ಬಳಸಿಕೊಂಡು ನಾಮಿನೇಟ್ ಮಾಡುವಾಗ ಮಾಳು ನೀಡಿದ ಕಾರಣಗಳನ್ನುಮನೆಯವರೆಲ್ಲ ವಿರೋಧಿಸಿದ್ದರು. ಜಾಹ್ನವಿ ಮಾಳು ಅವರನ್ನು ದಡ್ಡ ಎಂದು ಹಲವು ಬಾರಿ ಹೇಳಿದ್ದಾರೆ.  ಕಳಪೆ ನೀಡುವಾಗಲೂ  ದಡ್ಡ ಎಂಬ ಪದ ಬಳಕೆ ಮಾಡಿದ್ದರು. ಬಿಗ್ ಬಾಸ್ ಮನೆಯ  ಕಳಪೆ ಪಟ್ಟಕ್ಕೆ ಮಾಳು ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಅವರಿಗೆ ಜೈಲು ವಾಸ ನೀಡಲಾಯಿತು.  ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಿಗಳ ಮಕ್ಕಳ ವಿಡಿಯೋಗಳನ್ನು ಬಿಗ್ ಬಾಸ್ ಮನೆಯೊಳಗಿನ ಟಿವಿಯಲ್ಲಿ ಹಾಕಲಾಯಿತು. ಆದರೆ ಮಾಳು ಅವರು ಜೈಲಿನ ಒಳಗೆ ಇದ್ದ ಕಾರಣ ಅವರಿಗೆ ಮಕ್ಕಳು ಮಾತನಾಡಿದ ವಿಡಿಯೋ ನೋಡಲು ಸಾಧ್ಯವಾಗಿಲ್ಲ.

ವೀಡಿಯೋ ತೋರಿಸಲು ಮಾಳು ಅವರನ್ನು ರಘು ಮನೆಯ ಒಳಗೆ ಕರೆದುಕೊಂಡು ಹೋಗಲು ಬಂದಾಗ ವೀಡಿಯೋ ವಿಶ್‌ ಮುಗಿದಿತ್ತು, ಹೀಗಾಗಿ ಮಾಳು ಮುಖ ಸಪ್ಪೆಯಾಗುತ್ತದೆ.  ಎಲ್ಲರಿಗೂ ಬೇಸರವಾಗಿ, ಬಿಗ್‌ ಬಾಸ್‌ ಜೊತೆಗೆ ಮತ್ತೊಮ್ಮೆ ವೀಡಿಯೋ ಹಾಕಲು ಹೇಳುತ್ತಾರೆ, ಆದ್ರೆ ಬಿಗ್‌ ಬಾಸ್‌ ಮತ್ತೆ ಹಾಕೋದೇ ಇಲ್ಲ. ಹೀಗಾಗಿ ಸೀದಾ ತನ್ನ ಜೈಲಿನ ಒಳಗೆ ಹೋದ ಮಾಳು, ಒಳಗೆ ಬೆಡ್‌ ಶೀಟ್‌ ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡುತ್ತಾರೆ. ಮಕ್ಕಳನ್ನು ಮಿಸ್ ಮಾಡಿಕೊಂಡು ಅವರು ಬಿಕ್ಕಿ ಬಿಕ್ಕಿ ಅತ್ತರು. ಒಂದು ವೇಳೆ ಮಾಳು ಅವರಿಗೆ ಕಳಪೆ ಪಟ್ಟ ಸಿಗದೇ ಹೋಗಿದ್ದರೆ ಅವರು ತಮ್ಮ ಮಕ್ಕಳ ವಿಡಿಯೋವನ್ನು ನೋಡಬಹುದಿತ್ತು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page