ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನವಿಲು ಗರಿಗಳ ಬಳಕೆ ಆರೋಪ; ಕಿಶನ್ ಬಿಳಗಿ, ನಿವೇದಿತಾ ಗೌಡ ಸಂಕಷ್ಟದಲ್ಲಿ

ಬೆಂಗಳೂರು: Tulu Times l ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ನವಿಲು ಗರಿಗಳ ಉಡುಪು ಧರಿಸಿದ ರೀಲ್ಸ್‌ಗಳ ಹಿನ್ನೆಲೆಯಲ್ಲಿ ಡ್ಯಾನ್ಸರ್, ನಟ ಕಿಶನ್ ಬಿಳಗಿ ಮತ್ತು ಮಾಜಿ ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಬೆಂಗಳೂರು ಪ್ರಾದೇಶಿಕ ನಗರ ಅರಣ್ಯ ವಿಭಾಗಕ್ಕೆ ದೂರು ನೀಡಿ, ಇಬ್ಬರೂ ಬಳಸಿರುವ ನವಿಲು ಗರಿಗಳು ನಿಜವಾದವೆಯೇ ಅಥವಾ ಕೃತಕವೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ದೂರಿನ ಪ್ರಕಾರ, ಕಿಶನ್ ಬಿಳಗಿ ಹಾಗೂ ನಿವೇದಿತಾ ಗೌಡ ನವಿಲು ಗರಿಗಳಿಂದ ಅಲಂಕರಿಸಲಾದ ವೇಷಭೂಷಣದಲ್ಲಿ ನೃತ್ಯ ಮಾಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಗರಿಗಳು ನಿಜವಾಗಿದ್ದರೆ, ಅದು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಉಲ್ಲಂಘನೆಯಾಗಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಿನೇಶ್ ಕಲ್ಲಹಳ್ಳಿ ಅವರು ಅರಣ್ಯ ಇಲಾಖೆಗೆ ಸಲ್ಲಿಸಿರುವ ಮನವಿಯಲ್ಲಿ, ವೀಡಿಯೋ ಮತ್ತು ಫೋಟೋಗಳಲ್ಲಿ ಕಾಣುವ ಗರಿಗಳು ನಿಜವಾದವೇ ಅಥವಾ ಕೃತಕವೇ ಎಂಬುದನ್ನು ತಜ್ಞರಿಂದ ವೈಜ್ಞಾನಿಕವಾಗಿ ಪರೀಕ್ಷಿಸಬೇಕು. ಗರಿಗಳು ನಿಜವಾದವು ಎಂದು ದೃಢಪಟ್ಟರೆ ಅವುಗಳನ್ನು ಎಲ್ಲಿಂದ ಪಡೆದರು ಮತ್ತು ಯಾರು ಪೂರೈಕೆ ಮಾಡಿದರು ಎಂಬುದರ ಕುರಿತು ತನಿಖೆ ನಡೆಸಬೇಕು. ಕಾನೂನು ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಸಿದ್ಧ ವ್ಯಕ್ತಿಗಳು ಇಂತಹ ವನ್ಯಜೀವಿ ಉತ್ಪನ್ನಗಳನ್ನು ಬಳಸುವುದರಿಂದ ಸಾರ್ವಜನಿಕರಲ್ಲಿ ಅವುಗಳ ಬಳಕೆ ಸಾಮಾನ್ಯ ಎಂಬ ಭಾವನೆ ಮೂಡಬಹುದು. ಇದರಿಂದ ಅಕ್ರಮ ಬೇಟೆ ಮತ್ತು ವನ್ಯಜೀವಿ ಉತ್ಪನ್ನಗಳ ಕಳ್ಳಸಾಗಣೆಗೆ ಪರೋಕ್ಷ ಉತ್ತೇಜನ ಸಿಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ಸದ್ಯ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಕಿಶನ್ ಬಿಳಗಿ ಹಾಗೂ ನಿವೇದಿತಾ ಗೌಡ ಈ ಆರೋಪಗಳಿಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಮತ್ತು ಅಧಿಕೃತ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ ಎಂದು ವರದಿಯಾಗಿದೆ.

Accused of using peacock feathers; Kishan Bilagi, Nivedita Gowda in trouble – ತುಳುಟೈಮ್ಸ್

ಇದನ್ನೂ ಓದಿ :ಕುತ್ತಿಗೆ, ಬೆರಳು ಮುರಿಯುವ ಅಭ್ಯಾಸದ ಹಿಂದೆ ಅಡಗಿದೆ ಮಾನಸಿಕ ಕಾರಣ!

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/BXNKWtQqyvQ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page