ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಾಟ್ಸಾಪ್ ಸ್ಟೇಟಸ್ ಹಾಕಿಲ್ಲ ಅಂತ ನೊಂದಿಕೊಳ್ತಿದ್ದೀರಾ..? ಹಾಗಾದ್ರೆ ಹುಷಾರ್!

ಜೀವನಶೈಲಿ: Tulu Times | ಇದು ಎ ಐ ಯುಗ. ಓಡುತ್ತಿರುವ ಸ್ಪರ್ಧಾತ್ಮಕ ಯುಗದಲ್ಲಿ ಮೊಬೈಲ್ ಇಲ್ಲದೆ ಬದುಕು ಕಷ್ಟಸಾಧ್ಯ. ಪ್ರತಿದಿನ ನಾವು ಮೊಬೈಲ್‌ ಗೆ ಅಡಿಕ್ಟ್ ಆಗಿರುತ್ತೇವೆ. ಮೊಬೈಲ್ ಫೋನ್ ಇಲ್ಲದೆ ಜೀವನ ನಡೆಸುವುದು ಕಷ್ಟ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಹಾಗಾದ್ರೆ ಪ್ರತಿದಿನ ನೀವು ಮೊಬೈಲ್‌ ನಲ್ಲಿ ಮುಳುಗಿ ಹೋಗಿದ್ದೀರಾ? ಸ್ಟೇಟಸ್‌ ಹಾಕಿಲ್ಲ ಅಂತ ಕೊರಗುತ್ತೀರಾ? ಹಾಗಾದ್ರೆ ಈ ಸ್ಟೋರಿ ಗಮನವಿಟ್ಟು ಓದಿ..

ಇಂದು ಎಐ ಯುಗದಲ್ಲಿ ನಾವಿದ್ದೇವೆ..! 

ನಾವು ಎ ಐ ಯುಗದಲ್ಲಿದ್ದೇವೆ. ಹೀಗಾಗಿ, ಯಾವುದೇ ಫೋಟೋ, ವೀಡಿಯೋವನ್ನು ಸೃಷ್ಟಿಸಿಕೊಳ್ಳುತ್ತೇವೆ. ಜೊತೆಗೆ ನಮಗೆ ಬೇಕಾದಂತಹ ಮಾಹಿತಿಗಳನ್ನು ಕೂಡ ಎಐ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳುತ್ತೇವೆ. ಇನ್ನು ನಾವೆಲ್ಲರೂ ದಿನದ 24 ಗಂಟೆ ಮೊಬೈಲ್ ಫೋನ್ ಬಳಸುತ್ತೇವೆ, ಮೊಬೈಲ್ ಇಲ್ಲದೆ ಬದುಕು ಅಸಾಧ್ಯ. ಜೀವನದಲ್ಲಿ ಮೊಬೈಲ್ ಫೋನ್ ಎನ್ನುವುದು ನಮಗೆ ಬಹಳ ಹತ್ತಿರವಾಗಿದೆ. ಮುಖ್ಯವಾದ ವಿಚಾರ ಏನೆಂದರೆ, ಎಲ್ಲರೂ ಮೊಬೈಲ್ ಫೋನ್‌ ನಲ್ಲಿ ವಾಟ್ಸಪ್ , ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳನ್ನು ಬಳಸಿ ಅದರಲ್ಲಿ ಮುಳುಗಿ ಮೆಸೇಜ್, ಕಾಲ್ ಮಾಡುತ್ತಾ ದಿನ ಕಳೆಯುತ್ತೇವೆ. ಅದೆಂತಹ ಕೆಲಸ ಇದ್ದರೂ ಕೂಡ ಕೊಂಚ ಸಮಯವನ್ನು ಬಿಡುವ ಮಾಡಿಕೊಂಡು ಮೊಬೈಲ್ ನಲ್ಲಿ ಸ್ಟೇಟಸ್‌ ಒಂದು ಪೋಸ್ಟ್‌ ಮಾಡುತ್ತೇವೆ.

ಸ್ಟೇಟಸ್‌ ಹಾಕಿಲ್ಲ ಅಂತ ಮಾನಸಿಕವಾಗಿ ಕುಗ್ಗಬೇಡಿ! ಅದು ನಿಮ್ಮ ವ್ಯಕ್ತಿತ್ವ ಅಲ್ಲ!

ನಮ್ಮಲ್ಲಿ ಬಹಳಷ್ಟು ಜನರು ನಾನು ಇವತ್ತು ಸ್ಟೇಟಸ್ ಅಪ್ಲೋಡ್ ಮಾಡಿಲ್ಲ ಅಂತ ತಾನು ತಾನಾಗಿಯೇ ನೊಂದುಕೊಳ್ಳುತ್ತಾರೆ. ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿರುವಂತಹ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲ್ಲ ಅಂತ ಚಡಪಡಿಸುತ್ತಾರೆ. ಇನ್ನು ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕುವಂತಹ ಅಭ್ಯಾಸ ನಮಗೆಲ್ಲರಿಗೂ ಕೂಡ ಇದೆ. ಒಂದು ಸ್ಟೇಟಸ್ ಅನ್ನು ಪೋಸ್ಟ್ ಮಾಡಲೇಬೇಕು ಅಂತ ಪ್ರತಿದಿನ ಬೆಳಗ್ಗೆ ಅಂದುಕೊಳ್ಳುತ್ತೇವೆ. ನಂತರ ನಮ್ಮ ಕೆಲಸದ ಬ್ಯುಸಿಯಲ್ಲಿ ಸ್ಟೇಟಸ್‌ ಪೋಸ್ಟ್‌ ಮಾಡೋದು ಮರೆತು ಹೋಗುತ್ತೇವೆ. ಹೀಗೆ ತನ್ನ ಮನಸ್ಥಿತಿಯನ್ನು ಹೆಚ್ಚಿನವರು ಸ್ಟೇಟಸ್ ಮೂಲಕ ತೋರ್ಪಡಿಸುತ್ತಾರೆ.

