ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bank Of Baroda : ಬ್ಯಾಂಕ್ ಆಫ್ ಬರೋಡಾ ಅಪ್ರೆಂಡಿಸ್ ಹುದ್ದೆಗೆ ಅರ್ಜಿ ಆಹ್ವಾನ

Bank of Baroda : ಬ್ಯಾಂಕ್ ಆಫ್ ಬರೋಡಾವು ಭಾರತದ ಪ್ರಮುಖ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ಒಂದಾಗಿದೆ. ಇದು 1908ರಲ್ಲಿ ಮಹಾರಾಜಾ ಸಯಾಜಿರಾವ್ ಗಾಯಕವಾಡರು ಬರೋಡಾ ಜಿಲ್ಲೆಯಲ್ಲಿ ಈ ಬ್ಯಾಂಕ್ ಅನ್ನು ಸ್ಥಾಪಿಸಿದರು. ಆ ನಂತರ 2019ರಲ್ಲಿ ವಿಜಯ ಬ್ಯಾಂಕ್ ವಿಲೀನಗೊಂಡು ಬ್ಯಾಂಕ್ ಆಫ್ ಬರೋಡಾ ಎಂದು ಕರೆಯಲ್ಪಡುತ್ತದೆ. ಇದರಲ್ಲಿ ಡಿಜಿಟಲ್ ಸೇವೆಗಳು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಭಿನ್ನ ಬ್ಯಾಂಕಿಂಗ್ ಪರಿಹಾರಗಳು, ಆಧುನಿಕ BOB World ಮೊಬೈಲ್ ಆಪ್ ಮೂಲಕ ಸಾಮಾನ್ಯ ಎಲ್ಲಾ ಬ್ಯಾಂಕಿಂಗ್‌ ಕಾರ್ಯಗಳು ಇದರ ವಿಶೇಷತೆಗಳಾಗಿವೆ.

ಇದೀಗ ಬ್ಯಾಂಕ್ ಆಫ್ ಬರೋಡಾದಲ್ಲಿ ಒಟ್ಟು 2700 ಅಪ್ರೆಂಟಿಸ್ಗಳ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಈಗಾಗಲೇ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಮುಖವಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪದವಿ ಮುಗಿಸಿರಬೇಕು ಹಾಗೂ ವಯೋಮಿತಿ : 20 – 28 ವರ್ಷದೊಳಗೆ ಅರ್ಜಿ ಹಾಕಲು ಅವಕಾಶ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಈ ಅರ್ಹತೆ ಇರುವವರು ಯಾರೂ ಬೇಕಾದರೂ ಆನ್ಲೈನ್ ನಲ್ಲಿ ಡಿಸೆಂಬರ್ 1 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ‌.

ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಆನ್ಲೈನ್ ಪರೀಕ್ಷೆ, ಲೋಕಲ್ ಭಾಷೆಯಲ್ಲಿ ಪರೀಕ್ಷೆ ಹಾಗೂ ಡಾಕ್ಯುಮೆಂಟೊ ಪರಿಶೀಲನೆ ಆಧಾರಿತ ಅಂತಿಮ ಆಯ್ಕೆಯು ಇರುತ್ತದೆ. ಆಯ್ಕೆ ಆದವರಿಗೆ ತಿಂಗಳಿಗೆ ರೂ. ಹದಿನೈದು ಸಾವಿರ ನೀಡಲಾಗುತ್ತದೆ. ಅರ್ಜಿ ಶುಲ್ಕದ ಅಡಿಯಲ್ಲಿ ಜನರಲ್, ಒಬಿಸಿ, ಈಡಬ್ಲ್ಯೂಎಸ್ ಅಭ್ಯರ್ಥಿಗಳು 800ರೂ, ಪಿ ಡಬ್ಲ್ಯೂ ಬೀಡಿ ಅಭ್ಯರ್ಥಿಗಳು 400ರೂ. ಪಾವತಿಸಬೇಕು. ಕರ್ನಾಟಕದಲ್ಲಿ ಒಟ್ಟು ಹುದ್ದೆಗಳ ಸಂಖ್ಯೆ 440 ಆಗಿರುತ್ತದೆ.

ಇದನ್ನೂ ಓದಿ :Bengaluru: ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡ ಲಕುಮಿ ಸೀರಿಯಲ್‌ ನಟಿ!

……

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/X4fDzCnlyPE?si=njrx3Asr1H6-vHmo

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 156

You cannot copy content of this page