Bangalore : ಪರೀಕ್ಷೆಯ ತಯಾರಿಯಲ್ಲಿರುವ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯ ವೇಳಾಪಟ್ಟಿಯನ್ನು ನೀಡಲಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಬುಧವಾರ ಪ್ರಕಟಿಸಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ-1, 2026ರ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ. ಹಾಗೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಮೇ 18ರಿಂದ 25ರವರೆಗೆ ನಡೆಯಲಿದೆ. ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ-1, 2026ರ ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆಯಲಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ-2, 2026ರ ಏಪ್ರಿಲ್ 25ರಿಂದ ಮೇ 9ರವರೆಗೆ ನಡೆಯಲಿದೆ ಎಂದು ವರದಿಯಾಗಿರುತ್ತದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅಂತಿಮ ವೇಳಾಪಟ್ಟಿ ;
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅಂತಿಮ ವೇಳಾಪಟ್ಟಿಯಲ್ಲಿ, ಮಾರ್ಚ್ 18, 2026ರಂದು ಪ್ರಥಮ ಭಾಷೆ- ಕನ್ನಡ, ಮರಾಠಿ, ತೆಲುಗು, ಹಿಂದಿ, ತಮಿಳು, ತಮಿಳು, ಇಂಗ್ಲಿಷ್, ಸಂಸ್ಕೃತ. ಮಾರ್ಚ್ 23, 2026: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ. ಮಾರ್ಚ್ 25, 2026: ದ್ವಿತೀಯ ಭಾಷೆ- ಇಂಗ್ಲಿಷ್, ಕನ್ನಡ. ಮಾರ್ಚ್ 28, 2026: (ಕೋರ್ ಸಬ್ಜೆಕ್ಟ್) ಗಣಿತ, ಸಮಾಜಶಾಸ್ತ್ರ. ಮಾರ್ಚ್ 30, 2026: ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ. ಏಪ್ರಿಲ್ 02, 2026: ಸಮಾಜ ವಿಜ್ಞಾನ ಎಂದು ವರದಿಯಾಗಿರುತ್ತದೆ.
ದ್ವಿತೀಯ ಪಿಯುಸಿ ಪರೀಕ್ಷೆ-1 ಅಂತಿಮ ವೇಳಾಪಟ್ಟಿ ;
ದ್ವಿತೀಯ ಪಿಯುಸಿ ಪರೀಕ್ಷೆ-1 ಅಂತಿಮ ವೇಳಾಪಟ್ಟಿಯಲ್ಲಿ ಫೆ.28, 2026 ಕನ್ನಡ, ಅರೇಬಿಕ್, ಮಾ.2 ಭೂಗೋಳಶಾಸ್ತ್ರ, ಮನಶಾಸ್ತ್ರ, ಸಂಖ್ಯಾಶಾಸ್ತ್ರ. ಮಾ.3 ಇಂಗ್ಲೀಷ್ , ಮಾ.4 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಮಾ.5 ಇತಿಹಾಸ, ಮಾ.6 ಭೌತಶಾಸ್ತ್ರ, ಮಾ.7 ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ ಮಾ.9 ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲಗಣಿತ, ಮಾ.10 ಅರ್ಥಶಾಸ್ತ್ರ, ಮಾ.11 ತರ್ಕಶಾಸತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹವಿಜ್ಞಾನ, ಮಾ.12 ಹಿಂದಿ, ಮಾ.13 ರಾಜ್ಯಶಾಸ್ತ್ರ, ಮಾ.14. ಲೆಕ್ಕಶಾಸ್ತ್ರ, ಗಣಿತ, ಮಾ.16ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕವಿಜ್ಞಾನ, ಮಾ.17 ಹಿಂದೂಸ್ಥಾನಿ ಸಂಗೀತ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್ನೆಸ್ ವಿಷಯದ ಸಲುವಾಗಿ ಪರೀಕ್ಷೆಗಳು ನಡೆಯಲಿ
ಇದನ್ನೂ ಓದಿ : Belthangady: ಗೋಹಂತಕರಿಗೆ ಬಿಗ್ ಶಾಕ್ – ಆರೋಪಿಯ ಮನೆ ಮುಟ್ಟುಗೋಲು
……….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/wUcWTshTMXo?si=qTp6Zeeu3MaZsdur