ಸ್ಟೇಟಸ್‌ ಅನ್ನೋದು ಸೋಷಿಯಲ್‌ ಸ್ಟೇಟಸ್‌ ಆಗ್ಬಿಟ್ಟಿದೆ!

ತಾನು ಇವತ್ತು ಎಲ್ಲಿಗೆ ಹೋದೆ? ಇವತ್ತು ಏನು ತಿಂದೆ? ಎಲ್ಲವನ್ನೂ ಕೂಡ ವಾಟ್ಸಪ್ ಸ್ಟೇಟಸ್ ಮೂಲಕ ಪೋಸ್ಟ್ ಮಾಡಿ ಜನರಿಗೆ ತಿಳಿಸುತ್ತಾರೆ. ಹೀಗೆ ಇದೊಂದು ಅಭ್ಯಾಸವಾಗಿ ಬೆಳೆದಿದೆ. ವಾಟ್ಸಪ್ ಸ್ಟೇಟಸ್ ಮೂಲಕ ಜನರು ತಮ್ಮ ಇರುವಿಕೆಯನ್ನು ಕಂಡುಕೊಳ್ಳುತ್ತಾರೆ. ಇನ್ನೊಬ್ಬರಿಗೆ ತಮ್ಮ ಲೈಫ್ ಸ್ಟೈಲ್ ಬಗ್ಗೆ ತಿಳಿಸುತ್ತಾರೆ. ಕೆಲವರು ನಿಜ ಸಂಗತಿಗಳನ್ನು ಸ್ಟೇಟಸ್ ಮೂಲಕ ತಿಳಿಸಿದ್ದರೆ, ಇನ್ನೂ ಕೆಲವರು  ಸಮಯ ಕಳೆಯುವುದಕ್ಕಾಗಿ ವಾಟ್ಸಾಪ್ ಸ್ಟೇಟಸ್ ಗಳನ್ನು ಅಪ್ಲೋಡ್‌ ಮಾಡುತ್ತೇವೆ.

ನಿಮ್ಮ  ಲೈಫ್‌ ಸ್ಟೈಲ್‌ ಸ್ಟೇಟಸ್‌ ಮೂಲಕ ತೋರ್ಪಡಿಕೆ ಸರಿನಾ..?

ಕೆಲವರು ವಾಟ್ಸಾಪ್ ಸ್ಟೇಟಸ್ ಗೆ ಎಷ್ಟೊಂದು ಎಡಿಟ್ ಆಗಿದ್ದಾರೆ ಅಂದ್ರೆ, ಕುಂತರೂ.. ನಿಂತರೂ.. ಪ್ರತಿ ಘಳಿಗೆ ವಾಟ್ಸಪ್ ಸ್ಟೇಟಸ್ ಹಾಕಿ ಮೆಂಟಲ್ ಆಗಿ ಕುಗ್ಗಿರುತ್ತಾರೆ. ಇನ್ನೂ ಕೆಲವರು ತನ್ನ ಮಾನಸಿಕ ಸ್ಥಿರತೆಯನ್ನೇ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಒಂದು ದಿನ ಸ್ಟೇಟಸ್ ಹಾಕದಿದ್ದರೆ ತಾಳ್ಮೆಯನ್ನೇ ಕಳೆದುಕೊಳ್ಳುತ್ತಾರೆ. ತಾನು ಮೊಬೈಲ್ ಬಳಸಿ ಏನು ಪ್ರಯೋಜನ ಅಂತ ತನ್ನನ್ನು ತಾನೇ ಅಂದುಕೊಂಡು ಮನಸ್ಸಿಗೆ ಬೇಸರ ಮಾಡಿಕೊಳ್ಳುತ್ತಾರೆ. ಹೀಗಾಗಿ ಮೊಬೈಲ್ ಫೋನ್ ಎನ್ನುವುದು ಎಷ್ಟೊಂದು ಮಾರಕವೋ ಅಷ್ಟೇ ಉಪಯೋಗಕಾರಿಯಾಗಿದೆ. ಆದರೆ,ವಾಟ್ಸಪ್ ಸ್ಟೇಟಸ್ ಮೂಲಕ ತಮ್ಮ ವ್ಯಕ್ತಿತ್ವ ಪರಿಚಯ ಮಾಡಿಕೊಳ್ಳುವಂತಹ ವ್ಯಕ್ತಿಗಳು ಇಂದು ಸಾಕಷ್ಟು ಜನ ಇದ್ದಾರೆ ಅನ್ನೋದಂತು ಸತ್ಯ!

Are you complaining that you haven’t posted a WhatsApp status? Then be careful!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page