ಪುತ್ತೂರು: Tulu Times l ಪುತ್ತೂರು ಸಮೀಪದ ಸಂಟ್ಯಾರ್ ಪ್ರದೇಶದಲ್ಲಿ ಗುರುವಾರ ಸಂಜೆ (ಮಾರ್ಚ್ 12) ಸರಣಿ ಅಪಘಾತ ಸಂಭವಿಸಿದ್ದು, ಏಳು ವಾಹನಗಳಿಗೆ ಹಾನಿಯಾಗಿದೆ. ಘಟನೆ ಮಾಣಿ ಮೈಸೂರು ನ್ಯಾಶನಲ್ ಹೈವೆಯಲ್ಲಿ ಈ ಅಪಘಾತ ನಡೆದಿರುವುದು ವರದಿಯಾಗಿದೆ.
ಮಾಹಿತಿಯ ಪ್ರಕಾರ, ವೇಗವಾಗಿ ಬರುತ್ತಿದ್ದ ಕಾರೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಭಾರೀ ಹಾನಿ ಉಂಟು ಮಾಡಿದ್ದು, ಈ ಅಪಘಾತದಲ್ಲಿ ಆರು ಮೋಟಾರ್ ಸೈಕಲ್ಗಳು ಮತ್ತು ಒಂದು ಕಾರು ಹಾನಿಗೊಳಗಾಗಿವೆ.
ಡಿಕ್ಕಿ ಹೊಡೆದ ಬಳಿಕ ಆ ಕಾರು ಪಾಣಾಜೆ ರಸ್ತೆಯ ದಿಕ್ಕಿನಲ್ಲಿ ಅತೀ ವೇಗವಾಗಿ ಹೋಗಿ ಪರಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳ ಅನುಮಾನ ಪ್ರಕಾರ, ಕಾರನ್ನು ಅಪ್ರಾಪ್ತವಯಸ್ಕನು ಚಾಲನೆ ಮಾಡುತ್ತಿದ್ದಿರಬಹುದು. ಜೊತೆಗೆ ಚಾಲಕ ಗಾಂಜಾ ಮಾದಕ ವಸ್ತು ಸೇವಿಸಿರುವ ಸಾಧ್ಯತೆಯೂ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಪರಾರಿಯಾದ ವಾಹನವನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿರುತ್ತಾರೆ.
Puttur serial accident: Car hits seven vehicles and flees – ತುಳುಟೈಮ್ಸ್
ಇದನ್ನೂ ಓದಿ : ಸೌರಶಕ್ತಿ ಬಳಸಿ ಅಡುಗೆ : ಇಲ್ಲಿ ತಯಾರಾಗುತ್ತೆ ದಿನಕ್ಕೆ 1000 ಊಟ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/-PlvbIZDxfU?si=OJqMmVBIyGDyy8Kl











