ಪುತ್ತೂರು: Tulu Times | ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ಬೃಹತ್ ಹೋರಾಟ ನಡೆಯಲಿದ್ದು, ಫೆ.1ರಂದು ಸಮಾಲೋಚನಾ ಸಭೆ ನಡೆಯಲಿದೆ.
ಸಾಂಪ್ರದಾಯಿಕ ಕೋಳಿ ಅಂಕ ಉಳಿಸುವ ನಿಟ್ಟಿನಲ್ಲಿ ಹೋರಾಟಗಾರರು ಮುಂದಾಗಿದ್ದು, ಫೆಬ್ರವರಿ 1 ರಂದು ಪುತ್ತೂರಿನಲ್ಲಿ ಬೃಹತ್ ಸಮಾಲೋಚನಾ ಸಭೆ ಆಯೋಜಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರು ಈ ಬಾರಿ ಸಾಂಪ್ರದಾಯಿಕ ಕೋಳಿ ಅಂಕಗಳನ್ನು ನಡೆಸದಂತೆ ತಡೆದಿದ್ದಾರೆ. ಹಾಗಾಗಿ ಬೃಹತ್ ಹೋರಾಟ ನಡೆಸಲು ಯೋಚಿಸಲಾಗಿದೆ.
ಹೀಗಾಗಿ, ಫೆಬ್ರವರಿ 1ರಂದು ಪುತ್ತೂರಿನಲ್ಲಿ ‘ಕೋಳಿ ಅಂಕ’ಕ್ಕಾಗಿ ಕೊಟೇಚಾ ಹಾಲ್ ನಲ್ಲಿ ಬೃಹತ್ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕೋಳಿ ಅಂಕ ಅಭಿಮಾನಿಗಳು ಹಾಗೂ ದೈವಾರಾಧನೆಗೆ ಸಂಬಂಧಪಟ್ಟವರು ಭಾಗವಹಿಸಲಿದ್ದಾರೆ.
ಕರಾವಳಿಯಲ್ಲಿ ದೈವ, ದೇವರ ಆಚಾರ ವಿಚಾರದಲ್ಲಿ ಪ್ರಾಚೀನ ಸಂಪ್ರದಾಯಗಳು ಇವೆ, ಇದರಲ್ಲಿ ಕೋಳಿ ಅಂಕವೂ ಪ್ರಾಚೀನ ಸಂಪ್ರದಾಯವಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಹುಟ್ಟಿಕೊಂಡಿದೆ .ಕೋಳಿ ಅಂಕವನ್ನ ಮತ್ತೆ ಕರಾವಳಿಯಲ್ಲಿ ಮುಂದುವರಿಸುವಂತೆ ಹೋರಾಟ ನಡೆಸಲಾಗುವುದು. ಪೊಲೀಸ್ ಇಲಾಖೆ ಹಾಗೂ ಸರ್ಕಾರಕ್ಕೆ ಕೋಳಿ ಅಂಕದ ಬಗ್ಗೆ ಸರಿಯಾದ ಮಾಹಿತಿ ನೀಡಲು ಹಾಗೂ ಜಾತ್ರೆ, ನೇಮೋತ್ಸವದ ಬಳಿಕ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಇರುವ ಇತಿಹಾಸವನ್ನು ಸರಕಾರ ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಸಭೆಯನ್ನು ಕರೆಯಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಆಘಾತಕಾರಿ ಘಟನೆ: ಸರ್ಕಾರಿ ಶಾಲೆಯಲ್ಲಿ ತೆರೆದ ಚರಂಡಿ ಬಳಿ ಮಕ್ಕಳು
ಆರ್ಥಿಕ ಸಮೀಕ್ಷೆ 2025–26: ಅಲ್ಪಾ-ಪ್ರೊಸೆಸ್ಟ್ ಆಹಾರ ಸೇವನೆ ಭಾರೀ ಏರಿಕೆ
