ಬ್ರೇಕಿಂಗ್ ನ್ಯೂಸ್
ಕರ್ನಾಟಕ

Harish Roy: KGF ಚಾಚಾ..ನಟ ಹರೀಶ್ ರಾಯ್ ಇನ್ನಿಲ್ಲ..!

Harish Roy: ಕೆಜಿಎಫ್ ಸಿನಿಮಾದ ಚಾಚಾ ಎಂದೇ ಖ್ಯಾತಿ ಗಳಿಸಿದ್ದ ಸ್ಯಾಂಡಲ್‌ವುಡ್‌ನ ಪೋಷಕ ನಟ ಹಾಗೂ ಖಳನಟ ಹರೀಶ್ ರಾಯ್ ಇಂದು ನಿಧನರಾಗಿದ್ದಾರೆ.

ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಹರೀಶ್‌ ರಾಯ್..!

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೇ ಹರೀಶ್‌ ರಾಯ್ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ. ಸುಮಾರು ಎರಡು ದಶಕಗಳಿಗಿಂತ ಹೆಚ್ಚು ಕಾಲ ನಟನೆಯಲ್ಲಿ ತೊಡಗಿಕೊಂಡಿದ್ದ, ಹರೀಶ್‌ ರಾಯ್‌ ಕೆಜಿಎಫ್ ಸಿನಿಮಾದ ಬಳಿಕ ಕೆಜಿಎಫ್ ಚಾಚಾ ಎಂದೇ ಫೇಮಸ್‌ ಆಗಿದ್ದರು. ಹರೀಶ್ ರಾಯ್ ಗೆ ಥೈರಾಯ್ಡ್ ಕ್ಯಾನ್ಸರ್ ಕೊನೆಯ ಸ್ಟೇಜ್‌ ತನಕ ತಲುಪಿತ್ತು. ಹೊಟ್ಟೆ ಉಬ್ಬರಗೊಂಡು, ದೇಹವೆಲ್ಲ ಸೊರಗಿ ಗುರುತೇ ಸಿಗದಂತೆ ಆಗಿದ್ದರು. ತಮ್ಮ ಚಿಕಿತ್ಸೆಗಾಗಿ ಸಹಾಯವನ್ನು ಕೇಳಿದ್ದರು. ಅದರಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗದವರು ಸೇರಿದಂತೆ ಹಲವಾರು ಮಂದಿ ನಟ, ನಟಿಯರು ಹರೀಶ್ ರಾಯ್ ಅವರಿಗೆ ಸಹಾಯ ಮಾಡಿದ್ದರು.

ಸ್ಟಾರ್‌ ನಟರು ಹಣದ ಸಹಾಯ ನೀಡಿದ್ದರು..!

ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದ ನಟ ತಮ್ಮ ಸಿನಿಮಾಗಳ ಮೂಲಕ ಕನ್ನಡಿಗರ ಮನಸು ಗೆದ್ದಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಖಳ ನಟ ಹರೀಶ್ ರಾಯ್ ಕೆಲವು ತಿಂಗಳ ಹಿಂದೆ ತನ್ನ ಆರೋಗ್ಯದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಾತನಾಡಿದ್ದರು. ಹರೀಶ್ ರಾಯ್ಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ, ಸ್ಟಾರ್ ನಟರು ಸಹಾಯ ಮಾಡಿದ್ದರು. ಶಿವಣ್ಣ ಯಶ್, ದರ್ಶನ್, ಧ್ರುವ ನಟರು ನೆರವು ನೀಡಿದ್ದರು. ಇದೀಗ ಇವರ ನಿಧನ ವಾರ್ತೆಗೆ ಕನ್ನಡ ಸಿನಿ ರಂಗ ಕಂಬನಿ ಮಿಡಿದಿದೆ.

ಹರೀಶ್‌ ರಾಯ್‌ ನಟಿಸಿದ ಸಿನಿಮಾಗಳ ಲಿಸ್ಟ್‌ ನೋಡಿ..!

ಜೋಡಿಹಕ್ಕಿ, ಆಪರೇಷನ್ ಅಂತ, ಓಂ, ನಲ್ಲ ಕೆಜಿಎಫ್, ಕೆಜಿಎಫ್ ಚಾಪ್ಟರ್ 2 ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದರು. ಬೆಂಗಳೂರು ಅಂಡರ್ ವರ್ಲ್ಡ್, ಮೀಂದುಮ್ ಒರು ಕಾದಲ್ ಕಧೈ, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ, ಓಂ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ನಟಿಸಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page