RDI Scheme : ಕಳೆದ ಕೆಲವು ದಶಕಗಳಿಂಧ ಭಾರತದ ಸಂಶೋಧನಾ ಕ್ಷೇತ್ರ ಅತ್ಯುತ್ತಮ ಬೆಳವಣಿಗೆಯಾಗುತ್ತಿದ್ದು, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೃಷಿ, ಬಾಹ್ಯಾಕಾಶ, ಡಿಜಿಟಲ್ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಲೇ ಬಂದಿದೆ. ಇದರಲ್ಲಿ ಸರ್ಕಾರ ಸೇರಿದಂತೆ ಖಾಸಗಿ ವಲಯ, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್ಅಪ್‌ಗಳು ಮತ್ತು ಸಂಶೋಧನಾ ಸಂಸ್ಥೆಗಳ ಭಾಗವಹಿಸುವಿಕೆಯೂ ಪ್ರಮುಖವಾಗಿದೆ. ಇದೀಗ ಬಂದಿರುವ ವರದಿಯ ಪ್ರಕಾರ, ಅನುಸಂಧಾನ್ ನ್ಯಾಶನಲ್ ರೀಸರ್ಚ್ ಫೌಂಡೇಶನ್ (ಎಎನ್‌ಆರ್‌ಎಫ್) ಮೂಲಕ ಭಾರತ ಸರ್ಕಾರವು ಸಂಶೋಧನೆ, ಅಭಿವೃದ್ಧಿ ಹಾಗೂ ನಾವಿನ್ಯತೆಯ ಯೋಜನೆಯಡಿ (ಆರ್‌ಡಿಎಫ್) ದೇಶದ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಗೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು 1 ಲಕ್ಷ ಕೋಟಿ ರೂ.ಮೊತ್ತದ ಔಟ್ ಲೇ ಗೆ ಚಾಲನೆ ನೀಡಲಾಗಿದೆ. ಇದರಿಂದ ಖಾಸಗೀ ವಲಯದ ಸಂಶೋಧನೆಗಳು, ಅಭಿವೃದ್ಧಿ ಹಾಗೂ ನಾವೀನ್ಯತೆಯಲ್ಲಿ ಹೆಚ್ಚಿನ ಹೂಡಿಯನ್ನು ಉತ್ತೇಜಿಸುವುದು ಪ್ರಮುಖ ಉದ್ದೇಶವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ‘ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2025’ರ ವೇಳೆ ಈ ಯೋಜನೆಗೆ ಚಾಲನೆ ನೀಡಿದ್ದು, ಈ ಸಮಾವೇಶವು ಇಂದಿನಿ0ದ (ನವೆಂಬರ್ 3) ನವೆಂಬರ್ 5ರವರೆಗೆ ನಡೆಯಲಿದೆ.
ಈ ಸಮಾವೇಶದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಲಿದ್ದು, ಸುಮಾರು 3 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು, ವಿಜ್ಞಾನಿಗಳು, ನೋಬೆಲ್ ಪ್ರಶಸ್ತಿ ವಿಜೇತರು ಜೊತೆಗೂಡಲಿದ್ದಾರೆ. ಅಲ್ಲದೇ ಪ್ರಮುಖ 11 ವಿಷಯಾಧಾರಿತ ಕ್ಷೇತ್ರಗಳ ಬಗ್ಗೆ ನಡೆಯುವ ಚರ್ಚೆಗಳ ಬಗ್ಗೆ ಗಮನ ಹರಿಸಲಾಗುತ್ತದೆ ಎಂದು ವರದಿಯಾಗಿದೆ.
ಈ ಯೋಜನೆಯ ಮುಖ್ಯ ಗುರಿಯು ಹಣಕಾಸು ಕೊರತೆಯನ್ನು ನಿವಾರಿಸುವುದು, ತಾಂತ್ರಿಕ ಸ್ವಾವಲಂಬನೆಯನ್ನು ಉತ್ತೇಜಿಸುವುದು ಹಾಗೂ ಪ್ರಮುಖ ತಂತ್ರಜ್ಞಾನಗಳಲ್ಲಿ ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ದೃಢಗೊಳಿಸುವುದಾಗಿದೆ. ಈಗಷ್ಟೇ ಜಾರಿಗೊಳಿಸದ 1ಲಕ್ಷ ಕೋಟಿ ಮೊತ್ತದ ಯೋಜನೆಯಡಿಯಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರ, ಜೈವಿಕ ತಂತ್ರಜ್ಞಾನ ಹಾಗೂ ಉತ್ಪಾದನೆ, ಫಾರ್ಮಾ ಮತ್ತು ವೈದ್ಯಕೀಯ ಉಪಕರಣ, ಕ್ವಾಂಟಮ್ ಕಂಪ್ಯೂಟಿ0ಗ್, ರೋಬೋಟಿಕ್ಸ್, ಅಂತರಿಕ್ಷ ತಂತ್ರಜ್ಞಾನಗಳು, ಇಂಧನ ಭದ್ರತೆ, ಹವಾಮಾನ ಕ್ರಮ, ಡಿಜಿಟಲ್ ಕೃಷಿ ಇತ್ಯಾದಿ ವಿಷಯಗಳು ಸೇರಿದಂತೆ ಡಿಜಿಟಲ್ ಆರ್ಥಿಕತೆಯ ಬಗ್ಗೆಯೂ ಉತ್ತೇಜನ ನೀಡಲಾಗುವುದು ಎಂದು ವರದಿಯಾಗಿದೆ.
ಇದನ್ನೂ ಓದಿ : BBK12: ಗಿಲ್ಲಿ ನಟನ ಕಾಮಿಡಿ ಮೋಡಿಗೆ ಜನ ಗೆಲ್ಲಿಸ್ತಾರಾ…?
……
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/FMZ3FR3jlrk?si=wTpwwQeZBjnS-vDL











