ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಸರ್ಪ್ರೈಸ್; ಒಂದೇ ಫೋಟೋ ವದಂತಿಗಳಿಗೆ ತೆರೆ

ಚೆನ್ನೈ: Tulu Times l ನಟಿ ತ್ರಿಷಾ ಕೃಷ್ಣನ್ ಅವರು ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಹುಟ್ಟುಹಬ್ಬದ ಶುಭಾಶಯವನ್ನು ವಿಶೇಷ ರೀತಿಯಲ್ಲಿ ತಿಳಿಸುವ ಮೂಲಕ ಇತ್ತೀಚೆಗೆ ಹರಿದಾಡುತ್ತಿದ್ದ ‘ಬ್ರೇಕಪ್’ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಜೂನ್ 22ರಂದು ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅಭಿಮಾನಿಗಳು, ರಾಜಕೀಯ ಮುಖಂಡರು ಹಾಗೂ ಸಿನಿರಂಗದ ಅನೇಕ ಗಣ್ಯರು ಅವರಿಗೆ ಶುಭಾಶಯ ಕೋರಿದ್ದರು. ಆದರೆ ತ್ರಿಷಾ ಅವರಿಂದ ಯಾವುದೇ ಶುಭಾಶಯ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಕಾಣಿಸದ ಕಾರಣ, ಇಬ್ಬರ ನಡುವಿನ ಸಂಬಂಧದ ಬಗ್ಗೆ ಹಲವು ಊಹಾಪೋಹಗಳು ಹರಿದಾಡಿದ್ದವು.

ಇದೀಗ ತ್ರಿಷಾ, ವಿಜಯ್ ಅವರೊಂದಿಗೆ ಕೇಕ್ ಕತ್ತರಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ತ್ರಿಷಾ ನಗುತ್ತಾ ವಿಜಯ್ ಅವರತ್ತ ನೋಡುತ್ತಿರುವ ದೃಶ್ಯ ಕಾಣಿಸುತ್ತದೆ. ಈ ಸಂದರ್ಭ ತ್ರಿಷಾ ಅವರು ವಿಜಯ್‌ಗಾಗಿ ಐದು ಕೇಕ್‌ಗಳನ್ನು ತಂದಿದ್ದರೆಂದು ವರದಿಯಾಗಿದೆ. ಫೋಟೋಗೆ ತಮ್ಮ ಶುಭಾಶಯವನ್ನು ವಿಶಿಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ತ್ರಿಷಾ ನಡುವಿನ ಆಪ್ತತೆಯ ಕುರಿತು ಹಲವು ವದಂತಿಗಳು ಹರಿದಾಡುತ್ತಿವೆ. ಇಬ್ಬರೂ ಹಲವು ಕಾರ್ಯಕ್ರಮಗಳಿಗೆ ಒಟ್ಟಿಗೆ ಆಗಮಿಸಿದ್ದನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧದ ಬಗ್ಗೆ ಊಹಾಪೋಹಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ತ್ರಿಷಾ ಹಂಚಿಕೊಂಡಿರುವ ಈ ಹೊಸ ಫೋಟೋ ಇದೀಗ ಮತ್ತೆ ಅಭಿಮಾನಿಗಳ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Trisha surprises Vijay on his birthday; a single photo sparks rumors – ತುಳುಟೈಮ್ಸ್

ಇದನ್ನೂ ಓದಿ :ನವಿಲು ಗರಿಗಳ ಬಳಕೆ ಆರೋಪ; ಕಿಶನ್ ಬಿಳಗಿ, ನಿವೇದಿತಾ ಗೌಡ ಸಂಕಷ್ಟದಲ್ಲಿ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/BXNKWtQqyvQ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page