ನವದೆಹಲಿ: ಭಾರತದಲ್ಲಿ ಅಲ್ಮಾ-ಪ್ರೊಸೆಸ್ಟ್ ಆಹಾರಗಳ (UPF) ಸೇವನೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಆಹಾರಗಳನ್ನು ಗರಿಷ್ಠ ಜಿಎಸ್‌ಟಿ ಶ್ರೇಣಿಗೆ ಸೇರಿಸುವಂತೆ ಹಾಗೂ ಹೆಚ್ಚು ಸಕ್ಕರೆ, ಉಪ್ಪು ಮತ್ತು ಕೊಬ್ಬು ಹೊಂದಿರುವ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವಂತೆ ಆರ್ಥಿಕ ಸಮೀಕ್ಷೆ 2025-26 ಶಿಫಾರಸು ಮಾಡಿದೆ. ಈ ಸಮೀಕ್ಷೆಯನ್ನು ಜನವರಿ 29ರಂದು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಪ್ಯಾಕೆಟ್ ಆಹಾರಗಳ ಮೇಲೆ ಪ್ರಸ್ತುತ ಜಾರಿಯಲ್ಲಿರುವ ‘ಹೆಲ್ತ್ ಸ್ಟಾರ್ ರೇಟಿಂಗ್’ ವ್ಯವಸ್ಥೆಯನ್ನು ರದ್ದುಪಡಿಸಿ, ಅದರ ಬದಲು ಮುಂಭಾಗದಲ್ಲೇ ಸ್ಪಷ್ಟ ಎಚ್ಚರಿಕೆ ಲೇಬಲ್‌ಗಳನ್ನು (Front-of-Pack Warning Labels) ಅಳವಡಿಸಬೇಕೆಂದು ಸಮೀಕ್ಷೆ ಸಲಹೆ ನೀಡಿದೆ. ರೇಟಿಂಗ್ ಮಾದರಿಯ ಲೇಬಲ್‌ಗಳು ಆರೋಗ್ಯದ ಅಪಾಯವನ್ನು ಮಸುಕುಗೊಳಿಸುತ್ತವೆ ಮತ್ತು ಗ್ರಾಹಕರನ್ನು ತಪ್ಪು ದಾರಿಗೆ ನಡಿಸಬಹುದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಈ ನಿಲುವನ್ನು ನ್ಯೂಟ್ರಿಷನ್ ಅಡ್ವಕೆಸಿ ಇನ್ ಇಂಡಿಯಾ (NAPI) ಸೇರಿದಂತೆ ಹಲವು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ವರ್ಷಗಳಿಂದ ಒತ್ತಾಯಿಸುತ್ತಿವೆ. ಭಾರತದಲ್ಲಿ ಸ್ಕೂಲಕಾಯತೆ (ಒಬೆಸಿಟಿ) ವೇಗವಾಗಿ ಹೆಚ್ಚುತ್ತಿದ್ದು ಇದು ಕಳೆದ ಎರಡು ದಶಕಗಳಲ್ಲಿ UPF ಸೇವನೆಯ ಭಾರೀ ವೃದ್ಧಿಯೊಂದಿಗೆ ನೇರವಾಗಿ ಸಂಬಂಧಿಸಿದೆ ಎಂದು ಸಮೀಕ್ಷೆ ಹೇಳಿದೆ. 2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಪ್ರಕಾರ, ದೇಶದ ಮಹಿಳೆಯರಲ್ಲಿ 24% ಮತ್ತು ಪುರುಷರಲ್ಲಿ 23% ಜನರು ಅತೀ ತೂಕ ಅಥವಾ ಸ್ಕೂಲಕಾಯತೆಯಿಂದ ಬಳಲುತ್ತಿದ್ದಾರೆ. 15-49 ವಯೋಮಾನದ ಮಹಿಳೆಯರಲ್ಲಿ 6.4% ಮಂದಿ ಸ್ಕೂಲಕಾಯರಾಗಿದ್ದರೆ, ಪುರುಷರಲ್ಲಿ ಇದು 4% ಆಗಿದೆ. ಮಕ್ಕಳಲ್ಲಿ ಪರಿಸ್ಥಿತಿ ಇನ್ನಷ್ಟು ಕಳವಳಕಾರಿ ಎನ್ನಲಾಗಿದೆ.
Puttur: A huge fight for the chicken mark!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











