ಬ್ರೇಕಿಂಗ್ ನ್ಯೂಸ್
ದೇಶ

ಇಲ್ಲಿದೆ ನೋಡಿ ಮಾನವ ಸಹಾಯವಿಲ್ಲದೆ ನೇರವಾಗಿ ಸಿಲಿಂಡರ್ ಪಡೆಯುವ ವ್ಯವಸ್ಥೆ !

ನವದೆಹಲಿ : Tulu Times l ದೇಶದ ಹಲವಾರು ನಗರಗಳಲ್ಲಿ ಎಲ್‌ಪಿಜಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಜನರಿಗೆ ತಕ್ಷಣದ ಗ್ಯಾಸಿನ ಲಭ್ಯತೆ ಕಲ್ಪಿಸಲು ಹೊಸ ಪ್ರಯತ್ನವಾಗಿ ಭಾರತದ ಮೊದಲ ಎಲ್‌ಪಿಜಿ ಅನ್ನು ಗುರುಗ್ರಾಮ್ ನಲ್ಲಿ ಪ್ರಾರಂಭಿಸಲಾಗಿದೆ.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಗಳಿಂದ ಇಂಧನ ಸರಬರಾಜು ಸರಪಳಿಗೆ ಅಡಚಣೆ ಉಂಟಾಗಿದೆ. ಇದರಿಂದ ಕಚ್ಚಾ ತೈಲ ಮತ್ತು ಗ್ಯಾಸಿನ ಆಮದು ಮೇಲೆ ಪರಿಣಾಮ ಬಿದ್ದ ಹಿನ್ನೆಲೆಯಲ್ಲಿ, ಗುಜರಾತ್, ವಾರಣಾಸಿ

ಪ್ರದೇಶಗಳಲ್ಲಿ ಗ್ಯಾಸಿನ ಸಿಲಿಂಡರ್‌ ವಿತರಣೆ 7 ರಿಂದ 10 ದಿನಗಳವರೆಗೆ ವಿಳಂಬವಾಗುತ್ತಿದೆ‌ ಈ ಕಾರಣಕ್ಕಾಗಿ ಹೊಸ ಯೋಜನೆಯನ್ನು ತಂದಿರುವುದು ದೇಶದ ಮೊದಲ ಎಟಿಎಂ ಎಲ್ ಪಿಜಿ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.

ಭಾರತ ಪೆಟ್ರೋಲಿಯಂ ನಿಗಮ ಲಿಮಿಟೆಡ್ ಪರಿಚಯಿಸಿದ ಎಲ್‌ಪಿಜಿ ಎಟಿಎಂ ಒಂದು ಸ್ವಯಂಚಾಲಿತ ಯಂತ್ರವಾಗಿದೆ.

ಇದರ ಮೂಲಕ: 5 ಕೆಜಿ ಸಣ್ಣ ಸಿಲಿಂಡರ್ ಖರೀದಿ ಸಾಧ್ಯ.

24×7 ಸೇವೆ ಲಭ್ಯ, ನಗದು ಅಥವಾ ಡಿಜಿಟಲ್ ಪಾವತಿ ಹಾಗೂ ಮಾನವ ಸಹಾಯವಿಲ್ಲದೇ ನೇರವಾಗಿ ಸಿಲಿಂಡರ್ ಪಡೆಯುವ ವ್ಯವಸ್ಥೆ ಇದಾಗಿದೆ. ಈ ವ್ಯವಸ್ಥೆ ವಿಶೇಷವಾಗಿ ವಿದ್ಯಾರ್ಥಿಗಳು,‌ ಬಾಡಿಗೆ ಮನೆಯಲ್ಲಿ ಇರುವ ಉದ್ಯೋಗಿಗಳು, ತುರ್ತು ಪರಿಸ್ಥಿತಿಯಲ್ಲಿ ಗ್ಯಾಸಿನ ಅವಶ್ಯಕತೆ ಇರುವ ಕುಟುಂಬಗಳಿಗೆ ಸಹಕಾರಿಯಾಗಲಿದೆ.

ಗುರ್ಗಾಂವಿನಲ್ಲಿ ಯಶಸ್ವಿಯಾಗಿ ಆರಂಭವಾದ ಬಳಿಕ, ಈ ಎಲ್‌ಪಿಜಿ ಎಟಿಎಂ ವ್ಯವಸ್ಥೆಯನ್ನು ದೆಹಲಿ, ಮುಂಬೈ ಹಾಗೂ ಇತರ ಪ್ರಮುಖ ನಗರಗಳಿಗೆ ವಿಸ್ತರಿಸುವ ಯೋಜನೆ ಇದೆ. ಒಟ್ಟಾರೆಯಾಗಿ ಹೇಳೋದಾದ್ರೆ, ಎಲ್‌ಪಿಜಿ ಕೊರತೆಯಿಂದ ಉಂಟಾದ ಸಮಸ್ಯೆಗೆ ಎಲ್‌ಪಿಜಿ ಎಟಿಎಂ ಒಂದು ಹೊಸ ಮತ್ತು ತ್ವರಿತ ಪರಿಹಾರವಾಗಿ ಹೊರಹೊಮ್ಮುತ್ತಿದೆ. ಭವಿಷ್ಯದಲ್ಲಿ ಇದು ಗ್ಯಾಸಿನ ಸರಬರಾಜು ವ್ಯವಸ್ಥೆಯನ್ನು ಸುಧಾರಿಸುವ ಮಹತ್ವದ ಹೆಜ್ಜೆಯಾಗುವ ಸಾಧ್ಯತೆ ಇದೆ.

Here is a system to get cylinders directly without human help! – ತುಳುಟೈಮ್ಸ್

ಇದನ್ನೂ ಓದಿ :ತುಮಕೂರಿನಲ್ಲಿ ಐತಿಹಾಸಿಕ ಕ್ಷಣವಾಗಲಿರುವ ಐಟಿಎಫ್ ಮೊದಲ ಮಹಿಳಾ ಟೆನ್ನಿಸ್ ಟೂರ್ನಿ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/p4-vd_M93Z8?si=byobNMp4WPx20SEK

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 18

You cannot copy content of this page