ಬ್ರೇಕಿಂಗ್ ನ್ಯೂಸ್
ಕ್ರೀಡೆ

ಭಾರತ ಟಿ20 ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕ: ವೈಭವ್ ಸೂರ್ಯವಂಶಿಗೆ ಮೊದಲ ಅವಕಾಶ

ನವದೆಹಲಿ: Tulu Times l ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳು ಹಾಗೂ ಏಷ್ಯನ್ ಗೇಮ್ಸ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮಹತ್ವದ ಬದಲಾವಣೆಯಾಗಿ ಶ್ರೇಯಸ್ ಐಯರ್ ಅವರನ್ನು ಭಾರತದ ಹೊಸ ಟಿ20 ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಪ್ರಕಟವಾದ ತಂಡದಲ್ಲಿ, ಇದುವರೆಗೆ ಟಿ20 ತಂಡವನ್ನು ಮುನ್ನಡೆಸುತ್ತಿದ್ದ ಸೂರ್ಯಕುಮಾರ್ ಯಾದವ್ ಅವರಿಗೆ ಸ್ಥಾನವೇ ಸಿಗದಿರುವುದು ಅಚ್ಚರಿ ಮೂಡಿಸಿದೆ. ಯುವ ಆಟಗಾರ ತಿಲಕ್ ವರ್ಮ ಅವರನ್ನು ಟಿ20 ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ.

ಕೇವಲ 15 ವರ್ಷದ ಪ್ರತಿಭಾವಂತ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಐರ್ಲೆಂಡ್-ಇಂಗ್ಲೆಂಡ್ ಟಿ20 ಸರಣಿ ಹಾಗೂ ಏಷ್ಯನ್ ಗೇಮ್ಸ್ ಎರಡಕ್ಕೂ ಅವಕಾಶ ನೀಡಲಾಗಿದೆ. ಆಯ್ಕೆ ಸಮಿತಿ ಈ ಯುವ ಆಟಗಾರನ ಸಾಮರ್ಥ್ಯದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದು, ಅಂತರಾಷ್ಟ್ರೀಯ ವೇದಿಕೆಯಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬ ಕುತೂಹಲವಿದೆ ಎಂದು ತಿಳಿಸಿದೆ.

ವೇಗದ ಬೌಲರ್ ಜಾಸ್ಪ್ರಿತ್ ಬೂಮ್ರಾ ಅವರನ್ನು ಇಂಗ್ಲೆಂಡ್ ಮತ್ತು ಐರ್ಲೆಂಡ್ ಟಿ20 ಸರಣಿಗೆ ಆಯ್ಕೆ ಮಾಡಿಲ್ಲ. ಆದರೆ ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದೇ ರೀತಿ, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ಸರಣಿಗೆ ಪರಿಗಣಿಸಿಲ್ಲ. ಮುಂಬರುವ 50 ಓವರ್‌ಗಳ ವಿಶ್ವಕಪ್‌ಗಾಗಿ ಅವರನ್ನು ಸಂಪೂರ್ಣ ಫಿಟ್ ಆಗಿಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಜಿತ್ ಅಗರ್ಕರ್ ತಿಳಿಸಿದ್ದಾರೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ತಂಡ
ಶ್ರೇಯಸ್ ಅಯ್ಯರ್ (ನಾಯಕ)
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಶಿವಂ ದುಬೆ
ತಿಲಕ್ ವರ್ಮಾ (ಉಪನಾಯಕ)
ನಿತೀಶ್ ಕುಮಾರ್ ರೆಡ್ಡಿ
ಅಕ್ಷರ್ ಪಟೇಲ್
ವಾಷಿಂಗ್ಟನ್ ಸುಂದರ್
ವರುಣ್ ಚಕ್ರವರ್ತಿ
ರವಿ ಬಿಷ್ಣೋಯ್
ಮೊಹಮ್ಮದ್ ಸಿರಾಜ್
ಹರ್ಷಿತ್ ರಾಣಾ
ಅರ್ಷದೀಪ್ ಸಿಂಗ್
ಪ್ರಿನ್ಸ್ ಯಾದವ್
ವೈಭವ್ ಸೂರ್ಯವಂಶಿ

ಏಷ್ಯನ್ ಗೇಮ್ಸ್ ತಂಡ
ಶ್ರೇಯಸ್ ಅಯ್ಯರ್ (ನಾಯಕ)
ಸಂಜು ಸ್ಯಾಮ್ಸನ್
ಇಶಾನ್ ಕಿಶನ್
ಶಿವಂ ದುಬೆ
ತಿಲಕ್ ವರ್ಮಾ
ನಿತೀಶ್ ಕುಮಾರ್ ರೆಡ್ಡಿ
ಅಕ್ಷರ್ ಪಟೇಲ್
ವಾಷಿಂಗ್ಟನ್ ಸುಂದರ್
ವರುಣ್ ಚಕ್ರವರ್ತಿ
ರವಿ ಬಿಷ್ಣೋಯ್
ಹರ್ಷಿತ್ ರಾಣಾ
ಅರ್ಷದೀಪ್ ಸಿಂಗ್
ವೈಭವ್ ಸೂರ್ಯವಂಶಿ
ಜಸ್ಪ್ರೀತ್ ಬೂಮ್ರಾ
ಭಾರತದ ಟಿ20 ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.

Shreyas Iyer to captain India’s T20 team: Vaibhav Suryavanshi’s first chance – ತುಳು ಟೈಮ್ಸ್

ಇದನ್ನೂ ಓದಿ : ‘ಕಾಕ್‌ರೋಚ್ ಜನತಾ ಪಾರ್ಟಿ’ ಪ್ರತಿಭಟನೆ: ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/xI868u7lWtY?si=i372iy4gg17ZzHtB

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 6

You cannot copy content of this page