Mangalore : ಸಂಗೀತ ಕಲೆ ಅದು ಎಲ್ಲರಿಗೂ ಒಲಿಯುವಂತದಲ್ಲ. ನಿರಂತರ ಶ್ರಮ ಮತ್ತು ಕಲಿಕೆಯಿಂದ ಮಾತ್ರ ಒಬ್ಬ ಕಲೆಗಾರ ಸಾಧನೆ ಮಾಡಲು ಸಾಧ್ಯ. ಹೌದು… ಇಲ್ಲೊಬ್ಬ ವ್ಯಕ್ತಿ ಕೊಳಲು ನುಡಿಸುತ್ತಲೇ ಗೋಲ್ಡನ್ ಬುಕ್ ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿರುತ್ತಾನೆ. ಈತನ ಸಾಧನೆ ಸಾಮಾನ್ಯವಾದದಲ್ಲ. ಕೇವಲ ಕೊಳಲು ನುಡಿಸೋದಾದ್ರೆ ಯಾರೂ ಬೇಕಾದರೂ ಹೆಸರು ಮಾಡ್ಬೋದಿತ್ತು. ಆದರೆ ಈತನ ಸಾಧನೆ ಕೇಳಿದ್ರೆ ನೀವೇ ಆಶ್ಚರ್ಯಚಕಿತರಾಗುತ್ತೀರ.
ಮಂಗಳೂರಿನ ರೂಬನ್ ಜೇಸನ್ ಮಚಾದೊ ಅವರು ಸಂತ ಅಲೋಶಿಯಸ್ ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಸಂಗೀತಕ್ಕಾಗಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವಾತ ಬಾಲಿವುಡ್, ಸ್ಯಾಂಡಲ್ ವುಡ್, ಕೋಸ್ಟಲ್ ವುಡ್ ಚಲನಚಿತ್ರೋದ್ಯಮಗಳಲ್ಲಿ ಪ್ರದರ್ಶನ ಗಿಟ್ಟಿಸಿಕೊಳ್ಳುತ್ತಿರುವ ವೃತ್ತಿಪರ ಸಂಗೀತಗಾರರು. ಇದೀಗ 700 ಮೀ. ಗಳಿಗೂ ಅಧಿಕ, ಐದೂ ಕಾಲು ಸುತ್ತುಗಳ ಕಾಲ ಈಜುತ್ತಾ ಜೊತೆಗೆ ಬ್ಯಾಕ್ ಸ್ಟ್ರೋಕ್ ಶೈಲಿಯಲ್ಲಿ ಈಜಿಕೊಂಡು ಕೊಳಲು ನುಡಿಸುತ್ತಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೊಸ ದಾಖಲೆ ಮಾಡಿರುತ್ತಾರೆ.
ಇದು ನಿಜವಾದ ಸಾಧನೆ. ಏಕೆಂದರೆ, ವಿಶ್ವದ ಇತಿಹಾಸದಲ್ಲೇ ಇಲ್ಲಿಯ ತನಕ ಯಾರೂ ಕೂಡ ಈಜುಕೊಳದಲ್ಲಿ ಕೊಳಲು ನುಡಿಸುತ್ತಾ ಅದೂ ಕೂಡ ಬ್ಯಾಕ್ ಸ್ಟ್ರೋಕ್ ಶೈಲಿಯಲ್ಲಿ ಈ ದಾಖಲೆಗೆ ಸಮವಾದದ್ದು ಇನ್ನೂ ಎಲ್ಲಿಯೂ ದಾಖಲಾಗಿಲ್ಲ ಎಂದು ವರದಿಯಾಗಿರುತ್ತದೆ. ಇದರಲ್ಲಿ ಸಂಗೀತ ಮತ್ತು ಕ್ರೀಡೆಯ ಸಂಯೋಜನೆಯನ್ನು ಕಾಣಬಹುದಾಗಿದ್ದು, ಇವರು ಕೊಳಲು ವಾದನದ ಜೊತೆ, ಸಂಗೀತ, ಸ್ಯಾಕ್ಸೋಫೋನ್, ಗಿಟಾರ್ ಮುಂತಾದ ವಾದ್ಯಗಳನ್ನು ಬಾರಿಸುವಂತೆಯೂ ಪರಿಣತಿ ಹೊಂದಿರುತ್ತಾರೆ.
ಇದನ್ನೂ ಓದಿ :Sullia : ತಡವಾಗಿ ಆಗಮಿಸಿದ ಶಾಸಕರು : ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ವಿಳಂಬ
…………….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ ಕ್ಲಿಕ್ ಮಾಡಿ : https://youtu.be/fJYoyzVUVk0?si=FdkpMlvbhQJzD4sU











