ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ಬಿಗ್‌ ಬಾಸ್‌ ಮನೆ ಕ್ಯಾಪ್ಟನ್‌ ಆದ ರಘು..! ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟು ಜಬರ್ದಸ್‌ ಆಟ!

BBK12: ಬಿಗ್‌ ಬಾಸ್‌ ಮನೆ ನಿನ್ನೆಯ ಟಾಸ್ಕ್‌ನಲ್ಲಿ ರಘು ಅವರು ವಿನ್‌ ಆಗಿ, ಎರಡನೇ ಬಾರಿ ಕ್ಯಾಪ್ಟನ್‌ ಪಟ್ಟ ಅವರಿಗೆ ಒಲಿಯಲಿದೆ ಎನ್ನಲಾಗುತ್ತಿದೆ.

ನಿನ್ನೆ ನಡೆದ  ಜಿಮ್‌ ಬಾಲ್‌ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ, ರಾಶಿಕಾ, ರಿಷಾ, ಅಶ್ವಿನಿ ಹೊರಬಂದು ಜಾಹ್ನವಿ ಗೆಲುವು ಸಾಧಿಸಿದರು. ಪುರುಷರ ತಂಡದಲ್ಲಿ ರಘು ವಿನ್‌ ಆದರು. ಕೊನೆಯ ಹಂತದಲ್ಲಿ ರಘು ಹಾಗೂ ಜಾಹ್ನವಿಗೆ ಆಟ ಇರಲಿದೆ. ವರದಿಯ ಪ್ರಕಾರ ರಘು ಎರಡನೇ ಬಾರಿಗೆ ಕ್ಯಾಪ್ಟನ್‌ ಸ್ಥಾನ ಗಳಿಸಿದ್ದಾರೆ ಎನ್ನಲಾಗುತ್ತಿದೆ. ನಿನ್ನೆಯ ಎಪಿಸೋಡ್‌ ನೋಡಿದ ವೀಕ್ಷಕರು ಸೋಷಿಯಲ್‌ ಮೀಡಿಯಾ ಮೂಲಕ ರಕ್ಷಿತಾ ಅವರನ್ನು ಹೊಗಳುತ್ತಿದ್ದಾರೆ. ರಕ್ಷಿತಾ ದಿ ಕಿಂಗ್ ಮೇಕರ್ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ವಾರವೂ ರಘು ಮೆಚ್ಚುಗೆಗೆ ಪಾತ್ರರಾಗ್ತಾರಾ..?

ರಘು  ಬಿಗ್ ಬಾಸ್ ಮನೆಯಲ್ಲಿ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಕ್ಷಿತಾ ಮತ್ತು ಮಾಳು ಅವರಿಂದ ನಾಮಿನೇಷನ್ ಆದರೂ, ರಘು ಸವಾಲಾಗಿ ಸ್ವೀಕರಿಸಿ, ನಾಮಿನೇಟ್ ಆದ ತಂಡದ ಟಾಸ್ಕ್ ಗೆಲುವಿನಿಂದಾಗಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದರು. ಈ ವಾರ ಮತ್ತೆ ಕ್ಯಾಪ್ಟನ್ ಆಗಿ ಹೊರಹೊಮ್ಮುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ರಘು ಈ  ವಾರವೂ ಕಿಚ್ಚನ ಮೆಚ್ಚುಗೆಗೆ ಪಾತ್ರರಾಗಬಹುದು ಎನ್ನಲಾಗಿದೆ. ಮಾಳು ಅವರು ರಘು ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಇದಕ್ಕೆ ರಘು ಬೇಜಾರಾಗಿದ್ದರು. ಆದರೆ, ಅವರು ಎಲ್ಲರಂತೆ ಜಗಳ ಮಾಡಲಿಲ್ಲ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಘು ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದರು.  ಬಳಿಕ ಮುಂದಿನ ವಾರಕ್ಕೆ ಮತ್ತೆ ಕ್ಯಾಪ್ಟನ್ ಆಗುವ ಅರ್ಹತೆ ಪಡೆದರು. ಆ ವಾರ ವೋಟಿಂಗ್ ಮೂಲಕ ಕ್ಯಾಪ್ಟನ್ ಆಯ್ಕೆ ಮಾಡಲಾಯಿತು. ಆ ವಾರವೂ ಟಾಸ್ಕ್ ಮೂಲಕ ಕ್ಯಾಪ್ಟನ್​ನ ಆಯ್ಕೆ ಮಾಡೋ ಅವಕಾಶ ಇದ್ದಿದ್ದರೆ ರಘು ಅವರೇ ಮತ್ತೆ ಕ್ಯಾಪ್ಟನ್ ಆಗುತ್ತಿದ್ದರು ಎನ್ನಲಾಗುತ್ತಿದೆ. ಈ ವೇಳೆ ಟಾಸ್ಕ್ ಗೆದ್ದ ತಂಡದವರು ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಿ, ನಾಮಿನೇಟ್ ತಂಡಕ್ಕೆ ಕಳುಹಿಸಬೇಕಿತ್ತು. ಆಗ ರಕ್ಷಿತಾ ಶೆಟ್ಟಿ ರಘು ಅವರನ್ನು ನಾಮಿನೇಟ್ ಮಾಡಿದರು. ಇದು ಅವರಿಗ ಬೇಸರ ಮೂಡಿಸಿತ್ತು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page