ದೆಹಲಿ : Tulu Times l ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ಪ್ಯಾಕೇಜಿಂಗ್‌ನಲ್ಲಿ ರಿಸೈಕಲ್ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರವು ತ್ಯಾಜ್ಯ ಪ್ಲಾಸ್ಟಿಕ್ ನಿರ್ವಹಣೆಗೆ ತಿದ್ದುಪಡಿ ಮಾಡಿ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಹೊಸ ನಿಯಮಗಳ ಪ್ರಕಾರ, ಉತ್ಪಾದಕರು, ಆಮದುದಾರರು ಮತ್ತು ಬ್ರ್ಯಾಂಡ್ ಮಾಲೀಕರು ತಮ್ಮ ಉತ್ಪನ್ನಗಳ ಪ್ಯಾಕೇಜಿಂಗ್‌ನಲ್ಲಿ ರಿಸೈಕಲ್ ಪ್ಲಾಸ್ಟಿಕ್ ಬಳಸಲೇಬೇಕು. ಜೊತೆಗೆ, ಪ್ಯಾಕೇಜ್ ಮೇಲೆ “ರಿಸೈಕಲ್ ಪ್ಲಾಸ್ಟಿಕ್ ಬಳಕೆ” ಎಂಬುದನ್ನು ಸೂಚಿಸುವ ಲೇಬಲ್ ಮತ್ತು ಗುರುತು ಇರಬೇಕು.
ಈ ಕ್ರಮವು ಪ್ಲಾಸ್ಟಿಕ್ ಮರುಬಳಕೆಯನ್ನು ಉತ್ತೇಜಿಸುವುದರ ಜೊತೆಗೆ “ಸರ್ಕ್ಯುಲರ್ ಎಕಾನಮಿ” (ಪುನರ್‌ಚಕ್ರ ಆರ್ಥಿಕತೆ) ಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಅಂದರೆ, ಪ್ಲಾಸ್ಟಿಕ್ ಬಳಸಿ ತ್ಯಾಜ್ಯ ಮಾಡದೇ, ಅದನ್ನು ಮರುಬಳಕೆ ಮಾಡುವ ವ್ಯವಸ್ಥೆಯನ್ನು ಬಲಪಡಿಸುವುದು ಮುಖ್ಯ ಗುರಿಯಾಗಿದೆ.
2025–26ರಿಂದ 2028–29ರವರೆಗೆ ಪ್ಯಾಕೇಜಿಂಗ್‌ನಲ್ಲಿ ಬಳಸಬೇಕಾದ ರಿಸೈಕಲ್ ಪ್ಲಾಸ್ಟಿಕ್ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ. ಪ್ರತಿ ವರ್ಗದ ಉತ್ಪನ್ನಗಳಿಗೆ ವಿಭಿನ್ನ ಗುರಿಗಳನ್ನು ನಿಗದಿಪಡಿಸಲಾಗಿದೆ. ಆಹಾರ ಪದಾರ್ಥಗಳ ಪ್ಯಾಕೇಜಿಂಗ್‌ನಲ್ಲಿ ಬಳಸುವ ಪ್ಲಾಸ್ಟಿಕ್‌ಗಾಗಿ ಆಹಾರ ಸಂರಕ್ಷಣೆ ಪ್ರಾಧಿಕಾರ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೆ ಕೆಲವು ಸಂದರ್ಭಗಳಲ್ಲಿ, ಕಾನೂನುಬದ್ಧ ನಿರ್ಬಂಧಗಳಿದ್ದರೆ ಈ ನಿಯಮ ಅನ್ವಯವಾಗುವುದಿಲ್ಲ.
ಪ್ಲಾಸ್ಟಿಕ್ ತ್ಯಾಜ್ಯವು ಪರಿಸರಕ್ಕೆ ದೊಡ್ಡ ಸವಾಲಾಗಿದೆ. ಇದನ್ನು ಕಡಿಮೆ ಮಾಡಲು ಮತ್ತು ಮರುಬಳಕೆಯನ್ನು ಉತ್ತೇಜಿಸಲು ಈ ಹೊಸ ನಿಯಮಗಳು ಸಹಾಯಕವಾಗಲಿವೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಕ್ಕಿಂತ, ಅದನ್ನು ಸಮರ್ಥವಾಗಿ ಮರುಬಳಕೆ ಮಾಡುವತ್ತ ಸರ್ಕಾರದ ಗಮನ ಹರಿದಿದೆ. ಈ ಹೊಸ ನಿಯಮಗಳು ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ತರಲಿವೆ. ರಿಸೈಕಲ್ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ, ಭವಿಷ್ಯದಲ್ಲಿ ಸ್ವಚ್ಛ ಮತ್ತು ಹಸಿರು ಭಾರತ ನಿರ್ಮಾಣಕ್ಕೆ ಇದು ಪ್ರಮುಖ ಹೆಜ್ಜೆಯಾಗಿದೆ.
Recycled plastic mandatory in packaging: Center’s new rule for environmental protection – ತುಳುಟೈಮ್ಸ್
ಇದನ್ನೂ ಓದಿ :ಇನ್ನು ಮುಂದೆ ಯುಪಿಐ ಮೂಲಕ ಹಣ ಪಾವತಿಸಲು ಕೇವಲ ಪಿನ್ ನಮೂದಿಸುವುದು ಸಾಕಾಗೋದಿಲ್ಲ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/2AWkk7R62HI?si=Pq2nH1Sfersh4R6T











