ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಊಟಕ್ಕೆ ಮೊದಲು ಬಿಸಿನೀರು ಕುಡಿದರೆ ಏನೆಲ್ಲಾ ಪ್ರಯೋಜನಗಳಿವೆ…?

ಆರೋಗ್ಯ : Tulu Times ನಮ್ಮ ದೇಹಕ್ಕೆ ಅತ್ಯಮೂಲ್ಯವಾಗಿ ಬೇಕಾಗಿರುವುದು ನೀರು. ದಿನಕ್ಕೆ ನೀವೆಷ್ಟು ನೀರು ಕುಡಿಯುತ್ತೀರಿ ? ಅಷ್ಟು ನೀವು ಆರೋಗ್ಯವಂತರಾಗಿರುತ್ತೀರಿ. ದೇಹದ ಸುಮಾರು 70% ಭಾಗವು ನೀರಿನಿಂದ ನಿರ್ಮಿತವಾಗಿದೆ. ನಮ್ಮ ದೇಹದ ಅಂಗಾಂಗಗಳ ಸರಿಯಾದ ಕಾರ್ಯನಿರ್ವಹಣೆ ಮತ್ತು ದೇಹದ ಉಷ್ಣತೆಯ ಸಮತೋಲನ ಕಾಪಾಡಲು ಪ್ರತಿದಿನ 2-3 ಲೀಟರ್ ನೀರು ಕುಡಿಯುವುದು ಅಗತ್ಯ ಎಂದು ವೈದ್ಯರು ಹೇಳುತ್ತಾರೆ.

ಅದರಲ್ಲೂ ನೀರಿನ ತಾಪಮಾನ ಪರಿಗಣಿಸಿದಾಗ, ಬಿಸಿನೀರು ಕುಡಿಯುವುದು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಕಾರಿಯಾಗಿದೆ ಎಂದು ಸಂಶೋಧನೆಗಳು ಸೂಚಿಸುತ್ತವೆ. ಅದು ಹೇಗೆಂದರೆ ; ತೂಕ ಇಳಿಸಲು ಪ್ರಯತ್ನಿಸುವವರು ಬಿಸಿನೀರು ಕುಡಿದಷ್ಟು ಒಳ್ಳೆಯದು. ಅಲ್ಲದೇ, ಊಟಕ್ಕೆ ಮುಂಚಿತವಾಗಿ 500 ಮಿಲಿ ಬಿಸಿನೀರು ಕುಡಿಯುವುದರಿಂದ ಚಯಾಪಚಯ ದರ ಶೇಕಡಾ 30 ರಷ್ಟು ತಾತ್ಕಾಲಿಕವಾಗಿ ಹೆಚ್ಚುತ್ತದೆ.

ಊಟಕ್ಕೆ ಅರ್ಧ ಗಂಟೆ ಮೊದಲು ಬಿಸಿನೀರು ಕುಡಿಯುವುದರಿಂದ ಹಸಿವು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಇನ್ನು ಜೀರ್ಣಾಂಗ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ, ದೇಹದ ತ್ಯಾಜ್ಯ ಮತ್ತು ವಿಷಕಾಂಶಗಳ ನಿರ್ಗಮನ ಸುಲಭವಾಗಿ ಆಗುತ್ತದೆ, ಒತ್ತಡ ಮತ್ತು ನೋವು ನಿವಾರಣೆಯಾಗುತ್ತದೆ, ರಕ್ತ ಪರಿಚಲನೆ ಉತ್ತಮಗೊಳ್ಳುವುದು, ಕರುಳಿನ ಚಲನೆಯನ್ನು ಉತ್ತೇಜಿಸಿ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ, ಶೀತ, ಕೆಮ್ಮು, ಗಂಟಲು ನೋವು, ಮೂಗು ಕಟ್ಟುವಿಕೆ ಇತ್ಯಾದಿ ಅನಾರೋಗ್ಯ ಸಂಬಂಧಿತವಾಗಿಯೂ ಸಹಾಯ ಮಾಡುತ್ತದೆ. What are the benefits of drinking water before meals – ತುಳು ಟೈಮ್ಸ್

ಇದನ್ನೂ ಓದಿ :ಮಂಗಳೂರಿನ ಹುಡುಗಿಯಾಗಿ ಮಿಂಚಲಿರುವ ಸುಷ್ಮಿತಾ ಭಟ್ ..ಕರಾವಳಿ ಸಿನಿಮಾದಲ್ಲಿ ಮೋಡಿ!

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page