ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಶೆಟ್ಟಿ ಗ್ಯಾಂಗ್ ನಡುವೆ ಬಿರುಕು ಎಂಬ ವದಂತಿಗಳಿಗೆ ಯಾವುದೇ ಆಧಾರವಿಲ್ಲ : ಪ್ರಮೋದ್ ಶೆಟ್ಟಿ ಸ್ಪಷ್ಟನೆ

ಬೆಂಗಳೂರು : Tulu Times l ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಚರ್ಚೆಗೆ ಗ್ರಾಸವಾದ ವಿಷಯವೆಂದರೆ, ಶೆಟ್ಟಿ ಗ್ಯಾಂಗ್ ನಡುವೆ ಬಿರುಕು ಮೂಡಿದೆಯೇ? ಎಂಬ ಪ್ರಶ್ನೆ. ವಿಶೇಷವಾಗಿ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಹಾಗೂ ರಾಜ್‌ ಬಿ ಶೆಟ್ಟಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದ ನಂತರ ಈ ವದಂತಿಗಳಿಗೆ ಇನ್ನಷ್ಟು ಬಲ ಸಿಕ್ಕಿತ್ತು.

ಈ ವಿಚಾರದ ಬಗ್ಗೆ ಇದೀಗ ನಟ ಪ್ರಮೋದ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಟಿವಿ9 ಕನ್ನಡದೊಂದಿಗೆ ಮಾತನಾಡಿದ ಅವರು, ‘ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ, ಎಲ್ಲವೂ ಸರಿಯಾಗಿಯೇ ಇದೆ: ಎಂದು ಹೇಳಿದ್ದಾರೆ.

ಯಾವುದೇ ಬಿರುಕು ಇಲ್ಲ ;

ಪ್ರಮೋದ್ ಶೆಟ್ಟಿ ಅವರು ಹೇಳುವಂತೆ, ಈ ಸುದ್ದಿಗಳು ಹೊರಬರುವ ಮುನ್ನವೇ ಅವರು ರಿಷಬ್ ಅವರನ್ನು ಭೇಟಿ ಮಾಡಿದ್ದರು. “ನನ್ನನ್ನೂ ಅನ್‌ಫಾಲೋ ಮಾಡಲಾಗಿದೆ, ಆದರೆ ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಮ್ಮ ಸಂಬಂಧ ಅದಕ್ಕಿಂತ ದೊಡ್ಡದು” ಎಂದು ಅವರು ತಿಳಿಸಿದ್ದಾರೆ. ಅವರು ಸ್ಪಷ್ಟವಾಗಿ ಹೇಳಿದ್ದು, ರಿಷಬ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಮತ್ತು ಇತರರು ಪರಸ್ಪರ ಸಂಪರ್ಕದಲ್ಲಿಯೇ ಇದ್ದಾರೆ. ಯಾವುದೇ ತಪ್ಪು ಅರ್ಥೈಸಿಕೆ ಇಲ್ಲ ಎಂದು ಹೇಳಿದ್ದಾರೆ.

 ಸೋಶಿಯಲ್ ಮೀಡಿಯಾ ನಿರ್ವಹಣೆ ಕಾರಣ?

ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಅನ್‌ಫಾಲೋ ಮಾಡುವ ವಿಚಾರವನ್ನು ಅವರು ಹೆಚ್ಚು ಮಹತ್ವ ಕೊಡಬಾರದು ಎಂದು ಸಲಹೆ ನೀಡಿದ್ದಾರೆ. ದೊಡ್ಡ ಮಟ್ಟದ ನಟರ ಖಾತೆಗಳನ್ನು ಸಾಮಾನ್ಯವಾಗಿ ಪ್ರೊಫೆಷನಲ್ ತಂಡಗಳು ನಿರ್ವಹಿಸುತ್ತವೆ. ಫಾಲೋ ಮಾಡುವ ಖಾತೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಂಡಿರಬಹುದು ಎಂದು ಅವರು ತಿಳಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಅನ್‌ಫಾಲೋ ಬಗ್ಗೆ ಮಾತನಾಡಿದ ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ತಮ್ಮದೇ ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣದತ್ತ ಗಮನ ಹರಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ನಿರ್ಮಾಣದಿಂದ ದೂರ ಉಳಿದಿದ್ದ ಅವರು, ಇದೀಗ ಮತ್ತೆ ಆ ಕ್ಷೇತ್ರದಲ್ಲಿ ಸಕ್ರಿಯರಾಗಲು ತೀರ್ಮಾನಿಸಿದ್ದಾರೆ. ಹೊಂಬಾಳೆ ವಿಚಾರದ ಬಗ್ಗೆ ರಿಷಬ್ ನಂತರ ವಿವರವಾಗಿ ಮಾತನಾಡುವುದಾಗಿ ತಿಳಿಸಿದ್ದಾರೆ ಎಂಬುದನ್ನೂ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ, ಶೆಟ್ಟಿ ಗ್ಯಾಂಗ್ ನಡುವೆ ಬಿರುಕು ಎಂಬ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟವಾಗಿದೆ. ಸೋಶಿಯಲ್ ಮೀಡಿಯಾ ಚಟುವಟಿಕೆಗಳನ್ನು ಆಧರಿಸಿ ನಿರ್ಧಾರಕ್ಕೆ ಬಾರದಂತೆ ಪ್ರಮೋದ್ ಶೆಟ್ಟಿ ಸೂಚಿಸಿದ್ದು, ಸ್ನೇಹ ಮತ್ತು ಸಂಬಂಧಗಳು ಇನ್ನೂ ಬಲವಾಗಿವೆ ಎಂಬ ಸಂದೇಶ ನೀಡಿದ್ದಾರೆ.

There is no basis for rumors of a rift within the Shetty gang: Pramod Shetty clarifies – ತುಳುಟೈಮ್ಸ್

ಇದನ್ನೂ ಓದಿ :ಭಾರೀ ಸಂಚಲನ ಮೂಡಿಸುತ್ತಿದೆ ‘ರಾಮಾಯಣ’ ಚಿತ್ರದ‌ ಟೀಸರ್

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/2AWkk7R62HI?si=-ZUw6MHb8Hryl_C6

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page