ಉಡುಪಿ: Tulu Times | ಕಾಪು ತಾಲೂಕು ನಾಲು ಗ್ರಾಮದ ನಡ್ಯಾಲು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಲ್ಲಿಕಾ (34) ಎಂಬ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
ತಾಯಿ ಮನೆಗೆ ಹೋಗೋದಾಗಿ ಹೇಳಿ ಹೋದ ಮಹಿಳೆ ಮತ್ತೆ ಮನೆಗೆ ಹಿಂದಿರುಗಲೇ ಇಲ್ಲ. ಮಲ್ಲಿಕಾ ಜನವರಿ 05 ರಂದು ತನ್ನ ತಾಯಿ ಮನೆ ರಾಮನಗರಕ್ಕೆ ಹೋಗುವುದಾಗಿ ಹೇಳಿ ಅತ್ತ ತಾಯಿಯ ಮನೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ. ಮಲ್ಲಿಕಾ 5 ಅಡಿ ಎತ್ತರ, ಬಿಳಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು, ಮರಾಠ ಹಾಗೂ ಮಲಯಾಳಂ ಭಾಷೆ ಮಾತನಾಡುತ್ತಾರೆ.
ಈಕೆ ಎಲ್ಲಿಯಾದರೂ ಕಂಡುಬಂದರೆ, ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ರೀಕ್ಷಕರು ಮೊ.ನಂ: 0820-2555452, .: 9480805450, .: 0820-2552133, .: 9480805431 ಹಾಗೂ ಪೊಲೀಸ್ ಕಂಟ್ರೋಲ್ ರೂಂ ದೂ.ಸಂಖ್ಯೆ;0820-2525444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ತಿಳಿಸಿದೆ.
ಕಡಬದ ಯುವತಿ ತನ್ನ ಮಗುವಿನೊಂದಿಗೆ ನಾಪತ್ತೆ!
ಕಡಬ: ಪ್ರತ್ಯೇಕ ಪ್ರಕರಣದಲ್ಲಿ, ಕೊಯಿಲ ಗ್ರಾಮ ನಿವಾಸಿ ನೇಹಾ(26) ಮತ್ತು ಮಗ ಮಹಮ್ಮದ್ ನಿಹಾಲ್ (3.5) ನೊಂದಿಗೆ ಮಹಿಳೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ. ಮೂರು ತಿಂಗಳ ಹಿಂದೆ ನೇಹಾ ತನ್ನ ಗಂಡನೊಂದಿಗೆ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದರು. ನಂತರ ಗಂಡ ಡಿಸೆಂಬರ್ 25 ರಂದು ಗಂಡ ಊರಿಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ನೇಹಾ ತನ್ನ ಮಗುವಿನೊಂದಿಗೆ ಮನೆಗೂ ಬಾರದೇ, ದೂರವಾಣಿ ಕರೆಗೂ ಸಿಗದೇ ಕಾಣೆಯಾಗಿದ್ದಾರೆ. ಈ ಬಗೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಹಾ ನೋಡಲು ಹೇಗಿದ್ದಾರೆ..?
ನೇಹಾ ಎತ್ತರ 152 ಸೆಂ ಮೀ, ಗೋಧಿ ಮೈಬಣ್ಣ ಸಾಧಾರಣ ಶರೀರ ಹೊಂದಿರುತ್ತಾರೆ. ಚೂಡಿದಾರ ಧರಿಸಿರುತ್ತಾರೆ. ಕನ್ನಡ, ಉರ್ದು, ಬ್ಯಾರಿ ಭಾಷೆ ಮಾತನಾಡುತ್ತಾರೆ. ನಿಹಾಲ್: 3.5 ವರ್ಷ, ಸಪೂರ ಶರೀರ, ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಡಬ ಪೊಲೀಸ್ ಠಾಣೆ ಸಂಪರ್ಕ ಮಾಡಬೇಕು ಎಂದು ಪೋಲಿಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Udupi: Young woman who said she was going home to her mother goes missing- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











