ಸಿನೆಮಾ : Tulu Times | ಕಡಿಮೆ ಬಜೆಟ್ ನಲ್ಲಿ ಹೊಸ ಚಲಚಿತ್ರಗಳನ್ನು ವಿಭಿನ್ನ ರೀತಿಯಲ್ಲಿ ಹೊರ ತರುವ ಕೆಲಸವನ್ನು ಮಾಡುತ್ತಿರುವವರು ಕನ್ನಡದ ರಾಜ್ ಬಿ ಶೆಟ್ಟಿ. ನಟ, ನಿರ್ದೇಶಕ, ನಿರ್ಮಾಪಕ ಹೀಗೆ ಎಲ್ಲದರಲ್ಲೂ ತಮ್ಮ ಚಾಪನ್ನು ಮೂಡಿಸಿದ್ದು, ಹೆಚ್ಚಿನ ಕಥೆ, ಕಡಿಮೆ ಅಲಂಕಾರ ಎಂಬ ಶೈಲಿಯಲ್ಲಿ ಇವರು ಹೆಸರುವಾಸಿಯಾಗುತ್ತಿದ್ದಾರೆ. ಇದೀಗ ಸಿನೆಮಾ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಹೊಸ ಚಿತ್ರಗಳ ಮೂಲಕ ರಾಜ್ ಬಿ ಶೆಟ್ಟಿ ತಮ್ಮ ಲೈಟರ್ ಬುದ್ಧ ಫಿಲ್ಮ್ಸ್ ಸಂಸ್ಥೆಯಲ್ಲಿ ಯಶಸ್ಸಿನ ಹೆಜ್ಜೆಯನ್ನಿಡುತ್ತಿದ್ದಾರೆ.
‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆ ;
ಇತ್ತೀಚೆಗೆ ಕನ್ನಡ ಸಿನಿಮಾಗಳ ನಿರ್ಮಾಣ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳ ವಿತರಣೆಯಲ್ಲೂ ಈ ಸಂಸ್ಥೆ ಸೈ ಎನಿಸಿಕೊಂಡಿದೆ. ಈ ಮೊದಲು ಮಲಯಾಳಂ ಭಾಷೆಯ ‘ಲೋಕ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿ ರಾಜ್ ಬಿ. ಶೆಟ್ಟಿ ಲಾಭ ಮಾಡಿಕೊಂಡಿದ್ದರು. ಈಗ ಇನ್ನೊಂದು ಮಲಯಾಳಂ ಸಿನಿಮಾ ‘ಇಕೋ’ ಕೂಡ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾವನ್ನು ಕೂಡ ರಾಜ್ ಬಿ. ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆಯಲ್ಲೇ ಬಂದಿರುವುದಾಗಿದೆ.
ನವೆಂಬರ್ 21ರಂದು ‘ಇಕೋ’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾಗೆ ಅತ್ಯುತ್ತಮ ವಿಮರ್ಶೆಗಳು ಸಿಕ್ಕಿವೆ. ‘ಲೋಕಃ’ ಸಿನಿಮಾ ರೀತಿಯೇ ‘ಇಕೋ’ ಸಿನಿಮಾ ಕೂಡ ಭರ್ಜರಿಯಾಗಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ. ವಾರಾಂತ್ಯದಲ್ಲಿ ಕರ್ನಾಟಕದಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ಒಟ್ಟಿನಲ್ಲಿ ರಾಜ್ ಬಿ. ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆಯು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಈ ಸಂಸ್ಥೆಯ ಪಾಲಿಗೆ 2025 ಭಾರಿ ಸಕ್ಸಸ್ ತಂದುಕೊಟ್ಟಿರುವ ವರ್ಷ. ಇದೇ ಬ್ಯಾನರ್ ಮೂಲಕ ನಿರ್ಮಾಣ ಆಗಿದ್ದ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿರುವುದು ಹೆಮ್ಮೆಯ ವಿಷಯ. Raj B Shetty on the road to success – ತುಳು ಟೈಮ್ಸ್
ಇದನ್ನೂ ಓದಿ :ನಂದಮೂರಿ ಬಾಲಕೃಷ್ಣ ಅಖಂಡ-2 ಟ್ರೇಲರ್ ಲಾಂಚ್…ಶಿವರಾಜ್ ಕುಮಾರ್ ಶುಭ ಹಾರೈಕೆ!
===========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=ObNSLQyYyGZeCQlp











