ಬೆಳ್ತಂಗಡಿ: Tulu Times l ಏಪ್ರಿಲ್ 02 ರಿಂದ 10 ರವರೆಗೆ ನಡೆಯಲಿರುವ ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವು ಏಪ್ರಿಲ್ 01 ರಂದು ಸದಾಶಿವ ದೇವಸ್ಥಾನದಲ್ಲಿ ನಡೆಯಿತು.
ದೇವಾಲಯದ ಒಳಾಂಗಣ ಹಾಗೂ ಹೊರಾಂಗಣ ಸ್ವಚ್ಛಗೊಳಿಸಲಾಯಿತು. ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ನಿರುಂಬುಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಮೈರೋಳ್ತಡ್ಕ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಚಂದ್ರಕಲಾ, ಅರ್ಚಕರು, ಜಾತ್ರೋತ್ಸವ ಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು, ಸರ್ವ ಸದಸ್ಯರು ಭಕ್ತಭಿಮಾನಿಗಳು ಉಪಸ್ಥಿತರಿದ್ದರು.
Bandar: Cleanliness program for the celebration of the holy festival of Kuraya Sri Sadashiva Devara and the fair – ತುಳುಟೈಮ್ಸ್
ಇದನ್ನೂ ಓದಿ :ಮದುವೆ ಮಂದಿರಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ: ಬೆಂಗಳೂರಿನಲ್ಲಿ ಕಠಿಣ ಕ್ರಮ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/2AWkk7R62HI?si=aeusXYUc_plgF9Qz











