ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಇಂಧನ ದರ ಏರಿಕೆ ಬೆನ್ನಲ್ಲೇ ಕರ್ನಾಟಕದಲ್ಲಿ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ

ಕರ್ನಾಟಕ : Tulu Times l ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಪರಿಣಾಮ ಇದೀಗ ಸಾರಿಗೆ ಕ್ಷೇತ್ರಕ್ಕೂ ತಟ್ಟಿದ್ದು, ಖಾಸಗಿ ಬಸ್ ಸಂಚಾಲಕರು ಟಿಕೆಟ್ ದರವನ್ನು ಶೇ.20ರಿಂದ 30ರವರೆಗೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಹೊಸ ದರಗಳು ಇಂದಿನ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ. ಖಾಸಗಿ ಬಸ್ ಮಾಲೀಕರ ಪ್ರಕಾರ, ಇಂಧನ ವೆಚ್ಚದಲ್ಲಿ ಭಾರೀ ಏರಿಕೆಯಾಗಿರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ. ದಿನನಿತ್ಯದ ಕಾರ್ಯಾಚರಣೆಗೆ ಹೆಚ್ಚಿನ ಪ್ರಮಾಣದ ಡೀಸೆಲ್ ಅಗತ್ಯವಿರುವುದರಿಂದ ನಷ್ಟ ತಪ್ಪಿಸಲು ದರ ಹೆಚ್ಚಳ ಮಾಡಲೇಬೇಕಾಗಿದೆ ಎಂದು ಹೇಳಲಾಗಿದೆ.

ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, ಬಹುತೇಕ ಖಾಸಗಿ ಬಸ್‌ಗಳು ಪ್ರತಿದಿನ ಕನಿಷ್ಠ 150 ಲೀಟರ್ ಡೀಸೆಲ್ ಬಳಸುತ್ತವೆ. ಇತ್ತೀಚಿನ ದರ ಏರಿಕೆಯ ನಂತರ ಪ್ರತಿ ಪ್ರಯಾಣಕ್ಕೆ ಸುಮಾರು ₹450 ಹೆಚ್ಚುವರಿ ವೆಚ್ಚ ಬರುತ್ತಿದೆ. ಹೀಗಾಗಿ ಟಿಕೆಟ್ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ಮಧ್ಯಪ್ರಾಚ್ಯದ ಭೌಗೋಳಿಕ ಉದ್ವಿಗ್ನತೆ ಹಿನ್ನೆಲೆ ದೇಶದಲ್ಲಿ ಇಂಧನ ದರ ಹೆಚ್ಚಳವಾಗಿತ್ತು. ಇದರ ಪರಿಣಾಮ ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಅಗತ್ಯ ವಸ್ತುಗಳ ವಿತರಣೆಯ ಮೇಲೂ ಪ್ರಭಾವ ಬೀರಿವೆ. ಟಿಕೆಟ್ ದರ ಏರಿಕೆಯಿಂದ ಸಾಮಾನ್ಯ ಪ್ರಯಾಣಿಕರು ಮತ್ತು ದೂರ ಪ್ರಯಾಣ ಮಾಡುವವರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿದ್ಯುತ್‌, ಎಲ್‌ಪಿಜಿ, ಹಾಲು ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಇದು ಮತ್ತೊಂದು ಹೊರೆ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಪ್ರತಿದಿನ ಕೆಲಸಕ್ಕಾಗಿ ಪ್ರಯಾಣಿಸುವ ನೌಕರರು ಮತ್ತು ವಿದ್ಯಾರ್ಥಿಗಳು ಸಾರಿಗೆ ವೆಚ್ಚ ಹೆಚ್ಚಳದಿಂದ ಕುಟುಂಬ ಬಜೆಟ್ ಮೇಲೆ ಒತ್ತಡ ಹೆಚ್ಚಲಿದೆ ಎಂದು ಹೇಳಿದ್ದಾರೆ.

Private bus ticket prices increase in Karnataka following fuel price hike – ತುಳುಟೈಮ್ಸ್

ಇದನ್ನೂ ಓದಿ :ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3ರೂ. ಏರಿಕೆ : ಹೊಸ ದರ ಜಾರಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ:https://www.youtube.com/live/4pEuD7fDOuo?si=jilSstwm801i_5Iq

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page