ಬ್ರೇಕಿಂಗ್ ನ್ಯೂಸ್
ಸುಳ್ಯ

ಸುಳ್ಯ : ಜು.20ರಂದು ಸುಳ್ಯದಲ್ಲಿ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜರಿಗೆ ನುಡಿನಮನ

ಸುಳ್ಯ : Tulu Times l ತೂಗು ಸೇತುವೆಗಳ ನಿರ್ಮಾಣದ ಮೂಲಕ ದೇಶಾದ್ಯಂತ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜರ ಸೇವೆ, ಸಾಧನೆ ಹಾಗೂ ಆದರ್ಶಗಳನ್ನು ಸ್ಮರಿಸುವ ‘ಗಿರೀಶ ಸ್ಮೃತಿ ಸೇತು – ಸೇವೆ, ಸಾಧನೆ ಮತ್ತು ಆದರ್ಶಗಳಿಗೆ ನಮನ’ ಕಾರ್ಯಕ್ರಮ ಜುಲೈ 20ರಂದು (ಸೋಮವಾರ) ಸುಳ್ಯದ ಕುಂಭಕೋಡಿನಲ್ಲಿರುವ ಕಸ್ತೂರಿ ಅಚ್ಯುತ ಭಟ್–ಶಶಿಕಲಾ ಮಂದಿರದಲ್ಲಿ ನಡೆಯಿತು.

ಜುಲೈ 7ರಂದು ನಿಧನರಾದ ಡಾ. ಗಿರೀಶ್ ಭಾರದ್ವಾಜರ ಸಮಾಜಮುಖಿ ಕಾರ್ಯಗಳು, ಗ್ರಾಮೀಣಾಭಿವೃದ್ಧಿಗೆ ಅವರು ನೀಡಿದ ಕೊಡುಗೆ ಹಾಗೂ ಸರಳ ಜೀವನಶೈಲಿಯನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಈ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ‌ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭಗೊಂಡಿದ್ದು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜಮುಖಿಗಳು, ಅಭಿಮಾನಿಗಳು ಹಾಗೂ ಅವರೊಂದಿಗೆ ಕೆಲಸ ಮಾಡಿದವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಡಾ. ಗಿರೀಶ್ ಭಾರದ್ವಾಜರ ಜೀವನಯಾನ, ತೂಗು ಸೇತುವೆಗಳ ನಿರ್ಮಾಣದಲ್ಲಿ ಅವರ ಅಪೂರ್ವ ಸಾಧನೆ, ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಅವರು ವಹಿಸಿದ ಮಹತ್ವದ ಪಾತ್ರ ಹಾಗೂ ಯುವಜನತೆಗೆ ಅವರು ನೀಡಿರುವ ಸ್ಫೂರ್ತಿದಾಯಕ ಸಂದೇಶಗಳ ಕುರಿತು ವಿಚಾರ ಮಂಡನೆ ನಡೆಯಿತು.

ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಡಾ. ಗಿರೀಶ್ ಭಾರದ್ವಾಜರು ದೇಶದ ವಿವಿಧ ರಾಜ್ಯಗಳಲ್ಲಿ ನೂರಾರು ತೂಗು ಸೇತುವೆಗಳನ್ನು ನಿರ್ಮಿಸಿ ಸಾವಿರಾರು ಗ್ರಾಮಸ್ಥರಿಗೆ ಸುರಕ್ಷಿತ ಸಂಚಾರದ ಸೌಲಭ್ಯ ಕಲ್ಪಿಸಿದ್ದರು. ಅವರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಕುಟುಂಬಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ನುಡಿನಮನ ಕಾರ್ಯಕ್ರಮದ ಬಳಿಕ ಎಲ್ಲರಿಗೂ ಸಹಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Sullia: Tribute to Padma Shri Dr. Girish Bharadwaj in Sullia on July 20. – ತುಳುಟೈಮ್ಸ್

ಇದನ್ನೂ ಓದಿ :ಸುಳ್ಯದಲ್ಲಿ ಯಕ್ಷಗಾನದ ರಂಗು: ‘ಭೃಗು ಶಾಪ’ ತಾಳಮದ್ದಳೆಗೆ ಭರ್ಜರಿ ಸ್ಪಂದನೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/68z-YcCrQ0o

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 8

You cannot copy content of this page