ಬ್ರೇಕಿಂಗ್ ನ್ಯೂಸ್
ಕ್ರೀಡೆದೇಶ

Smriti Mandhana: ನಾವು 45 ದಿನಗಳಿಂದ ಸರಿಯಾಗಿ ನಿದ್ರೆ ಮಾಡಿರಲಿಲ್ಲ.. ಸ್ಮೃತಿ ಮಂಧಾನ ಭಾವುಕ!

Smriti Mandhana: ಭಾರತ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್‌ ಆಗಿ ದಾಖಲೆ ಬರೆದಿದೆ.  ಭಾರತ ಆಫ್ರಿಕಾ ವಿರುದ್ಧ 52 ರನ್‌ಗಳ ಜಯಭೇರಿ ಗಳಿಸಿ ಚೊಚ್ಚಲ ವಿಶ್ವಕಪ್‌ಗೆ ಮುತ್ತಿಕ್ಕಿದೆ.

ಇದನ್ನೂ ಓದಿ : ದಾಖಲೆಯ ಮೊತ್ತದ ಬಹುಮಾನದೊಂದಿಗೆ ಇತಿಹಾಸ ಸೃಷ್ಟಿಸಿದ ಮಹಿಳಾ ಏಕದಿನ ವಿಶ್ವಕಪ್‌- 2025

ಕಠಿಣ ಪರಿಶ್ರಮದಿಂದ ಇಂದು ನಾವು ಗೆಲುವು ಕಂಡಿದ್ದೇವೆ..!

ಈ ಸಂತೋಷದ ಸಮಯದಲ್ಲಿ ಸ್ಮೃತಿ ಮಂಧಾನ ಭಾವುಕರಾಗಿ ಮಾತನಾಡಿದ್ದಾರೆ. ಈ ಸಂಭ್ರಮ ಕ್ಷಣಕ್ಕಾಗಿ 45 ದಿನಗಳಿಂದ ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಪ್ರತಿ ವಿಶ್ವಕಪ್‌ನಲ್ಲೂ ನಮಗೆ ಒಂದಿಲ್ಲೊಂದು ನಮಗೆ ಒಂದಲ್ಲಾ ಒಂದು ಸೋಲಿನ ಸಂಗತಿ ಎದುರಾಗ್ತಿತ್ತು. ಆದಾರೂ, ನಾವು ಉತ್ಸಾಹ ಕಳೆದುಕೊಂಡಿರಲಿಲ್ಲ. ವಿಶ್ವಕಪ್‌ ಗೆಲ್ಲುವ ಜವಾಬ್ದಾರಿಯೊಂದಿಗೆ ಮಹಿಳಾ ಕ್ರಿಕೆಟ್‌ ಇನ್ನಷ್ಟು ಬೆಳೆಸುವುದನ್ನು ಮುಂದುವರಿಸಿದ್ದೇವೆ.

ಇದನ್ನೂ ಓದಿ: ಸುಳ್ಯದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ – 2025 ಉದ್ಘಾಟನೆಗೊಂಡಿತು

ನಮ್ಮ ತಂಡದಲ್ಲಿ ಒಗ್ಗಟ್ಟಿತ್ತು..!

ಕಳೆದ ಒಂದೂವರೆ ತಿಂಗಳಿನಿಂದ ದೊರೆತ ಬೆಂಬಲವೂ ಇದಕ್ಕೆ ಕಾರಣ. ಈ ಕ್ಷಣಕ್ಕಾಗಿ ಕಳೆದ 45 ದಿನಗಳಿಂದ ಕಾತರತೆಯಿಂದ ಕಾಯುತ್ತಿದ್ದೆವು ಎಂದು ಭಾವುಕ ನುಡಿಗಳನ್ನಾಡಿದ್ದಾರೆ. ನಾವು ಒಗ್ಗಟ್ಟಾಗಿದ್ದೆವು. ಒಳ್ಳೆಯದು, ಕೆಟ್ಟದ್ದರ ನಡುವೆ ಪರಸ್ಪರ ಬೆಂಬಲವಿತ್ತು, ಈ ಸಕಾರಾತ್ಮಕತೆಯೇ ನಮ್ಮನ್ನ ಟ್ರೋಫಿಯತ್ತ ಕೊಂಡೊಯ್ದಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಹೀಗೆ, ವಿಶ್ವಕಪ್‌ ಗೆದ್ದ ನಂತ್ರ ಮಂಧಾನಾ ಭಾವುಕ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಭಾರತೀಯ ವನಿತೆಯರ ಕ್ರಿಕೆಟ್‌ ತಂಡ 47 ವರ್ಷಗಳ ಪ್ರಶಸ್ತಿಯ ಬರ ನೀಗಿಸಿಕೊಂಡಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ತಿನಿಸು ಮಾಡಿ ತಿಂದರೆ ಯಾವುದೇ ಆರೋಗ್ಯ ಸಮಸ್ಯೆಗಳಿರುವುದಿಲ್ಲ…!

ಭಾರತದ ಮಹಿಳಾ ತಂಡದ ಮೇಲೆ ಮೊದಲಿನಿಂದಲೂ ಅಭಿಮಾನಿಗಳ ನಿರೀಕ್ಷೆಯಿತ್ತು. ಅಂತಿಮವಾಗಿ ವಿಶ್ವಕಪ್ ಕೈಗೆತ್ತಿಕೊಳ್ಳವಲ್ಲಿ ಜಯಶಾಲಿಯಾಗಿದ್ದಾರೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು‌ 299 ರನ್ ನ ಗುರಿಯನ್ನು ದಕ್ಷಿಣಾ ಆಫ್ರಿಕಾ ತಂಡಕ್ಕೆ ನೀಡಿದ್ದು, ಅವರು 45.3 ಓವರ್ ನಲ್ಲಿ 246 ರನ್ ಗಳಿಗೆ ವಿಕೇಟ್‌ ಕಳೆದುಕೊಂಡು ಭಾರತ ತಂಡ 52 ರನ್ ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು. ಭಾರತೀಯರಿಗೆ ವಿಶ್ವಕಪ್‌ ಗೆದ್ದ ಖುಷಿ ಸಂತಸ ತಂದಿದೆ.

ಇದನ್ನೂ ಓದಿ: ಕೊಡವರು ಅಂದ್ರೆ ಹಾಕಿ: ಹಾಕಿ ಅಂದ್ರೆ ಕೊಡವರು: ಸಿ.ಎಂ ವರ್ಣನೆ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 23

You cannot copy content of this page